More

    ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರಕಟ: ಶಮಿಗೆ ಒಲಿದ ಅರ್ಜುನ ಪ್ರಶಸ್ತಿ, ಬ್ಯಾಡ್ಮಿಂಟನ್​ ತಾರೆಗಳಿಬ್ಬರಿಗೆ ಮೇಜರ್​ ಧ್ಯಾನ್​ ಚಂದ್​ ಖೇಲ್​ ರತ್ನ ಗೌರವ

    ನವದೆಹಲಿ: ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ 2023ನೇ ಸಾಲಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಯನ್ನು ಇಂದು (ಡಿ.20) ಪ್ರಕಟಿಸಿದೆ. ಬ್ಯಾಂಡ್ಮಿಂಟನ್​ ತಾರೆಗಳಾದ ಚಿರಾಗ್​ ಚಂದ್ರಶೇಖರ್​ ಶೆಟ್ಟಿ ಮತ್ತು ರಾಂಕಿ ರೆಡ್ಡಿ ಸಾತ್ವಿಕ್​ ಸಾಯಿ ರಾಜ್​ ಅವರು ಮೇಜರ್​ ಧ್ಯಾನ್​ ಚಂದ್​ ಖೇಲ್​ ರತ್ನ ಪ್ರಶಸ್ತಿಗೆ ಭಾಜನರಾದರೆ, ಕ್ರಿಕೆಟಿಗ ಮೊಹಮ್ಮದ್​ ಶಮಿ ಸೇರಿದಂತೆ 26 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

    ತಮ್ಮ ತಂಡಕ್ಕೆ ನೀಡಿದ ಕೊಡುಗೆಗಳ ಆಧಾರದ ಮೇಲೆ ಒಂದೇ ರೀತಿಯ ಸಾಧನೆ ಮಾಡಿದ ಇಬ್ಬರೂ ಕ್ರೀಡಾಪಟುಗಳಿಗೆ ಮೇಜರ್​ ಧ್ಯಾನ್​ ಚಂದ್​ ಖೇಲ್​ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇತ್ತೀಚೆಗಷ್ಟೇ ಮುಕ್ತಾಯವಾದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಬೌಲಿಂಗ್​ ವಿಭಾಗದಲ್ಲಿ ಮೊಹಮ್ಮದ್​ ಶಮಿ ಅವರ ಕೊಡುಗೆಯನ್ನು ಗಮನದಲ್ಲಿಟ್ಟಕೊಂಡು ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

    ಮುಂದಿನ ವರ್ಷ ಅಂದರೆ, 2024ರ ಜನವರಿ 9ರಂದು ಪ್ರಶಸ್ತಿ ವಿಜೇತ ಕ್ರೀಡಾಪಟುಗಳಿಗೆ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಜ. 9ರ ಮಂಗಳವಾರ ಬೆಳಗ್ಗೆ 11 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

    ಅರ್ಜುನ ಪ್ರಶಸ್ತಿ ವಿಜೇತರ ಪಟ್ಟಿ
    1. ಓಜಾಸ್ ಪ್ರವೀಣ್ ಡಿಯೋಟಾಲೆ (ಬಿಲ್ಲುಗಾರಿಕೆ)
    2. ಅದಿತಿ ಗೋಪಿಚಂದ್ ಸ್ವಾಮಿ (ಬಿಲ್ಲುಗಾರಿಕೆ)
    3. ಶಂಕರ್ ಎಂ (ಅಥ್ಲೆಟಿಕ್ಸ್)
    4. ಪಾರುಲ್ ಚೌಧರಿ (ಅಥ್ಲೆಟಿಕ್ಸ್)
    5. ಮೊಹಮೀದ್ ಹುಸ್ಸಾಮುದ್ದೀನ್ (ಬಾಕ್ಸಿಂಗ್)
    6. ಆರ್. ವೈಶಾಲಿ (ಚೆಸ್)
    7. ಮೊಹಮ್ಮದ್ ಶಮಿ (ಕ್ರಿಕೆಟ್)
    8. ಅನುಷ್ ಅಗರ್ವಾಲಾ (ಕುದುರೆ ಸವಾರಿ)
    9. ದಿವ್ಯಾಕೃತಿ ಸಿಂಗ್ (ಇಕ್ವೆಸ್ಟ್ರಿಯನ್ ಡ್ರೆಸ್ಸೇಜ್)
    10. ದೀಕ್ಷಾ ದಾಗರ್ (ಗಾಲ್ಫ್)
    11. ಕೃಷ್ಣ ಬಹದ್ದೂರ್ ಪಾಠಕ್ (ಹಾಕಿ)
    12. ಪುಕ್ರಂಬಮ್​ ಸುಶೀಲಾ ಚಾನು (ಹಾಕಿ)
    13. ಪವನ್ ಕುಮಾರ್ (ಕಬಡ್ಡಿ)
    14. ರಿತು ನೇಗಿ (ಕಬಡ್ಡಿ)
    15. ನಸ್ರೀನ್ (ಖೋ-ಖೋ)
    16. ಪಿಂಕಿ (ಲಾನ್ ಬೌಲ್ಸ್)
    17. ಐಶ್ವರಿ ಪ್ರತಾಪ್ ಸಿಂಗ್ ತೋಮರ್ (ಶೂಟಿಂಗ್)
    18. ಇಶಾ ಸಿಂಗ್ (ಶೂಟಿಂಗ್)
    19. ಹರಿಂದರ್ ಪಾಲ್ ಸಿಂಗ್ ಸಂಧು (ಸ್ಕ್ವಾಷ್)
    20. ಅಹಿಕಾ ಮುಖರ್ಜಿ (ಟೇಬಲ್ ಟೆನಿಸ್)
    21. ಸುನೀಲ್ ಕುಮಾರ್ (ಕುಸ್ತಿ)
    22. ಆಂಟಿಮ್ (ಕುಸ್ತಿ)
    23. ನವೋರೆಮ್ ರೋಶಿಬಿನಾ ದೇವಿ (ವುಶು)
    24. ಶೀತಲ್ ದೇವಿ (ಪ್ಯಾರಾ ಅರ್ಚರಿ)
    25. ಇಲ್ಲೂರಿ ಅಜಯ್ ಕುಮಾರ್ ರೆಡ್ಡಿ (ಅಂಧರ ಕ್ರಿಕೆಟ್)
    26. ಪ್ರಾಚಿ ಯಾದವ್ (ಪ್ಯಾರಾ ಕ್ಯಾನೋಯಿಂಗ್​)

    ದ್ರೋಣಾಚಾರ್ಯ ಪ್ರಶಸ್ತಿ
    1. ನಿಯಮಿತ ವರ್ಗ
    1. ಲಲಿತ್ ಕುಮಾರ್ (ಕುಸ್ತಿ)
    2. ಆರ್. ಬಿ. ರಮೇಶ್ (ಚೆಸ್)
    3. ಮಹಾವೀರ್ ಪ್ರಸಾದ್ ಸೈನಿ (ಪ್ಯಾರಾ ಅಥ್ಲೆಟಿಕ್ಸ್)
    4. ಶಿವೇಂದ್ರ ಸಿಂಗ್ (ಹಾಕಿ)
    5. ಗಣೇಶ್ ಪ್ರಭಾಕರ್ ದೇವ್ರುಖ್ಕರ್ (ಮಲ್ಲಕಂಬ)

    ಜೀವಮಾನದ ವರ್ಗ
    1. ಜಸ್ಕಿರತ್ ಸಿಂಗ್ ಗ್ರೆವಾಲ್ (ಗಾಲ್ಫ್)
    2. ಭಾಸ್ಕರನ್ ಇ (ಕಬಡ್ಡಿ)
    3. ಜಯಂತ ಕುಮಾರ್ ಪುಶಿಲಾಲ್ (ಟೇಬಲ್ ಟೆನಿಸ್)

    ಕ್ರೀಡೆ ಮತ್ತು ಕ್ರೀಡಾಕೂಟದಲ್ಲಿ ಜೀವಮಾನ ಸಾಧನೆಗಾಗಿ ಧ್ಯಾನ್​ ಚಂದ್​ ಪ್ರಶಸ್ತಿ 2023
    1. ಮಂಜುಷಾ ಕನ್ವರ್ (ಬ್ಯಾಡ್ಮಿಂಟನ್)
    2. ವಿನೀತ್ ಕುಮಾರ್ ಶರ್ಮಾ (ಹಾಕಿ)
    3. ಕವಿತಾ ಸೆಲ್ವರಾಜ್ (ಕಬಡ್ಡಿ)

    ಮೌಲಾನಾ ಅಬುಲ್​ ಕಲಾಂ ಅಜಾದ್​ (ಮಕಾ) ಟ್ರೋಫಿ 2023
    1. ಗುರು ನಾನಕ್ ದೇವ್ ವಿಶ್ವವಿದ್ಯಾಲಯ, ಅಮೃತಸರ (ಒಟ್ಟಾರೆ ವಿಜೇತ ವಿಶ್ವವಿದ್ಯಾಲಯ)
    2. ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ, ಪಂಜಾಬ್ (1 ನೇ ರನ್ನರ್ ಅಪ್ ವಿಶ್ವವಿದ್ಯಾಲಯ)
    3. ಕುರುಕ್ಷೇತ್ರ ವಿಶ್ವವಿದ್ಯಾಲಯ, ಕುರುಕ್ಷೇತ್ರ (2ನೇ ರನ್ನರ್ ಅಪ್ ವಿಶ್ವವಿದ್ಯಾಲಯ)

    ದಕ್ಷಿಣ ಕನ್ನಡದ ಹೆಸರಾಂತ ಸಾಹಿತಿ ಲಕ್ಷ್ಮೀಶ ತೋಳ್ಪಾಡಿಗೆ ಒಲಿದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

    ವಿಶ್ವದ ಟಾಪ್ 50ರಲ್ಲಿ ಭಾರತದ ಒಂದು ಶಿಕ್ಷಣ ಸಂಸ್ಥೆಯೂ ಇಲ್ಲ: ರಾಷ್ಟ್ರಪತಿ ಮುರ್ಮು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts