More

    ಮಣಿ ಪೋಣಿಸುವ ದಾರವಿದ್ದಂತೆ ; ವಿಶ್ವ ರಂಗಭೂಮಿ ದಿನದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷೆ ರಮಾಕುಮಾರಿ ಬಣ್ಣನೆ

    ತುಮಕೂರು: ಕನ್ನಡಪರ ಮನಸ್ಸುಗಳನ್ನು ಒಟ್ಟಾಗಿ ಸೇರಿಸುವ ರಂಗಭೂಮಿ, ಮಣಿಗಳನ್ನು ಪೋಣಿಸುವ ದಾರವಿದ್ದಂತೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಬಣ್ಣಿಸಿದರು.

    ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಾಟಕಮನೆ ಮತ್ತು ಜಿಲ್ಲಾ ರಂಗಕಲಾವಿದರು ಶನಿವಾರ ಹಮ್ಮಿಕೊಂಡಿದ್ದ ‘ವಿಶ್ವ ರಂಗಭೂಮಿ ದಿನ’ದಲ್ಲಿ ಮಾತನಾಡಿದ ಅವರು, ಕಲಾವಿದರು ತಮಗೆ ಏನೇ ಒತ್ತಡವಿದ್ದರೂ ಅದನ್ನೇಲ್ಲ ಬದಿಗೊತ್ತಿ ರಂಗಭೂಮಿಯಲ್ಲಿ ಅಭಿನಯಿಸುವ ಮೂಲಕ ಎಲ್ಲರನ್ನೂ ರಂಜಿಸುತ್ತಾರೆ ಎಂದರು.

    ಜನರಿಗೆ ಮನರಂಜನೆ ನೀಡುವ ಜತೆಗೆ ಅವರಲ್ಲಿರುವ ಸೃಜನಶೀಲತೆಯನ್ನು ಅರಳಿಸುವಲ್ಲಿ ಕಲೆಗಳು ಮಹತ್ತರ ಪಾತ್ರವನ್ನು ವಹಿಸುತ್ತವೆ. ಇಂತಹ ಕಲೆಗಳಲ್ಲಿ ರಂಗಭೂಮಿಯೂ ಒಂದಾಗಿದ್ದು ಸಾಮಾಜಿಕ ಸಂದೇಶಗಳನ್ನು ನೀಡುವ ಮೂಲಕ ಜನರನ್ನು ಒಂದು ಅದೃಶ್ಯವಾದ ಲೋಕಕ್ಕೆ ಕರೆದೊಯ್ಯುತ್ತದೆ ಎಂಬ ಅಭಿಪ್ರಾಯಪಟ್ಟರು.

    ನಗಾರಿ ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ಲಕ್ಷ್ಮಣದಾಸ್ ಮಾತನಾಡಿ, ಕರೊನಾದಿಂದ ಕಳೆದ ಒಂದು ವರ್ಷದಿಂದ ಕಲಾವಿದರು ಕಷ್ಟ ಅನುಭವಿಸುತ್ತಿದ್ದು, ಈಗಲೂ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುತ್ತಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ, ಈಗಲೂ ಕಲಾವಿದರು ಸಂಕಷ್ಟದಲ್ಲೇ ಬದುಕು ದೂಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

    ವಿಶ್ವ ರಂಗಭೂಮಿ ದಿನವನ್ನು ಸಂಭ್ರಮದಿಂದ ಆಚರಿಸಬೇಕೆಂದು ಕಳೆದೊಂದು ತಿಂಗಳಿನಿಂದ ಪೂರ್ವ ಸಿದ್ಧತೆಗಳನ್ನು ನಡೆಸಿ, ತಯಾರು ಮಾಡಿಕೊಳ್ಳಲಾಗಿತ್ತು ಆದರೆ, ಕಾರ್ಯಕ್ರಮದ ಸಂಭ್ರಮಾಚರಣೆಯನ್ನು ಕೋವಿಡ್ ರೂಪಾಂತರ ಬಲಿ ತೆಗೆದುಕೊಂಡಿದ್ದು ಸರ್ಕಾರದ ನಿಯಮಗಳಂತೆ ಸರಳವಾಗಿ ಆಯೋಜಿಸಲಾಗಿದೆ ಎಂದು ನಾಟಕಮನೆ ಕಾರ್ಯನಿರ್ವಾಹಕ ಟ್ರಸ್ಟಿ ನಾಟಕಮನೆ ಮಹಲಿಂಗು ತಿಳಿಸಿದರು.
    ರಂಗಭೂಮಿ ನಿರ್ದೇಶಕ ಮೆಳೇಹಳ್ಳಿ ದೇವರಾಜ್ ಮಾತನಾಡಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯೆ ಆರತಿ ಪಟ್ರಮೆ, ಕಲಾವಿದ ಬಾಲಾ ವಿಶ್ವನಾಥ್, ಝೆನ್ ಟೀಂನ ಮುಖ್ಯಸ್ಥ ಉಗಮ ಶ್ರೀನಿವಾಸ್, ಹಿರಿಯ ರಂಗಭೂಮಿ ಕಲಾವಿದ ವೈ.ಎನ್.ಶಿವಣ್ಣ, ಎಂ.ಎಸ್.ರವಿಕುಮಾರ್ ಕಟ್ಟೀಮನಿ, ಗಾಯಕ ಮಲ್ಲಿಕಾರ್ಜುನ ಕೆಂಕೆರೆ ಇದ್ದರು.

    ಕಲಾವಿದರಿಗೇ ಏಕೆ ಕಷ್ಟ?: ಕಲಾವಿದರಿಗೇ ಏಕೆ ಕಷ್ಟ ಎಂಬುದು ಇದುವರೆಗೂ ತಿಳಿಯುತ್ತಿಲ್ಲ, ಅದರಲ್ಲೂ ಪೌರಾಣಿಕ ರಂಗಭೂಮಿ ಕಲಾವಿದರಂತೂ ಒಂದು ವರ್ಷದಿಂದ ಉಪವಾಸ ಅನುಭವಿಸಿದ್ದಾರೆ. ಸರ್ಕಾರವು ಸಭೆ, ಸಮಾರಂಭ, ಇನ್ನಿತರ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಿರುವ ಹಿನ್ನಲೆಯಲ್ಲಿ ನಿನ್ನೆಯಷ್ಟೆ ಒಂದು ನಾಟಕ ಸ್ಥಗಿತಗೊಂಡಿದೆ ಎಂದು ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ಲಕ್ಷ್ಮಣದಾಸ್ ವಿಷಾಧಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts