More

    ರಾಷ್ಟ್ರಮಟ್ಟದ ದೊಣ್ಣೆ ವರಸೆ ಸ್ಪರ್ಧೆಯಲ್ಲಿ ಬೆಳ್ಳಿ, ಕಂಚಿಗೆ ಮುತ್ತಿಟ್ಟ ಹನುಮಸಾಗರದ ಪಟುಗಳು

    ಹನುಮಸಾಗರ: ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ 18ನೇ ರಾಷ್ಟ್ರಮಟ್ಟದ ದೊಣ್ಣೆ ವರಸೆ ಸ್ಪರ್ಧೆಯಲ್ಲಿ ಪಟ್ಟಣದ ಕ್ರೀಡಾಪಟುಗಳು ಬೆಳ್ಳಿ ಹಾಗೂ ಕಂಚಿನ ಪದಕ ಪಡೆದಿದ್ದಾರೆ. ಹನುಮಸಾಗರದ 13 ಹಾಗೂ ಧಾರವಾಡ ಜಿಲ್ಲೆಯ 5 ಕ್ರೀಡಾಪಟುಗಳು ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. 8 ಬೆಳ್ಳಿ ಹಾಗೂ 9 ಕಂಚಿನ ಪದಕಗಳನ್ನು ಪಡೆದು ರಾಜ್ಯದ ಕೀರ್ತಿ ಹೆಚ್ಚಿಸಿದ್ದಾರೆಂದು ಕರ್ನಾಟಕ ಸ್ಟೇಟ್ ಸಿಲಂಬಮ್ ಜನರಲ್ ಸೆಕ್ರೆಟರಿ ಮಹಾಂತೇಶ ಬೀಳಗಿತಿಳಿಸಿದ್ದಾರೆ.

    ಸೀನಿಯರ್ ವಿಭಾಗದ ವೆಲ್ ಕಂಬು ವಿಚ್ಚುವಿನಲ್ಲಿ ಅಂಬಿಕಾ ಗುರಿಕಾರ (ಕಂಚು), ಒಟ್ರಾಯ್ ವಾಲ್ ವಿಚ್ಚುವಿನಲ್ಲಿ ಧಾರವಾಡದ ಕಿರಣಗುರ್ಲ್ ಹೊಸೂರು (ಕಂಚು),. ಜೂನಿಯರ್ ವಿಭಾಗ ಒಟ್ರಾಯ್ ವಾಲ್ ವಿಚ್ಚುವಿನಲ್ಲಿ ಫಯಾಜ್ ತಹಶೀಲ್ದಾರ್, ಧಾರವಾಡದ ಗಣೇಶ, ರವಿಕುಮಾರ, ಶ್ರೀಧರ್ ಕಂಚು ಹಾಗೂ ರಾಜಸಾಬ್ ಬೆಳ್ಳಿ ಪದಕ ಪಡೆದಿದ್ದಾರೆ. ಸಬ್ ಜೂನಿಯರ್ ವಿಭಾಗದ ಕುಳು ಆಯುತ್ತು ಜೋಡಿ ಕ್ರೀಡೆಯಲ್ಲಿ ಸುದನ್ವ ಪಪ್ಪು, ಎಸ್.ನಂದೀಶ ಹಾಗೂ ಸಾದಿಕ್ ತಹಶೀಲ್ದಾರ್ ಬೆಳ್ಳಿ ಜಯಿಸಿದ್ದಾರೆ. ವೆಲ್ ಕಂಬು ವಿಚ್ಚು ಕ್ರೀಡೆಯಲ್ಲಿ ಪ್ರತೀಕ ಹಿರೇಮಠ (ಕಂಚು), ಒಟ್ರಾಯ್ ಸುರಲ್ ವಾಲ್ ವಿಚ್ಚುವಿನಲ್ಲಿ ವಿರಾಜ ಗುಡಿಕೋಟಿ (ಕಂಚು), ಕುತ್ತು ವರಸೈ ಕ್ರೀಡೆಯಲ್ಲಿ ಪ್ರಸಾದ ಸಿದ್ದಲಿಂಗ ಕಂಚು ಪಡೆದಿದ್ದಾರೆ. ಮಿನಿ ಸಬ್ ಜೂನಿಯರ್ ವಿಭಾಗದಲ್ಲಿ ವೆಲ್ ಕಂಬು ವಿಚ್ಚುನಲ್ಲಿ ಪ್ರೀತಂ ಬಿಂಗಿ (ಬೆಳ್ಳಿ), ಕುಳು ಆಯುತ್ತು ಜೋಡಿ ಕ್ರೀಡೆಯಲ್ಲಿ ಅಭಿಷೇಕ ಕೋರಿ, ಪವನಗೌಡ ನಾಡಗೌಡ ಹಾಗೂ ಸಮರ್ಥ ಅಂಗಡಿ 1 ಬೆಳ್ಳಿ ಪದಕ ಪಡೆದಿದ್ದಾರೆ. ತಂಡದ ಮ್ಯಾನೇಜರ್ ಆಗಿ ದೀಪಾ ಎಂ. ಬೀಳಗಿ, ತರಬೇತುದಾರರಾಗಿ ಮಹಾಂತೇಶ ಬೀಳಗಿ ಹಾಗೂ ಮಲ್ಲೇಶ ಕೋಳೂರ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts