More

  ರಾಷ್ಟ್ರಮಟ್ಟದ ರಾಕೆಟ್ ಬಾಲ್ ಚಾಂಪಿಯನ್‌ಷಿಪ್‌ಗೆ ರಾಜ್ಯ ತಂಡದ ಎಂಟು ಆಟಗಾರರು ಆಯ್ಕೆ

  ಸಂಡೂರು: ಪಂಜಾಬ್ ರಾಜ್ಯದ ಅಮೃತಸರದಲ್ಲಿ ಜ.31ರಿಂದ ಫೆ.2ರವರೆಗೆ ನಡೆಯಲಿರುವ 7ನೇ ರಾಷ್ಟ್ರೀಯ ಹಿರಿಯರ ರಾಕೆಟ್ ಬಾಲ್ ಚಾಂಪಿಯನ್‌ಷಿಪ್‌ಗೆ ರಾಜ್ಯ ತಂಡದ ಆಟಗಾರರನ್ನು ಪಟ್ಟಣದ ಯಶವಂತ ವಿಹಾರ ಮೈದಾನದಲ್ಲಿ ಭಾನುವಾರ ಆಯ್ಕೆ ಮಾಡಲಾಯಿತು.

  ಚಾಂಪಿಯನ್‌ಷಿಪ್ ಹಿನ್ನೆಲೆಯಲ್ಲಿ ಜ.24ರಿಂದ 26ರವರೆಗೆ ಆಟಗಾರರಿಗೆ ತರಬೇತಿ ನೀಡಲಾಗಿತ್ತು. ತರಬೇತಿ ಪಡೆದವರ ಪೈಕಿ ಸ್ಥಳೀಯರಾದ ಆರ್.ಚಂದ್ರಶೇಖರ್, ಸಿದ್ದೇಶ್, ಬೆಂಗಳೂರಿನ ಹಿತೇಶ್, ಮೈಸೂರಿನ ಶೀತಲ್, ಸೋಗಿ ತಾಂಡಾದ ಪ್ರವೀಣ್, ಹೂವಿನ ಹಡಗಲಿಯ ಬಸವರಾಜ ಉತ್ತಂಗಿ, ಮಹೇಶ್, ಮೋಹನ್ ಬೆಲಗೂರರನ್ನು ಆಯ್ಕೆ ಮಾಡಲಾಯಿತು. ರಾಕೆಟ್ ಬಾಲ್ ಅಸೋಷಿಯೇಷನ್ ಆಫ್ ಕರ್ನಾಟಕ ಸಂಸ್ಥೆ ಅಧ್ಯಕ್ಷ ಬಿ.ನಾಗನಗೌಡ, ಪದಾಧಿಕಾರಿಗಳಾದ ಎಸ್.ಎಂ.ರಾಜು, ಮಲ್ಲಿಕಾರ್ಜುನ, ಮಂಜನಾಥ, ವೆಂಕಟಸುಬ್ಬಯ್ಯ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts