More

  ಹಾರ್ದಿಕ್​-ನತಾಶಾರನ್ನು ಬಿಡದ ಟ್ರೋಲಿಗರು: ನಗೆಗಡಲಲ್ಲಿ ತೇಲಿಸುವಂತಿದೆ ತಾರಾಜೋಡಿಯ ಬಗೆಬಗೆಯ ಮೀಮ್ಸ್!​

  ಮುಂಬೈ: ಹೊಸ ವರ್ಷದ ಆರಂಭದಲ್ಲೇ ಸರ್ಬಿಯಾ ಮೂಲದ ನಟಿ ನತಾಶಾ ಸ್ಟಾಂಕೋವಿಕ್​ರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದನ್ನು ಘೋಷಿಸಿ ಟೀಮ್​ ಇಂಡಿಯಾ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಎಲ್ಲರಿಗೂ ಅಚ್ಚರಿ ನೀಡಿದ್ದರು.​ ದುಬೈನಲ್ಲಿ ನೆರವೇರಿಸಿಕೊಂಡ ನಿಶ್ಚಿತಾರ್ಥಕ್ಕೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳನ್ನು ಸ್ಟಾರ್​ ಜೋಡಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಅಂದಿನಿಂದ ಇಂದಿನವರೆಗೂ ಸುಮ್ಮನೆ ಕುಳಿತಿಲ್ಲ. ಬದಲಾಗಿ ಮೀಮ್ಸ್​ಗಳನ್ನು ಹರಿಬಿಟ್ಟು ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದಾರೆ.

  ತಾರಾಜೋಡಿಯು ನೆಟ್ಟಿಗರನ್ನು ಸೆಳೆದಿದ್ದು ಇಂಟರ್​ನೆಟ್​ ತುಂಬೆಲ್ಲಾ ಮೀಮ್ಸ್​ಗಳು ಹರಿದಾಡುತ್ತಿದೆ. ನತಾಶಾರೊಟ್ಟಿಗೆ ಹಾರ್ದಿಕ್​ ಪಾಂಡ್ಯ ತೆಗೆದುಕೊಂಡಿರುವ ಸೆಲ್ಫಿ ಫೋಟೋದಲ್ಲಿ ನತಶಾ ಮುಖವನ್ನು ತೆಗೆದು, ಅದಕ್ಕೆ ಭಿಕ್ಷುಕಿಯಿಂದ ಗಾಯಕಿಯಾದ ರಾನು ಮಂಡಲ್​ ಮುಖ ಸೇರಿಸಿ ಎಡಿಟ್​ ಮಾಡಿರುವ ಮೀಮ್ಸ್​ ಹರಿಬಿಟ್ಟು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.

  ಬಿಕಿನಿ ಧರಿಸಿ ಭಾವಿ ಪತಿ ಹಾರ್ದಿಕ್ ಜತೆ ಬೀಚ್​ನಲ್ಲಿ ನಿಂತು​ ತೆಗೆಸಿಕೊಂಡಿದ್ದ ಫೋಟೋವನ್ನು ನತಾಶಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಇತ್ತೀಚೆಗಷ್ಟೇ ಶೇರ್​ ಮಾಡಿಕೊಂಡಿದ್ದರು. ಅದನ್ನು ನೆಟ್ಟಿಗರು ತಮ್ಮದೇ ರಿತಿಯಲ್ಲಿ ಎಡಿಟ್​ ಮಾಡಿ ಹರಿಬಿಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

  ಅಂದಹಾಗೆ ‘ಮೈ ತೆರಾ, ತು ಮೇರಿ, ಜಾನೇ ಸಾರಾ ಹಿಂದುಸ್ತಾನ್. 01.01.2020, ಎಂಗೇಜ್ಡ್​’ ಎಂದು ಬರೆದು ಹಾರ್ದಿಕ್ ಪಾಂಡ್ಯ ಬುಧವಾರ ಸಂಜೆ(ವರ್ಷದ ಮೊದಲ ದಿನ) ಇನ್​ಸ್ಟಾಗ್ರಾಂ ಪೋಸ್ಟ್​ನಲ್ಲಿ ನಿಶ್ಚಿತಾರ್ಥವನ್ನು ಪ್ರಕಟಿಸಿದ್ದರು. ಇದರ ಬೆನ್ನಲ್ಲೇ ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರ ಹರಿದು ಬಂದಿತ್ತು. (ಏಜೆನ್ಸೀಸ್​)

  https://www.instagram.com/p/B63Jzkmnzg6/?utm_source=ig_embed

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts