More

    ಮಕ್ಕಳಿಗೆ ಕನ್ನಡ ಭಾಷೆಯ ಅರಿವು ಅಗತ್ಯ

    ಉಡುಪಿ: ಮಕ್ಕಳಿಗೆ ಕನ್ನಡ ಭಾಷೆ ಹಾಗೂ ಈ ಭಾಷೆಯ ವಿಶೇಷತೆಯ ಮಾಹಿತಿ ನೀಡಲು ಹಾಗೂ ಕನ್ನಡದ ನಾಡು-ನುಡಿ ಅರಿವು ಮೂಡಿಸುವ ಸಲುವಾಗಿ ಬೇಸಿಗೆ ಶಿಬಿರ ಆಯೋಜಿಸಲಾಗಿದೆ. ಇದಕ್ಕಾಗಿಯೇ ನಾಡಿನ ಹಿರಿಯ ಸಂಪನ್ಮೂಲ ವ್ಯಕ್ತಿಗಳು ಆಗಮಿಸಿದ್ದು, ಆಟದ ಮೂಲಕ ಮಕ್ಕಳಿಗೆ ಈ ಶಿಬಿರದಲ್ಲಿ ಹೊಸ ಬಗೆಯ ಶಿಕ್ಷಣ ಕಲಿಸಲಾಗುವುದು ಎಂದು ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್​ ಎಚ್​.ಪಿ. ತಿಳಿಸಿದರು.

    ಉಡುಪಿಯ ಕುಂಜಿಬೆಟ್ಟು ಪರಿಸರದ ಐಡನ್​ ಸ್ಟೆ ಹೋಮ್​ನಲ್ಲಿ ಕನ್ನಡ ಸಾಹಿತ್ಯ ಪರಿಷತ್​ ಉಡುಪಿ ತಾಲೂಕು ಘಟಕ ಹಾಗೂ ಸುನಾಗ್​ ಆಸ್ಪತ್ರೆ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ನವ್ಯಹಿತ ಬೇಸಿಗೆ ಶಿಬಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಖ್ಯಾತ ಜಾದೂಗಾರ ಪ್ರೊ.ಶಂಕರ್​ ಶಿಬಿರ ಉದ್ಘಾಟಿಸಿ, ಮಕ್ಕಳಿಗೆ ಶುಭ ಹಾರೈಸಿದರು. ಪರಿಸರ ಪ್ರೇಮಿ ತೇಜಸ್ವಿ ಆಚಾರ್ಯ, ಪ್ರಸಿದ್ಧ ಜಾದೂಗಾರ ಜೂ. ಶಂಕರ್​ ಉಪಸ್ಥಿತರಿದ್ದರು.

    ಶಿಬಿರದ ನಿರ್ದೇಶಕ ಡಾ. ನರೇಂದ್ರ ಕುಮಾರ್​ ಎಚ್​.ಎಸ್​. ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಡಾ.ವೀಣಾ ನರೇಂದ್ರಕುಮಾರ್​ ವಂದಿಸಿದರು. ಸಾಹಿತಿ ಎಚ್​.ಎಸ್​. ನವೀನಕುಮಾರ್​ ಹೊಸದುರ್ಗ ಕಾರ್ಯಕ್ರಮ ನಿರೂಪಿಸಿದರು. ಹಲವಾರು ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts