More

    ಬರವಣಿಗೆ ಕೌಶಲದಿಂದ ಹೆಚ್ಚು ಅಂಕ

    ನಾಯಕನಹಟ್ಟಿ: ಬರವಣಿಗೆ ಕೌಶಲ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ಸಹಕಾರಿಯಾಗುತ್ತವೆ ಎಂದು ಎಕ್ಸ್‌ಪರ್ಟ್ ಹ್ಯಾಂಡ್‌ರೈಟಿಂಗ್ ಸಂಸ್ಥೆ ಮುಖ್ಯಸ್ಥ ಶ್ರೇಯಸ್ ಆಚಾರ್ಯ ಹೇಳಿದರು.

    ವಿದ್ಯಾವಿಕಾಸ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ರೈಟಿಂಗ್ ಗ್ಯಾಲರಿ ಉದ್ಘಾಟಿಸಿ ಮಾತನಾಡಿ, ಓದುವುದು ಹಾಗೂ ಬರೆಯುವುದು ಶಿಕ್ಷಣದ ಪ್ರಾಥಮಿಕ ಅಗತ್ಯ. ಪರೀಕ್ಷೆಗಳಲ್ಲಿ ಉತ್ತಮ ಬರವಣಿಗೆ ಮೌಲ್ಯಮಾಪಕರಲ್ಲಿ ಸಂತಸ ಉಂಟುಮಾಡುತ್ತದೆ ಎಂದರು.

    ಮಹಾತ್ಮ ಗಾಂಧೀಜಿ ಅವರು ಬಾಲ್ಯದಲ್ಲಿ ಉತ್ತಮ ಹಸ್ತಾಕ್ಷರ ಅಭ್ಯಾಸ ಮಾಡಿಲ್ಲದಿರುವುದರ ಕುರಿತು ಆತ್ಮಕಥೆಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಅವರು ದಕ್ಷಿಣ ಆಫ್ರಿಕಾಗೆ ತೆರಳಿದಾಗ ಅಲ್ಲಿನ ವಕೀಲರ ಉತ್ತಮ ಬರವಣಿಗೆ ನೋಡಿ ಸಂತಸಪಟ್ಟಿದ್ದರು ಎಂದು ಹೇಳಿದರು.

    ಶಿಕ್ಷಕ ರಾಜಣ್ಣ ಮಾತನಾಡಿ, ಇಂಗ್ಲಿಷ್ ಹಾಗೂ ಕನ್ನಡ ಭಾಷೆಗಳಲ್ಲಿ ಬರವಣಿಗೆ ಅತ್ಯಂತ ಪ್ರಮುಖ ಕೌಶಲವಾಗಿದೆ. ಕನ್ನಡ ಕಲಿಕೆಗೆ ದುಂಡಾದ ಅಕ್ಷರಗಳು ಅಗತ್ಯ. ಆದರೆ, ಇಂಗ್ಲೀಷ್ ಬರವಣಿಗೆಯಲ್ಲಿ ನೇರ, ವಕ್ರ ಹಾಗೂ ಓರೆ ಗೆರೆಗಳ ಅಗತ್ಯವಿದೆ ಎಂದರು.

    ಮುಖ್ಯಶಿಕ್ಷಕರಾದ ಟಿ.ರೂಪಾ, ಎ.ಉಮಾ, ಆಡಳಿತ ಮಂಡಳಿ ಸದಸ್ಯ ಬಿ.ಎಂ.ಮಹಾಬಲೇಶ್ವರ ಸ್ವಾಮಿ, ಶಿಕ್ಷಕರಾದ ಅಭಿಷೇಕ್, ಡಿ.ಎಸ್.ಸುಜಯ್, ಕೆ.ಸಿ.ತಿಪ್ಪೇಸ್ವಾಮಿ, ಎಂ.ಆರ್.ಸಿದ್ದೇಶ್ ಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts