More

    ನ್ಯಾಷನಲ್​ ಹೆರಾಲ್ಡ್​ ವಿಚಾರಣೆ ಮುಂದಕ್ಕೆ, ಉಭಯಪಕ್ಷಗಳ ಜಂಟಿ ಮನವಿ…

    ನವದೆಹಲಿ: ನ್ಯಾಷನಲ್ ಹೆರಾಲ್ಡ್​ ಪ್ರಕರಣ ಸಂಬಂಧಿತ ವಿಚಾರಣೆಯನ್ನು ದೆಹಲಿಯ ವಿಶೇಷ ನ್ಯಾಯಾಲಯ ಮುಂದೂಡಿದೆ. ವಿಶೇಷವೆಂದರೆ ವಿಚಾರಣೆ ಮುಂದೂಡುವಂತೆ ವಾದಿ-ಪ್ರತಿವಾದಿಗಳಿಬ್ಬರೂ ಮನವಿ ಮಾಡಿಕೊಂಡಿದ್ದರು.

    ದೂರುದಾರರಾಗಿರುವ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರ ಹೇಳಿಕೆ ಮರು ಪರಿಶೀಲನೆ ಸಂಬಂಧ ಶುಕ್ರವಾರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಬೇಕಿತ್ತು. ಆದರೆ ಉಭಯಪಕ್ಷದವರು ಜಂಟಿಯಾಗಿ ಮನವಿ ಮಾಡಿಕೊಂಡಿದ್ದರಿಂದ ವಿಚಾರಣೆಯನ್ನು ನ. 20ಕ್ಕೆ ಮುಂದೂಡಲಾಗಿದೆ. ಅಂದಹಾಗೆ ಈ ವಿಚಾರಣೆ ಮುಂದೂಡಿಕೆಗೆ ಕಾರಣವಾಗಿದ್ದು ಕರೊನಾ. ಕೋವಿಡ್-19 ಪಿಡುಗಿನ ಹಿನ್ನೆಲೆಯಲ್ಲಿ ಖುದ್ದು ಹಾಜರಾಗಲು ಕಷ್ಟ ಎಂದು ವಾದಿ-ಪ್ರತಿವಾದಿಗಳಿಬ್ಬರೂ ಕೋರಿಕೊಂಡಿದ್ದರು.

    ಕರೊನಾ ಸದ್ಯಕ್ಕೆ ಮುಗಿಯುವ ಲಕ್ಷಣಗಳಿಲ್ಲ. ಹಾಗಾಗಿ ಪ್ರಕರಣದ ಇತ್ಯರ್ಥ ಹಿನ್ನೆಲೆಯಲ್ಲಿ ಮುಂದುವರಿಯುವ ಸಲುವಾಗಿ ಎರಡೂ ಪಕ್ಷದವರೂ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಇದು ಫಾಸ್ಟ್​ ಟ್ರ್ಯಾಕ್​ ಕೋರ್ಟ್​ ಆಗಿರುವುದರಿಂದ ವಿಳಂಬ ಮಾಡಲು ಸಾಧ್ಯವಿಲ್ಲ ಎಂದು ಅಡಿಷನಲ್ ಚೀಫ್​ ಮೆಟ್ರೊಪಾಲಿಟನ್​ ಮ್ಯಾಜಿಸ್ಟ್ರೇಟ್​ ವಿಶಾಲ್​ ಪಹುಜ ಎರಡೂ ಪಕ್ಷದವರಿಗೆ ಸೂಚಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts