More

    ಸೋಂಕಿತ ವ್ಯಕ್ತಿ ಚಿಕಿತ್ಸೆಗೆ ವಿರೋಧ

    ನಾಯಕನಹಟ್ಟಿ: ಕರೊನಾ ಸೋಂಕಿತ ವ್ಯಕ್ತಿಗೆ ಇಲ್ಲಿನ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದಕ್ಕೆ ವಿರೋಧಿಸಿ ಬುಧವಾರ ರಾತ್ರಿ ಸಾರ್ವಜನಿಕರು ದಿಢೀರ್ ಪ್ರತಿಭಟನೆ ನಡೆಸಿದರು.

    ಉತ್ತರ ಪ್ರದೇಶದ ವಲಸೆ ಕಾರ್ಮಿಕರನ್ನು ಚಳ್ಳಕೆರೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು. ಜಿಲ್ಲಾಮಟ್ಟದ ರ‌್ಯಾಪಿಡ್ ರೆಸ್ಪಾನ್ಸ್ ಟೀಂ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಆರೋಗ್ಯ ಇಲಾಖೆಯ ಡಿ ಗ್ರೂಪ್ ನೌಕರ ಅವರೊಂದಿಗೆ ಸಂಪರ್ಕದಲ್ಲಿದ್ದರಿಂದ ಸೋಂಕು ತಗುಲಿದೆ. ಅವರಿಗೆ ಇಲ್ಲಿನ ಕರೊನಾ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಆಂಬುಲೆನ್ಸ್ ಆಸ್ಪತ್ರೆಗೆ ಪ್ರವೇಶ ಮಾಡದಂತೆ ಗೇಟ್ ಮುಚ್ಚಿದ ಪಪಂ ಕೌನ್ಸಿಲರ್‌ಗಳು, ಸಾರ್ವಜನಿಕರು ಪ್ರತಿಭಟನೆ ನಡೆಸಿದರು.

    ಕೌನ್ಸಿಲರ್ ಎಸ್.ಉಮಾಪತಿ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಕರೊನಾ ಆಸ್ಪತ್ರೆಯಿದೆ. ಅಲ್ಲಿ ದಾಖಲಾಗಿದ್ದವರು ಚೇತರಿಸಿಕೊಂಡು ಹಿಂದಿರುಗಿದ್ದಾರೆ. ಅಲ್ಲಿನ ಆಸ್ಪತ್ರೆ ಖಾಲಿಯಿದ್ದರೂ ಇಲ್ಲಿಗೆ ಸೋಂಕಿತರನ್ನು ಕರೆತರುವುದು ಸರಿಯಲ್ಲ. ಇಲ್ಲಿ ಆರಂಭಿಸಲಾಗಿರುವ ಕರೊನಾ ಕೇರ್ ಸೆಂಟರ್ ನಾಮಕಾವಾಸ್ತೆಗೆ ಮಾತ್ರ ಇದೆ. ಇಲ್ಲಿನ ಸಿಬ್ಬಂದಿಗೆ ಸೌಲಭ್ಯ ಒದಗಿಸಿಲ್ಲ ಎಂದು ದೂರಿದರು.

    ಅಂತಿಮವಾಗಿ ನಿರ್ಧಾರ ಬದಲಿಸಿದ ಜಿಲ್ಲಾ ಸರ್ವೇಕ್ಷಾಣಾಧಿಕಾರಿ ಡಾ.ತುಳಸಿರಂಗನಾಥ್, ಸೋಂಕಿತನನ್ನು ಕೋವಿಡ್ ಜಿಲ್ಲಾಸ್ಪತ್ರೆಗೆ ಕಳಿಸುವುದಾಗಿ ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.

    ಸ್ಥಳಕ್ಕೆ ಪಿಎಸ್‌ಐ ರಘುನಾಥ್ ಭೇಟಿ ನೀಡಿದರು. ಕೌನ್ಸಿಲರ್‌ಗಳಾದ ಜಿ.ಆರ್.ರವಿಕುಮಾರ್, ಮನ್ಸೂರ್, ಮುಖಂಡರಾದ ಯೂಸೂಫ್, ಶ್ರೀಕಾಂತ್, ಪಂಚಾಕ್ಷರಿಸ್ವಾಮಿ, ಜೆ.ಟಿ.ಎಸ್.ತಿಪ್ಪೇಸ್ವಾಮಿ, ಜಯದೇವ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts