More

    ರೋಣ ತಾಲೂಕು ಆಸ್ಪತ್ರೆಗೆ ರಾಷ್ಟ್ರಮಟ್ಟದ ಪ್ರಶಸ್ತಿ

    ನರೇಗಲ್ಲ: ಹೆರಿಗೆ ರೋಗಿಗಳಿಗೆ ಸಂಬಂಧಪಟ್ಟಂತೆ ಉನ್ನತ ಮಟ್ಟದ ಸೇವೆ ಒದಗಿಸುವಲ್ಲಿ ಶ್ರಮಿಸುತ್ತಿರುವ ರೋಣ ಪಟ್ಟಣದ 100 ಹಾಸಿಗೆಯ ಡಾ. ಪಂಡಿತ್ ಭೀಮಸೇನ್ ಜೋಶಿ ತಾಲೂಕು ಆಸ್ಪತ್ರೆಗೆ ಲಕ್ಷ್ಯ ಕಾರ್ಯಕ್ರಮದಡಿ ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಪ್ರಶಸ್ತಿ ದೊರಕಿದೆ.

    ಹೆರಿಗೆ ಕೊಠಡಿಯ ಗುಣಮಟ್ಟದಲ್ಲಿ ಶೇ.93ರಷ್ಟು ಹಾಗೂ ಹೆರಿಗೆ ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿ ಶೇ.90ರಷ್ಟು ಗುರಿ ತಲುಪಿದ್ದರಿಂದ ಈ ಎರಡು ವಿಭಾಗಕ್ಕೆ ತಲಾ 2 ಲಕ್ಷ ರೂ.ನಂತೆ ಒಟ್ಟು 4 ಲಕ್ಷ ರೂ. ಬಹುಮಾನ ಬಂದಿದೆ.

    ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅಧೀನದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಮಕ್ಕಳ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ, ಇಲ್ಲಿನ ಸೌಲಭ್ಯ ಪರಿಶೀಲಿಸಿದ್ದರು.

    ಇದೀಗ ಪ್ರಶಸ್ತಿ ಲಭಿಸಿದ್ದರಿಂದ ರೋಣ ತಾಲೂಕು ಆಸ್ಪತ್ರೆ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ.

    ತಾಲೂಕು ಆಸ್ಪತ್ರೆಯು ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಪಾತ್ರವಾಗಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ. ಇದಕ್ಕೆ ಆಸ್ಪತ್ರೆಯ ಎಲ್ಲ ಸಿಬ್ಬಂದಿಯ ಕರ್ತವ್ಯ ನಿಷ್ಠೆ, ಸದ್ಗುಣ ಹಾಗೂ ಸನ್ನಡತೆಯೇ ಕಾರಣ.
    ಡಾ. ಎಚ್.ಎಲ್. ಗಿರಡ್ಡಿ, ವೈದ್ಯಾಧಿಕಾರಿ, ಡಾ. ಪಂ.ಭೀಮಸೇನ್ ಜೋಶಿ ಆಸ್ಪತ್ರೆ, ರೋಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts