More

    ಬಾಡ ಕಾಂಚಿಕಾ ಪರಮೇಶ್ವರಿ ದೇಸ್ಥಾನದಲ್ಲಿ ನವರಾತ್ರಿ ಉತ್ಸವ ಇಂದಿನಿಂದ

    ಕುಮಟಾ: ಬಾಡ ಗುಡೇ ಅಂಗಡಿಯ ಕಾಂಚಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಅ.15 ರಿಂದ 24 ರವರೆಗೆ ಆಯೋಜನೆಯಾಗಿದೆ.
    ಅ.15 ರಂದು ಬೆಳಗ್ಗೆ 6 ಗಂಟೆಯಿಂದ ಪಣಪತಿ ಪೂಜೆ, ಪುಣ್ಯಾಹದಿಂದ ಪ್ರಾರಂಭವಾಗಿ ಕಲಶ ಸ್ಥಾಪನೆ, ದೀಪ ಸ್ಥಾಪನೆ ನಡೆಯಲಿದೆ. ಅಂದು ಹಾಗೂ ಮುಂದಿನ 8 ದಿನ ಸಪ್ತಶತಿ ಪಾರಾಯಣ, ಅಭಿಷೇಕ, ಸರ್ವಾಲಂಕಾರ, ಕಲ್ಪೋಕ್ತ ಪೂಜೆ ನೆರವೇರಿಸಲಾಗುವುದು. ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದೆ. ಸಾಯಂಕಾಲ 4 ರಿಂದ ವಿಶೇಷ ರಂಗಪೂಜೆ, ಮಹಾ ಮಂಗಳಾರತಿ ಬಲಿ ಸಮರ್ಪಣೆ, ಸಾಮೂಹಿಕ ಪ್ರಾರ್ಥನೆ, ರಾತ್ರಿ ಕಲ್ಪೋಕ್ತ ಪೂಜೆಯ ನಂತರ 8.30 ರಿಂದ ಮಹಾ ಮಂಗಳಾರತಿ ನಡೆಯಲಿದೆ.
    ಅ.18 ರಿಂದ 24 ರವರೆಗೆ ಪ್ರತಿ ದಿನ ಸಾಯಂಕಾಲ 6 ರಿಂದ ರಾತ್ರಿ 9 ಗಂಟೆಯವರೆಗೆ ಸ್ಥಳೀಯ ಮಹಿಳೆಯರು ಮತ್ತು ಮಕ್ಕಳಿಂದ ಸಪ್ತಯಕ್ಷ ಸೌರಭ ಎಂಬ ಯಕ್ಷಗಾನ ಕಾರ್ಯಕ್ರಮವು ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ. ಅಲ್ಲದೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅ.19 ರಂದು ಲಲಿತಾ ಪಂಚಮಿ, 20 ರಂದು ಶಾರದಾ ಸ್ಥಾಪನೆ, 21 ರಂದು ತ್ರಿದಿನ ದೇವಿ ಪೂಜೆ, 23 ರಂದು ಮಹಾ ನವಮಿ, 24 ರಂದು ವಿಜಯದಶಮಿ ಜರುಗಲಿದೆ.
    ಅ.29 ರಂದು ಹೊಸತಿನ ಹಬ್ಬ ಜರುಗಲಿದ್ದು, ಅಂದು ಬೆಳಗ್ಗೆ 9.30 ಕ್ಕೆ ಹೊಸ್ತು ತರಲಾಗುವುದು. 12.30 ಕ್ಕೆ ಮಹಾ ಮಂಗಳಾರತಿ, ಸಾಯಂಕಾಲ 5 ರಿಂದ ದೇವಿಯ ಪಲ್ಲಕ್ಕಿ ಉತ್ಸವ, ಜರುಗಲಿದೆ ಎಂದು ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹಾಗೂ ಸರ್ವ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಇದನ್ನೂ ಓದಿ: ಅಳ್ವೆಕೋಡಿಯಲ್ಲಿ ವಿಜೃಂಭಣೆಯ ನವರಾತ್ರಿ ನಾಳೆಯಿಂದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts