More

    ನಾಸಾದ ಮಾಜಿ ಬಾಹ್ಯಾಕಾಶಯಾನಿ 68ರ ಮಹಿಳೆಯ ವಿಶಿಷ್ಠ ದಾಖಲೆ!

    ನವದೆಹಲಿ: ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ಮಾಜಿ ಬಾಹ್ಯಾಕಾಶಯಾನಿ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಾಕಷ್ಟು ಸಮಯ ಇದ್ದು, ಬಾಹ್ಯಾಕಾಶ ನಡಿಗೆ ಕೈಗೊಂಡಿದ್ದ 68 ವರ್ಷದ ಕ್ಯಾಥರೀನ್​ ಸುಲೈವಾನ್​ ವಿಶಿಷ್ಠ ದಾಖಲೆಯೊಂದನ್ನು ಬರೆದಿದ್ದಾರೆ.

    ಈ ಸಾಧನೆ ಬಾಹ್ಯಾಕಾಶದಲ್ಲ. ಬದಲಿಗೆ ಅವರು ಭೂಮಿಯ ಅತ್ಯಂತ ಆಳವಾದ ಪ್ರದೇಶಕ್ಕೂ ಹೋಗಿ ಬರುವ ಜತೆಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಬಾಹ್ಯಾಕಾಶಯಾನಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುವ ಮೂಲಕ ಅವರು ಹೊಸ ದಾಖಲೆ ಬರೆದಿದ್ದಾರೆ.

    ಅಂದಾಜು 37 ವರ್ಷಗಳ ಹಿಂದೆ ಬಾಹ್ಯಾಕಾಶ ನಡಿಗೆ ಕೈಗೊಂಡ ಅಮೆರಿಕದ ಮೊದಲ ಮಹಿಳೆ ಎಂಬ ದಾಖಲೆ ಬರೆದಿದ್ದ ಕ್ಯಾಥರೀನ್​ ಸುಲೈವಾನ್​, ಸಮುದ್ರದಲ್ಲಿ 35 ಸಾವಿರ ಅಡಿ ಆಳದವರೆಗೆ ಡೈವಿಂಗ್​ ಮಾಡುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಹಾಗೂ ಈ ಸಾಧನೆ ಮಾಡಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಇವರದ್ದಾಗಿದೆ.

    ಇದನ್ನೂ ಓದಿ: ಕರ್ನಾಟಕಕ್ಕೆ ಪ್ರವೇಶ ಬೇಕೆ? ಇನ್ನೂ 10 ದಿನಗಳವರೆಗೆ ಕಾಯಿರಿ!

    ಕಲಾಡನ್​ ಓಷಿಯಾನಿಕ್​ ಪೈಲಟ್​ ವಿಕ್ಟರ್​ ವೆಸ್ಕೋವೋ ಜತೆ ಚಾಲೆಂಜರ್​ ಡೀಪ್​ ಎಕ್ಸಿಪಿಡಿಷನ್​ಗೆ ತೆರಳಿದ ಇವರು ಸಮುದ್ರದ 35 ಸಾವಿರ ಅಡಿ ಆಳದ ತಳಭಾಗದವರೆಗೆ ಹೋಗಿ ಬಂದಿದ್ದಾರೆ.

    ಲಿಮಿಟಿಂಗ್​ ಫ್ಯಾಕ್ಟರ್​ ಎಂಬ ನೀರಿನತಳಭಾಗದ ವಾಹನದಲ್ಲಿ ಇಷ್ಟು ಆಳದವರೆಗೆ ಹೋಗಿ ಬಂದ ಇವರು ಮಾರ್ಗದುದ್ದಕ್ಕೂ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಬಾಹ್ಯಾಕಾಶಯಾನಿಗಳ ಜತೆ ನಿರಂತರ ಸಂವಹನ ನಡೆಸಿದರು.

    ದ ಚಾಲೆಂಜರ್​ ಡೀಪ್​ ಎಂಬುದು ಮಾರಿಯಾನಾ ಟ್ರೆಂಚ್​ನಲ್ಲಿರುವ ಸಮುದ್ರದ ಅತ್ಯಂತ ತಳಭಾಗವಾಗಿದೆ. ಇಲ್ಲಿ ಕೆಲವೊಮ್ಮೆ ಗರಿಷ್ಠ ಒತ್ತಡದ ವಾತಾವರಣ ಇದ್ದರೆ, ಹಲವೊಮ್ಮೆ ಅತ್ಯಂತ ಕನಿಷ್ಠ ಒತ್ತಡದ ವಾತಾವರಣ ಇರುತ್ತದೆ. ಮಾರ್ಗದುದ್ದಕ್ಕೂ ದಟ್ಟಕತ್ತಲೆ ಇದ್ದು, ಈ ವಾತಾವರಣದಲ್ಲಿ ಸೂಕ್ಷ್ಮಾಣುಜೀವಿಗಳು ಬಿಟ್ಟರೆ ಬೇರಾವುದೇ ಜೀವಿಗಳು ಜೀವಿಸುವುದಿಲ್ಲ ಎನ್ನಲಾಗಿದೆ.

    ಒಟ್ಟಾರೆ 8ನೆಯವರು: ಮಾರಿಯಾನಾ ಟ್ರೆಂಚ್​ಗೆ ಇದುವರೆಗೆ 8 ಜನರು ಮಾತ್ರ ಹೋಗಿಬಂದಿದ್ದಾರೆ. ಈ ಸಾಧನೆ ಮಾಡಿದ ಮೊದಲ ಮಹಿಳೆ ಕ್ಯಾಥರೀನ್​ ಸುಲೈವಾನ್​. 1960ರಲ್ಲಿ ಮೊದಲ ಬಾರಿಗೆ ಡಾನ್​ ವಾಲ್ಷ್​ ಮತ್ತು ಜಾಕಸ್​ ಪಿಕಾರ್ಡ್​ ಎಂಬುವರು ಇಷ್ಟು ಆಳದವರೆಗೆ ಹೋಗಿ ಬಂದಿದ್ದರು.

    ಇದನ್ನೂ ಓದಿ: ಶೀಘ್ರವೇ ಗ್ರಾಮೀಣ ಭಾಗಗಳಲ್ಲಿ ಇಂಟರ್ನೆಟ್‌ ಸಂಪರ್ಕ ಸುಧಾರಣೆ: ಡಾ. ಅಶ್ವತ್ಥನಾರಾಯಣ

    ಸಮುದ್ರದ ಅತ್ಯಂತ ತಳಭಾಗದವರೆಗೆ ಹೋಗಿಬಂದ ಬಳಿಕ ಸುದ್ದಿಗಾರರ ಜತೆ ಸಾಧನೆಯ ಸಂತಸ ಹಂಚಿಕೊಂಡ ಕ್ಯಾಥರೀನಾ ಸುಲೈವಾನ್​, ಒಬ್ಬ ವೃತ್ತಿಪರ ಬಾಹ್ಯಾಕಾಶಯಾನಿಯಾಗಿ ಮತ್ತು ಹವ್ಯಾಸಿ ಸಮುದ್ರಶಾಸ್ತ್ರಜ್ಞರಾಗಿ ನನ್ನ ಜೀವನದ ಅವಿಸ್ಮರಣೀಯ ಕ್ಷಣ ಇದಾಗಿತ್ತು. ಇದು ಜೀವನದಲ್ಲಿ ಒಮ್ಮೆ ಮಾತ್ರ ಸಿಗಬಹುದಾದ ಅವಕಾಶ. ಚಾಲೆಂಜರ್​ ಡೀಪ್​ನ ಡೈವ್​ ಮಾಡುತ್ತಲೇ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿರುವ ನನ್ನ ಸಹೋದ್ಯೋಗಿಗಳೊಂದಿಗೆ ಅದರ ಅನುಭವ ಹಂಚಿಕೊಂಡಿದ್ದು ರೋಮಾಂಚಕಾರಿ ಅನುಭವ ನೀಡಿತು ಎಂದು ಹೇಳಿದರು.

    ಭೂಗರ್ಭಶಾಸ್ತ್ರದಲ್ಲಿ ಪಿಎಚ್​.ಡಿ: ಕ್ಯಾಥರೀನಾ ಸುಲೈವಾನ್​ ಅಮೆರಿಕದ ಡಾಲ್​ಹೌಸಿ ವಿಶ್ವವಿದ್ಯಾಲಯದಲ್ಲಿ ಭೂಗರ್ಭಶಾಸ್ತ್ರದಲ್ಲಿ ಪಿಎಚ್​.ಡಿ. ಮಾಡಿದ್ದಾರೆ. ಇವರು ಸಮುದ್ರಶಾಸ್ತ್ರಜ್ಞರಾಗಿ ಅಮೆರಿಕದ ನೌಕಾಪಡೆಯ ಮೀಸಲು ಪಡೆಗೆ ಸೇರ್ಪಡೆಗೊಂಡಿದ್ದ ಇವರು ನಂತರದಲ್ಲಿ ನಾಸಾಕ್ಕೆ ಸೇರಿ, ಬಾಹ್ಯಾಕಾಶಯಾನ ಕೈಗೊಂಡಿದ್ದರು.

    ಬಾಹ್ಯಾಕಾಶಯಾನ ಮಾಡದಿರುವ ಸಮಯದಲ್ಲಿ ಇವರು ಅಟ್ಲಾಂಟಿಕ್​ ಮತ್ತು ಪೆಸಿಫಿಕ್​ ಮಹಾಸಾಗರದಲ್ಲಿ ಹಲವು ಬಾರಿ ಡೈವಿಂಗ್​ ಮಾಡಿ, ಅಧ್ಯಯನ ಮಾಡಿದ್ದಾರೆ.

    ಅತ್ತ ಪತಿರಾಯ ಜವರಾಯನ ಮಡಿಲಿಗೆ, ಇತ್ತ ಮಗು ತಾಯಿಯ ಮಡಿಲಿಗೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts