ನಾಯಕನಹಟ್ಟಿ: ದೇಶದ ಯುವಜನತೆ ಹೊಸ ರೀತಿಯ ಚಿಂತನೆ ಆಲೋಚನೆ ರೂಢಿಸಿಕೊಂಡು ವಿವೇಕಾನಂದರ ಆದರ್ಶ ಪಾಲಿಸಿರಿ ಎಂದು ಪಟ್ಟಣದ ನಿವಾಸಿ ಎಚ್.ಒ.ಶ್ವೇತಾ ತಿಳಿಸಿದರು.
ವಿದ್ಯಾವಿಕಾಸ ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಚಿಕಾಗೋದಲ್ಲಿ ಮಾಡಿದ ಕೇವಲ ಒಂದು ಭಾಷಣ ಅವರನ್ನು ಪ್ರಖ್ಯಾತರನ್ನಾಗಿಸಿತು. ಕಾರಣ ಅವರಲ್ಲಿನ ಹೊಸ ಚಿಂತನೆ ಮಾತು ಎಂದು ಹೇಳಿದರು.
ಇಂದಿನ ವಿದ್ಯಾರ್ಥಿಗಳು ಹಾಗೂ ಯುವಕರು ಚಲನಚಿತ್ರ ಹಾಗೂ ಕ್ರಿಕೆಟ್ ಸ್ಟಾರ್‌ಗಳನ್ನು ತಮ್ಮ ರೋಲ್ ಮಾಡೆಲ್‌ಗಳಾಗಿ ಅನುಸರಿಸುತ್ತಿರುವುದು ಸರಿಯಲ್ಲ. ಇದಕ್ಕೆ ಬದಲಾಗಿ ಸಾಧಕರು, ಸಂತರ ಆದರ್ಶ ಅನುಸರಿಸಬೇಕು ಎಂದು ಕಿವಿಮಾತು ಹೇಳಿದರು.
ಮುಖ್ಯಶಿಕ್ಷಕಿ ಟಿ.ರೂಪಾ, ಸಿದ್ದೇಶ್, ಸುಜಯ್, ಮಹಾಂತೇಶ್ ಮತ್ತಿತರರಿದ್ದರು.