More

    ಎನ್​ಎಟಿಎ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ: ಪರೀಕ್ಷಾ ದಿನಾಂಕವೂ ಮುಂದೂಡಿಕೆ

    ನ್ಯಾಷನಲ್ ಆಪ್ಟಿಟ್ಯೂಡ್​ ಟೆಸ್ಟ್​ ಇನ್​ ಆರ್ಕಿಟೆಕ್ಟಚರ್​ (ಎನ್​ಎಟಿಎ-2020) ಪರೀಕ್ಷಾ ದಿನಾಂಕವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

    ಕರೊನಾ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್​ಡೌನ್​ ಘೋಷಿಸಿರುವುದರಿಂದ ಪರೀಕ್ಷೆ ಮುಂದೂಡಲಾಗಿದೆ ಎಂದು ಪರೀಕ್ಷೆ ಆಯೋಜಿಸುವ ಸಂಸ್ಥೆಯಾದ ಕೌನ್ಸಿಲ್​ ಆಫ್​ ಆರ್ಕಿಟೆಕ್ಚರ್ಸ್​ (ಸಿಒಎ) ತಿಳಿಸಿದೆ. ಲಾಕ್​ಡೌನ್​ ಸ್ಥಗಿತಗೊಂಡ ಬಳಿಕ ಪರೀಕ್ಷಾ ದಿನಾಂಕಗಳನ್ನು ಘೋಷಿಸಲಾಗುವುದು ಎಂದು ಮಾಹಿತಿ ನೀಡಿದೆ.

    ಅರ್ಜಿ ಸಲ್ಲಿಕೆ ದಿನಾಂಕವೂ ವಿಸ್ತರಣೆ: ಪರೀಕ್ಷೆ ದಿನಾಂಕ ಮುಂದೂಡಿಕೆಯಾಗಿರುವ ಕಾರಣದಿಂದ ಅರ್ಜಿ ಸಲ್ಲಿಕೆ ಅವಧಿಯನ್ನೂ ಸಂಸ್ಥೆ ವಿಸ್ತರಣೆ ಮಾಡಿದೆ. ಏಪ್ರಿಲ್​ 15ರವರೆಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ. ಶುಲ್ಕ ಪಾವತಿಸಲು ಹಾಗೂ ಇಮೇಜ್​ಗಳನ್ನು ಅಪ್​ಲೋಡ್​ ಮಾಡಲು ಏಪ್ರಿಲ್​ 19ರವರೆಗೆ ಅವಕಾಶವಿದೆ. ಅರ್ಜಿ ತಿದ್ದುಪಡಿಗಾಗಿ ಏಪ್ರಿಲ್​ 20ರಿಂದ 22ರವರೆಗೆ ಸಮಯ ನೀಡಲಾಗಿದೆ.

    ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಬಗ್ಗೆ ವಿವಾದಾತ್ಮಕ ಟ್ವೀಟ್​ ಮಾಡಿದ ಆಪ್​ ಶಾಸಕನ ವಿರುದ್ಧ ಎಫ್ಐಆರ್​

    300ಕಿ.ಮೀ ದೂರದ ಮನೆಗೆ ನಡೆದುಕೊಂಡು ಹೊರಟವನಿಗೆ ಏನಾಯ್ತು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts