More

    ಎನ್‌ಎಸ್‌ಎಸ್ ಶಿಬಿರದಿಂದ ರಾಷ್ಟ್ರೀಯ ಪ್ರಜ್ಞೆ

    ಹುಣಸೂರು: ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳು ವಿದ್ಯಾರ್ಥಿಗಳ ಅಂತರಂಗದ ಪರಿವರ್ತನೆಗೆ ನೆರವು ನೀಡುವ ಮೂಲಕ ರಾಷ್ಟ್ರೀಯ ಪ್ರಜ್ಞೆಯನ್ನು ಬೆಳೆಸಲು ಸಹಾಯಕವಾಗುತ್ತವೆ ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮೋದೂರು ಮಹೇಶಾರಾಧ್ಯ ಅಭಿಪ್ರಾಯಪಟ್ಟರು.

    ತಾಲೂಕಿನ ಮೋದೂರು ಗ್ರಾಮದಲ್ಲಿ ಶುಕ್ರವಾರ ನಗರದ ಮಹಿಳಾ ಸರ್ಕಾರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ(ಎನ್‌ಎಸ್‌ಎಸ್)ಘಟಕದ ವತಿಯಿಂದ ಆಯೋಜಿಸಿದ್ದ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಶಿಬಿರಗಳು ವಿದ್ಯಾರ್ಥಿ ಹಾಗೂ ಯುವಜನರ ಮನ ಪರಿವರ್ತನೆಗೆ ಕಾರಣವಾಗುತ್ತವೆ. ಜಗತ್ತು ಇಂದು ಕ್ಷೋಭೆಯಿಂದ ನರಳುತ್ತಿದ್ದು, ಯುವಜನರು ಅಶಾಂತಿಯನ್ನೇ ಆಯ್ಕೆಮಾಡಿಕೊಂಡಂತೆ ಭಾಸವಾಗುತ್ತಿದೆ. ಇಂತಹ ವಿಷಮ ಸನ್ನಿವೇಶದಲ್ಲಿ ಸೇವಾ ಯೋಜನಾ ಶಿಬಿರಗಳು ವಿದ್ಯಾರ್ಥಿಗಳಿಗೆ ಲೋಕಜ್ಞಾನವನ್ನು ಕಲಿಸುವುದರ ಮೂಲಕ ಸದೃಢ ಪ್ರಜೆಗಳನ್ನಾಗಿ ಮಾಡುತ್ತವೆ ಎಂದರು.

    ಕಾರ್ಯಕ್ರಮದಲ್ಲಿ ಐಎಎಸ್ ಪರೀಕ್ಷೆಗಳ ತರಬೇತುದಾರ ದೇವರಾಜ ಒಡೆಯರ್, ಉದ್ಯಮಿ ಹರವೆ ಶ್ರೀಧರ್, ತಾ.ಪಂ.ಮಾಜಿ ಸದಸ್ಯ ಎಂ.ಎಸ್.ಬಸವಣ್ಣ, ಶಿಬಿರಾಧಿಕಾರಿ ಡಾ.ಪ್ರಸನ್ನ, ಸಹ ಶಿಬಿರಾಧಿಕಾರಿ ಪ್ರೊ.ಲಕ್ಷ್ಮಯ್ಯ, ಪ್ರೊ.ಮಂಜುನಾಥ್, ಗ್ರಾ.ಪಂ.ಅಧ್ಯಕ್ಷ ರಾಮಚಂದ್ರ, ಉಪಾಧ್ಯಕ್ಷೆ ಮಣಿ ನಿಂಗರಾಜು, ಎಂ.ಎಸ್.ಮಹದೇವಪ್ಪ, ಹಿರಿಯ ವಿದ್ಯಾರ್ಥಿಸಂಘದ ರಾಜಶೇಖರ್, ರೋಟರಿ ಅಧ್ಯಕ್ಷ ಚೆನ್ನಕೇಶವ, ಉದ್ಯಮಿ ಗಿರೀಶ್, ಸಹಾಯಕ ಪ್ರಾಧ್ಯಾಪಕ ಡಾ.ಮಂಜುನಾಥ್, ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts