More

    ಗುರು ತಿಪ್ಪೇರುದ್ರಸ್ವಾಮಿ ಓಕಳಿ ಸಂಭ್ರಮ

    ನಾಯಕನಹಟ್ಟಿ: ಇಲ್ಲಿನ ಗುರು ತಿಪ್ಪೇರುದ್ರಸ್ವಾಮಿ ಒಳಮಠದಲ್ಲಿ ಶುಕ್ರವಾರ ರಾತ್ರಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಓಕಳಿ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.

    ಮಾ.12ರಂದು ನಡೆದ ಉತ್ಸವದಲ್ಲಿ ಲಕ್ಷಾಂತರ ಭಕ್ತರು ರಥೋತ್ಸವ ಮತ್ತು ದೇವರನ್ನು ಕಣ್ತುಂಬಿಕೊಂಡಿದ್ದರು. ಇದರಿಂದ ದೇವರಿಗೆ ದೃಷ್ಟಿಯಾಗಿರುತ್ತದೆ ಎಂಬ ನಂಬಿಕೆಯಿಂದ ಅರಿಶಿನ ಮತ್ತು ಎಣ್ಣೆ ನೀರಿನಿಂದ ತಯಾರಿಸಿದ ಓಕಳಿ ಹಾಕಲಾಗುತ್ತದೆ.

    ಐದು ಮಣ್ಣಿನ ಮಡಿಕೆಯಲ್ಲಿ ಓಕಳಿ ನೀರನ್ನು ಸಿದ್ಧಪಡಿಸಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಲಾಯಿತು. ನಂತರ ಹೂವಿನ ಚಪ್ಪರದ ಮಂಚದಲ್ಲಿ ಕುಳಿತ ತಿಪ್ಪೇರುದ್ರಸ್ವಾಮಿಗೆ ಓಕಳಿ ಹಾಕುವ ಮೂಲಕ ಉತ್ಸವ ಆರಂಭಿಸಲಾಯಿತು. ದೇವಾಲಯದ ಪ್ರಾಂಗಣದಲ್ಲಿ ನೆರೆದ ಭಕ್ತರು ಸಾಮೂಹಿಕವಾಗಿ ಅರಿಶಿಣದ ಓಕಳಿ ನೀರು ಎರಚಿ ಕುಣಿದು ಕುಪ್ಪಳಿಸಿದರು. ಮಹಿಳೆಯರು, ಮಕ್ಕಳು, ಯುವತಿಯರು, ದೈವಸ್ಥರು, ಗ್ರಾಮಸ್ಥರು ಭಾಗವಹಿಸಿದ್ದರು.

    ಸಿಂಗರಿಸಿದ ಪಲ್ಲಕ್ಕಿಯಲ್ಲಿ ದೇವರ ಉತ್ಸವಮೂರ್ತಿ ಪ್ರತಿಷ್ಠಾಪಿಸಿ ಪಾದಗಟ್ಟೆಗೆ ಕರೆತರಲಾಯಿತು. ರಾತ್ರಿ ಇಡೀ ಪಾದಗಟ್ಟೆಯ ಬಳಿ ದೂರದೂರುಗಳಿಂದ ಬಂದ ಸಾಧುಸಂತರು, ಭಕ್ತರು, ಹಾಡು ಭಜನೆಯ ಮೂಲಕ ದೇವರನ್ನು ಕೊಂಡಾಡಿ ಹರ್ಷ ವ್ಯಕ್ತಪಡಿಸಿದರು. ಭಾನುವಾರ ಬೆಳಗ್ಗೆ 5 ಗಂಟೆಗೆ ಮಹಾಮಂಗಳಾರತಿ ನೆರವೇರಿಸಿ ದೇವರಿರುವ ಪಲ್ಲಕ್ಕಿಯನ್ನು ಹೊರಮಠಕ್ಕೆ ಹೊತ್ತು ತರಲಾಯಿತು. ಹೊರಮಠದಲ್ಲಿ ದೇವರಿಗೆ ಸಂಪ್ರದಾಯದಂತೆ ಪೂಜೆ ಕಾರ್ಯಗಳು ನಡೆಸಿ ಓಕಳಿನ್ನು ಹಾಕಲಾಯಿತು.

    ದೈವಸ್ಥ ರುದ್ರಮುನಿ, ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜೆ.ಪಿ.ರವಿಶಂಕರ್, ಸದಸ್ಯರಾದ ಗೋವಿಂದರಾಜ್, ರುದ್ರಮುನಿ, ಹಂಸವೇಣಿ, ಲಲಿತಮ್ಮ, ಮುನಿಯಪ್ಪ, ನಾಗಪ್ಪ, ಎಸ್.ವಿ.ಟಿ.ರೆಡ್ಡಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts