More

    ತಿಪ್ಪೇರುದ್ರಸ್ವಾಮಿ ದೇಗುಲದ ಹುಂಡಿ ಎಣಿಕೆ ಆರಂಭ

    ನಾಯಕನಹಟ್ಟಿ: ಪಟ್ಟಣದ ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವಾಲಯದ ಹುಂಡಿ ಎಣಿಕೆ ಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.

    ವಾರ್ಷಿಕ ಮಹಾಜಾತ್ರೆಯ ನಂತರ ಹುಂಡಿ ಎಣಿಕೆ ಕಾರ್ಯ ನಡೆಸುವ ಪ್ರತೀತಿ ಇತ್ತು. ಆದರೆ ಈ ವರ್ಷ ಕರೊನಾ ಕಾರಣಕ್ಕೆ ಮಾರ್ಚ್ ಅಂತ್ಯದವರೆಗೆ ದೇಗುಲಕ್ಕೆ ಬಾಗಿಲು ಹಾಕಲಾಗಿತ್ತು. ಇಂದು ಜಿಲ್ಲಾಧಿಕಾರಿ ಆದೇಶದ ಮೇರೆಗೆ ಹುಂಡಿ ಹಣ ಎಣಿಕೆ ಕಾರ್ಯ ಆರಂಭಿಸಲಾಯಿತು. ಮೇ 7 ರವರೆಗೆ ಎಣಿಕೆ ನಡೆಯಲಿದೆ.

    ಹೊರಮಠದ ನಾಲ್ಕು ಹುಂಡಿಗಳ ಎಣಿಕೆ ಪೂರ್ಣವಾಗಿದೆ. ಇವುಗಳಲ್ಲಿ 7,80,210, ಒಳಮಠದ 12 ಹುಂಡಿಗಳಲ್ಲಿ 5 ಹುಂಡಿ ಎಣಿಕೆ ಮಾಡಲಾಗಿದ್ದು 12,04,428 ಲಕ್ಷ ರೂ. ಸೇರಿ ಒಟ್ಟು 19,84,638 ರೂ. ಸಂಗ್ರಹವಾಗಿದೆ. 7 ಹುಂಡಿಗಳ ಎಣಿಕೆ ನಡೆಯಬೇಕಿದೆ.

    ದೇವಾಲಯ ಸಮಿತಿ ಅಧ್ಯಕ್ಷ ಜೆ.ಪಿ. ರವಿಶಂಕರ್, ಕಾರ್ಯನಿರ್ವಹಣಾಧಿಕಾರಿ ಎಸ್.ಪಿ.ಬಿ. ಮಹೇಶ್, ಸದಸ್ಯರಾದ ಹಂಸವೇಣಿ, ಲಲಿತಮ್ಮ, ಕೆ. ನಾಗಪ್ಪ, ಎಸ್.ವಿ. ತಿಪ್ಪೇಸ್ವಾಮಿ ರೆಡ್ಡಿ, ಮುನಿಯಪ್ಪ, ಗೋವಿಂದರಾಜ್, ರುದ್ರಮುನಿ, ಉಪ ತಹಸೀಲ್ದಾರ್ ಟಿ. ಜಗದೀಶ್, ದೇವಾಲಯದ ಸಿಬ್ಬಂದಿ ಸತೀಶ್, ಕಂದಾಯ ನಿರೀಕ್ಷಕ ಚೇತನ್ ಮಹಾಸ್ವಾಮಿ, ಪುರಂದರ, ಪ್ರಸನ್ನ, ಗ್ರಾಮ ಲೆಕ್ಕಾಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts