More

    ಕೂಜಿಮಲೆಯಲ್ಲಿ ನಕ್ಸಲರ ಓಡಾಟ ದೃಢ

    ಮಡಿಕೇರಿ:

    ಶನಿವಾರ (ಮಾ.17) ಸಂಜೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕೂಜಿಮಲೆಗೆ ನಕ್ಸಲರು ಬಂದಿದ್ದು, ಅಲ್ಲಿಯ ಅಂಗಡಿಯೊAದರಲ್ಲಿ ದಿನಸಿ ಸಾಮಾನು ಖರೀದಿಸಿದ್ದಲ್ಲದೆ ತಮ್ಮ ಹೋರಾಟ ಬೆಂಬಲಿಸುವAತೆ ಬೆದರಿಕೆ ಹಾಕಿದ್ದಾರೆ ಎಂದು ಕೊಡಗು ಎಸ್.ಪಿ. ಕೆ. ರಾಮರಾಜನ್ ತಿಳಿಸಿದ್ದಾರೆ. ನಕ್ಸಲರ ಚಟುವಟಿಕೆ ಕಂಡು ಬಂದ ಪ್ರದೇಶ ಕೊಡಗಿಗೆ ಸೇರಿದ್ದರೂ ಮಡಿಕೇರಿಯಿಂದ ಇಲ್ಲಿಗೆ ನೇರ ಸಂಪರ್ಕ ಇಲ್ಲ. ದಕ್ಷಿಣ ಕನ್ನಡದ ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶಕ್ಕಾಗಿ ಸುಮಾರು 100 ಕಿಮೀ ತೆರಳಬೇಕು. ಇಲ್ಲೊಂದು ರಬ್ಬರ್ ಎಸ್ಟೇಟ್ ಇದ್ದು, ವಿವಿಧ ರಾಜ್ಯಗಳ 100ಕ್ಕೂ ಅಧಿಕ ಕಾರ್ಮಿಕರು ಈ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಅನುಕೂಲಕ್ಕಾಗಿ ಈ ಪ್ರದೇಶದಲ್ಲಿ ಅಂಗಡಿಯೊAದನ್ನು ವ್ಯಕ್ತಿಯೊಬ್ಬರು ತೆರೆದಿದ್ದು, ನಕ್ಸಲರು ಇದೇ ಅಂಗಡಿಗೆ ಬಂದಿದ್ದರು ಎಂದು ಮಂಗಳವಾರ ತಮ್ಮ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    ಇಬ್ಬರು ಮಹಿಳೆಯುರು ಸೇರಿದಂತೆ ನಾಲ್ವರು ಶಸ್ತçಧಾರಿಗಳು ಅಂಗಡಿಗೆ ಬಂದು ತಾವು ಮಾವೋವಾದಿ ನಕ್ಸಲರ್ ಎಂದು ಪರಿಚಯಿಸಿಕೊಂಡಿದ್ದಾರೆ. ಬಡವರ ಪರ ಹೋರಾಟ ಮಾಡುತ್ತಿದ್ದು, ಈ ಹೋರಾಟಕ್ಕೆ ಬೆಂಬಲ ಕೊಡಬೇಕು ಎಂದು ಅಂಗಡಿಯವರಿಗೆ ಬೆದರಿಕೆ ರೂಪದಲ್ಲಿ ಒತ್ತಾಯಿಸಿದ್ದಾರೆ. ಅಕ್ಕಿ, ಸಕ್ಕರೆ ಸೇರಿದಂತೆ ದಿನಸಿ ವಸ್ತುಗಳನ್ನು ನಗದು ಕೊಟ್ಟು ಖರೀದಿಸಿ ಅರಣ್ಯದೊಳಕ್ಕೆ ಮರೆಯಾಗಿದ್ದಾರೆ. ಅಂಗಡಿಗೆ ಬಂದಿದ್ದ ನಾಲ್ವರು ಕೂಡ ಸ್ಪಷ್ಟ ಕನ್ನಡದಲ್ಲಿ ಮಾತನಾಡುತ್ತಿದ್ದರು. ಅಂಗಡಿಯಾತ ಹೇಳಿದ ಗುರುತಿನ ಆಧಾರದಲ್ಲಿ ನಾಲ್ವರ ಗುಂಪಿನಲ್ಲಿ ಇದ್ದವರ ಪೈಕಿ ಒಬ್ಬಾತ ವಿಕ್ರಂ ಗೌಡ ಎನ್ನುವುದು ಖಚಿತವಾಗಿದೆ. ಉಳಿದವರ ಗುರುತು ಪತ್ತೆ ಹಚ್ಚಲು ಪ್ರಯತ್ನ ಮುಂದುವರಿಸಲಾಗಿದೆ.

    ಈ ಬೆನ್ನಲ್ಲೇ ನಕ್ಸಲ್ ಚಟುವಟಿಕೆ ಕಂಡುಬAದಿರುವ ಪ್ರದೇಶದಲ್ಲಿ ಕೂಂಬಿAಗ್ ಚುರುಕು ಮಾಡಲಾಗಿದೆ. ನಕ್ಸಲ್ ನಿಗ್ರಹ ಪಡೆ ಮುಖ್ಯಸ್ಥ ಜಿತೇಂದ್ರ ಕುಮಾರ್ ದಯಾಮ ನೇತೃತ್ವದಲ್ಲಿ 40 ಜನರ ತಂಡ ಕೂಂಬಿAಗ್ ನಡೆಸುತ್ತಿದೆ. ಈ ಪ್ರದೇಶ ದಟ್ಟ ಕಾಡಾಗಿರುವ ಕಾರಣದಿಂದ ಶ್ವಾನ ದಳವನ್ನೂ ಬಳಸಿಕೊಳ್ಳಲಾಗುತ್ತಿದೆ. ಬೆಟ್ಟಗುಡ್ಡ ಸೇರಿದಂತೆ ಕಠಿಣ ಸವಾಲಿನ ಪ್ರದೇಶಗಳಲ್ಲಿ ಕಾರ್ಯಾಚರಣೆಯ ತರಬೇತಿ ಪಡೆದವರೂ ಕೂಂಬಿAಗ್ ತಂಡದಲ್ಲಿ ಇದ್ದಾರೆ.

    ನಕ್ಸಲರು ಯಾವ ಪ್ರದೇಶದಿಂದ ಇಲ್ಲಿಗೆ ಬಂದಿರಬಹುದು ? ಮುಂದೆ ಅವರ ಪ್ರಯಾಣ ಯಾವ ಕಡೆಗೆ ಹೋಗಿದೆ ? ತಂಡದಲ್ಲಿ ನಾಲ್ವರು ಮಾತ್ರ ಇದ್ದಾರಾ ? ಅಥವಾ ಹೆಚ್ಚು ಜನರು ಇದ್ದಾರಾ ? ಮತ್ತಿತರ ವಿಷಯಗಳ ಬಗ್ಗೆಯೂ ಗಮನ ಕೇಂದ್ರೀಕರಿಸಲು ಗುಪ್ತಚರ ವ್ಯವಸ್ಥೆಯನ್ನು ಅಲರ್ಟ್ ಮಾಡಲಾಗಿದೆ. ಅಗತ್ಯ ಬಿದ್ದರೆ ಎಎನ್‌ಎಫ್‌ಗೆ ಇನ್ನೂ ಹೆಚ್ಚಿನ ಸಿಬ್ಬಂದಿ ಕರೆಯಿಸಿಕೊಳ್ಳಲಾಗುವುದು. ಆದರೆ ಇದು ದಟ್ಟ ಕಾಡಿನ ಪ್ರದೇಶ ಆಗಿರುವುದರಿಂದ ಹೆಚ್ಚಿನ ಸಿಬ್ಬಂದಿ ಇದ್ದರೆ ಅಷ್ಟಾಗಿ ಪ್ರಯೋಜನ ಆಗುವುದಿಲ್ಲ. ಬದಲಿಗೆ ಮಾಹಿತಿಗಳನ್ನೂ ಕ್ರೋಢೀಕರಿಸಿ ಅವುಗಳ ಆಧಾರದಲ್ಲಿ ಕಾರ್ಯಾಚರಣೆಗೆ ಆದ್ಯತೆ ಕೊಡಲಾಗಿದೆ.
    ಲೋಕಸಭಾ ಚುನಾವಣೆ ಇರುವಾಗಲೇ ನಕ್ಸಲ್ ಚಟುವಟಿಕೆ ಕಂಡುಬAದಿರುವುದರಿAದ ಸ್ಥಳೀಯರಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗಿದೆ. ಶಸ್ತçಧಾರಿಗಳು ಅಥವಾ ಅಪರಿಚಿತರು ತಮ್ಮ ಪ್ರದೇಶದಲ್ಲಿ ಕಂಡು ಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ಕೊಡಬೇಕು. ಸಾರ್ವಜನಿಕರು ಯಾವುದೇ ಕಾರಣಕ್ಕೂ ಹೆದರುವ ಅಗತ್ಯವಿಲ್ಲ. ಸರ್ಕಾರ ಮತ್ತು ಪೊಲೀಸ್ ಇಲಾಖೆ ಸದಾ ಕಾಲ ರಕ್ಷಣೆಗಾಗಿ ಇರುತ್ತದೆ. ನಕ್ಸಲ್ ಚಟುವಟಿಕೆಗೆ ಸಂಬAಧಿಸಿದAತೆ 2018ರಲ್ಲಿ ಕೊಡಗಿನಲ್ಲಿ ಪ್ರಕರಣ ದಾಖಲಾಗಿತ್ತು. ಅದರ ನಂತರ ಈಗ ಈ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts