ನವಲಗುಂದದಲ್ಲಿ ಬೃಹತ್ ಶೋಭಾಯಾತ್ರೆ

blank

ನವಲಗುಂದ: ಪಟ್ಟಣದ ಆರ್ಯವೈಶ್ಯ ಸಮಾಜ ಹಾಗೂ ವಿವಿಧ ಸಂಘಟನೆಗಳು ಗುರುವಾರ ಆಯೋಜಿಸಿದ್ದ ರಾಮೋತ್ಸವ ನಿಮಿತ್ತ ಸ್ಥಳೀಯ ಗಣಪತಿ ದೇವಸ್ಥಾನದಿಂದ ಶ್ರೀರಾಮ, ಸೀತೆ, ಲಕ್ಷ್ಮಣ ಹಾಗೂ ಆಂಜನೇಯ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿಟ್ಟು ಬೃಹತ್ ಶೋಭಾಯಾತ್ರೆ ಮೂಲಕ ಪಟ್ಟಣದಲ್ಲಿರುವ ರಾಮ ಮಂದಿರಕ್ಕೆ ಕರೆತರಲಾಯಿತು.

ಮೆರವಣಿಗೆಯುದ್ದಕ್ಕೂ ಸುಮಂಗಲೆಯರು ಆರತಿ ಹಿಡಿದು ಸಂಭ್ರಮಿಸಿದರು. ಯುವಕರು ಕೇಸರಿ ಶಾಲು, ಪೇಠ ಧರಿಸಿ ‘ಜೈರಾಮ, ಶ್ರೀರಾಮ’ ಎಂಬ ಜಯಘೊಷ ಹಾಕುತ್ತ ಕರಡಿ ಮಜಲು, ಜಾಂಜ್ ಮೇಳಗಳ ನಿನಾದಕ್ಕೆ ಹೆಜ್ಜೆ ಹಾಕಿದರು. ವಾಸವಿ ಮಹಿಳಾ ಮಂಡಳದ ಸದಸ್ಯೆಯರು ಶ್ರೀರಾಮನ ಭಕ್ತಿಗೀತೆಗಳೊಂದಿಗೆ ಕೋಲಾಟ ಆಡಿದರು.

ಆರ್ಯ ವೈಶ್ಯ ಸಮಾಜದ ಅಧ್ಯಕ್ಷ ಲೋಕನಾಥ ಹೆಬಸೂರ, ಮುರಳಿ ಹೆಬಸೂರ, ವಾಸವಿ ಮಹಿಳಾ ಮಂಡಳದ ಅಧ್ಯಕ್ಷೆ ಉಷಾರಾಣಿ ಧಾರವಾಡ, ಅಜಿತ್ ಆನೇಗುಂದಿ, ಎಸ್.ಎನ್. ಡಂಬಳ, ಈಶ್ವರ ಹೆಬಸೂರ, ಕಿರಣ ರಾಯಬಾಗಿ, ದಶರಥ ಕಲಾಲ, ದಯಾನಂದ ಹೊನಕೇರಿ, ಗುರುರಾಜ ಕಿರಾಣಿ, ಅಪ್ಪಣ್ಣ ಹಿರಗಣ್ಣವರ ಸೇರಿ, ಸಾವಿರಾರು ಜನರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

Share This Article

ಜ್ಯೋತಿಷ್ಯದ ಪ್ರಕಾರ ಅಂಗೈ ತುರಿಕೆ ಏನನ್ನು ಸೂಚಿಸುತ್ತೆ ಗೊತ್ತಾ..? ಶುಭವೋ..ಅಶುಭವೋ devotional

devotional: ಕಣ್ಣು ಮಿಟುಕಿಸುವುದು, ತುಟಿಗಳು ನಡುಗುವುದು ಮತ್ತು ಕಣ್ಣು ರೆಪ್ಪೆಗಳು ಮಿಟುಕಿಸುವುದು ಮುಂತಾದ ಶಕುನಗಳನ್ನು ಅನುಸರಿಸುತ್ತಾರೆ.…

ಸಿಹಿಯಾದ, ರಸಭರಿತ ಕಲ್ಲಂಗಡಿ ಹಣ್ಣನ್ನು ಆಯ್ಕೆ ಮಾಡೋದು ಹೇಗೆ? ಈ ಸಿಂಪಲ್​ ಟ್ರಿಕ್ಸ್​ ಫಾಲೋ ಮಾಡಿದ್ರೆ ಸಾಕು! Watermelon

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…

ಪುರುಷರಿಗಿಂತ ಮಹಿಳೆಯರ ಮೇಲೆಯೇ ಮದ್ಯಪಾನದ ಎಫೆಕ್ಟ್​ ಜಾಸ್ತಿ! ಅಚ್ಚರಿಯ ಕಾರಣ ಹೀಗಿದೆ… Alcohol

Alcohol : ಇತ್ತೀಚಿನ ದಿನಗಳಲ್ಲಿ ಮದ್ಯ ಮತ್ತು ಸಿಗರೇಟ್ ಪುರುಷರಿಗೆ ಮಾತ್ರ ಸೀಮಿತವಾಗಿಲ್ಲ. ಮಹಿಳೆಯರೂ ಸಹ…