More

    ಕುಂಬಾರಿಕೆಗೆ ಜೀವಕಳೆ; ಮಡಿಕೆಗೂ ಬಂತು ಆಧುನಿಕ ವಿದ್ಯುತ್ ಚಾಲಿತ ಯಂತ್ರ

    ಬಾಗಲಕೋಟೆ: ಬೇಸಿಗೆ ಬಂತೆಂದರೆ ಸಾಕು ಕುಂಬಾರ ನೆನಪಾಗುತ್ತಾನೆ. ಬಡವರ ಫ್ರಿಜ್ ಎನ್ನುವ ಕುಂಬಾರರು ತಯಾರಿಸಿದ ಮಣ್ಣಿನ ಮಡಿಕೆಗಳಿಗೆ ಮಾರುಕಟ್ಟೆಯಲ್ಲಿ ತನ್ನದೆ ಆಗಿರುವ ಬೇಡಿಕೆ ಇದೆ. ಮೊದಲೆಲ್ಲ ತಿರುಗಿಸುವ ಚಕ್ರದಲ್ಲಿ ಮಣ್ಣಿನಿಂದ ಮಾಡಿದ ಮಡಿಕೆ  ಮಾಡುತ್ತಿದ್ದ ಕುಂಬಾರ ಕೈಗೆ ಇದೀಗ ಮಡಿಕೆ ತಯಾರಿಸುವ ವಿದ್ಯುತ್​​ ಚಾಲಿತ ಯಂತ್ರ ಬಂದಿದೆ.

    ಕುಂಬಾರಿಕೆಗೂ ಆಧುನಿಕ ವಿದ್ಯುತ್ ಚಾಲಿತ ಯಂತ್ರ ಬಂದಿದೆ. ಅಮೀನಗಡ ಗ್ರಾಮದಲ್ಲಿ ಕುಂಬಾರಿಕೆ ವೃತ್ತಿ ಕೌಶಲ್ಯ ಅಭಿವೃದ್ದಿ ತರಬೇತಿ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಗ್ರಾಮೋದ್ಯೋಗ ವಿಕಾಸ ಯೋಜನೆ ಅಡಿಯಲ್ಲಿ ತರಬೇತಿ ನೀಡಲಾಗುತ್ತಿದೆ. ಕುಂಬಾರ ಸಮುದಾಯದ 20 ಜನರಿಗೆ ತರಬೇತಿ ಜತೆಗೆ ಉಚಿತವಾಗಿ ವಿದ್ಯುತ್ ಚಾಲಿತ ಯಂತ್ರ ವಿತರಣೆ ಮಾಡಲಾಗುತ್ತಿದೆ.

    ಕುಂಬಾರಿಕೆಗೆ ಜೀವಕಳೆ; ಮಡಿಕೆಗೂ ಬಂತು ಆಧುನಿಕ ವಿದ್ಯುತ್ ಚಾಲಿತ ಯಂತ್ರ

    ಮೊದಲೆಲ್ಲ ತಿರುಗಿಸುವ ಚಕ್ರದಲ್ಲಿ ಮಣ್ಣಿನಿಂದ ಮಾಡಿದ ಮಡಿಕೆ ಹಾಗು ಇನ್ನಿತರ ವಸ್ತುಗಳನ್ನು ತಯಾರಿಸಲಾಗುತ್ತಿತ್ತು. ಇದರಿಂದ ಅಧಿಕ‌ ಸಮಯ ಹಾಗೂ ಸೂಕ್ತ ದುಡಿಮೆ ಇಲ್ಲದೇ ಜೀವನಾಂಶಕ್ಕೆ ತೊಂದ್ರೆ ಆಗುತ್ತಿತ್ತು. ಈಗ ಕರಕುಶಲ ಕಸಬುಗಳ ಪ್ರೋತ್ಸಾಹಕ್ಕೆ ಕೇಂದ್ರ ಈ ಯೋಜನೆ ಜಾರಿಗೆ ತಂದಿದೆ. ಯಂತ್ರದ ಸಹಾಯದಿಂದ ಮಣ್ಣಿನ ಮಡಿಕೆ, ಪಾತ್ರೆ, ಪಣತೆ, ಹೂವಿನ ಕುಂಡಲಿ, ಸಣ್ಣ ಸಣ್ಣ ಮಗಿ ಮತ್ತಿತರ ವಸ್ತುಗಳ ತಯಾರಿಕೆ ಮಾಡಬಹುದಾಗಿದೆ.

    ಕುಂಬಾರಿಕೆಗೆ ಜೀವಕಳೆ; ಮಡಿಕೆಗೂ ಬಂತು ಆಧುನಿಕ ವಿದ್ಯುತ್ ಚಾಲಿತ ಯಂತ್ರ

    ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಹಾಗೂ ಮರಡಿ ಗ್ರಾಮಗಳಲ್ಲಿ ತರಬೇತಿ ನೀಡಲಾಗುತ್ತಿದೆ. 20 ಜನ ಕುಂಬಾರರ ಕುಟುಂಬದ ತರಬೇತಿ ಪಡೆಯುತ್ತಿದೆ.ಹತ್ತು ದಿನಗಳ ತರಬೇತಿ ಬಳಿಕ ವಿದ್ಯುತ್ ಚಾಲಿತ ಯಂತ್ರ ಫಲಾನುಭವಿಗಳಿಗೆ ವಿತರಣ ಮಾಡಲಾಗುತ್ತದೆ.

    ಕುಂಬಾರಿಕೆಗೆ ಜೀವಕಳೆ; ಮಡಿಕೆಗೂ ಬಂತು ಆಧುನಿಕ ವಿದ್ಯುತ್ ಚಾಲಿತ ಯಂತ್ರ

    ಕೇಂದ್ರ ಸರ್ಕಾರದ ಯೋಜನೆ ಸಾವಿರಾರು ಕುಂಬಾರ ಕುಟುಂಬದ ಸ್ವತಂತ್ರ ಉದ್ಯೋಗಕ್ಕೆ ಪ್ರೋತ್ಸಾಹ ಹಾಗೂ ಕರಕುಶಲ ವಸ್ತುಗಳ ತಯಾರಿಕೆಗೆ ನೆರವು ನೀಡಿದಂತಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts