ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ನಿಮಿತ್ತ ಬಿಜೆಪಿ ಮಹಾನಗರ ಜಿಲ್ಲಾ ಹಾಗೂ ಬೆಳಗಾವಿ ಉತ್ತರ ಮಂಡಳದಿಂದ ಶಾಸಕರಾದ ಅನಿಲ ಬೆನಕೆ, ಅಭಯ ಪಾಟೀಲ ನೇತೃತ್ವದಲ್ಲಿ ನಗರದ ಮಹಾದೇವ ಮಂದಿರ ಹಾಗೂ ಗಣೇಶ ಮಂದಿರದಲ್ಲಿ ಗುರುವಾರ ವಿಶೇಷ ಪೂಜೆ ಸಲ್ಲಿಸಲಾಯಿತು.
ಅನಿಲ ಬೆನಕೆ ಮಾತನಾಡಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆದೇಶದನ್ವಯ ಭಾರತದೆಲ್ಲೆಡೆ ಸೇವಾ ಸಪ್ತಾಹ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಬಳಿಕ ಬಿಜೆಪಿ ಉತ್ತರ ಮಂಡಳದಿಂದ ನಗರದ ಚಿಕ್ಕುಂಬಿ ಮಠದಲ್ಲಿ ಹಣ್ಣು ವಿತರಿಸಲಾಯಿತು. ಬಿಜೆಪಿ ಉತ್ತರ ಮಂಡಳ ಮಹಿಳಾ ಮೋರ್ಚಾ ವತಿಯಿಂದ ಮಹೇಶ್ವರಿ ಅಂಧ ಮಕ್ಕಳ ಶಾಲಾ ಮಕ್ಕಳಿಗೆ ಹಣ್ಣು ವಿತರಿಸಲಾಯಿತು.
ಬಿಜೆಪಿ ಯುವಾ ಮೋರ್ಚಾ ಮಹಾನಗರ ವತಿಯಿಂದ ಬಿಜೆಪಿ ಮಹಾನಗರ ಜಿಲ್ಲಾ ಕಚೇರಿ ಹಾಗೂ ಸದಾಶಿವ ನಗರದಲ್ಲಿ ರಕ್ತದಾನ ಶಿಬಿರ ನಡೆಯಿತು. ಬಿಜೆಪಿ ಎಸ್‌ಸಿ ಮೋರ್ಚಾ ಮಹಾನಗರ ವತಿಯಿಂದ ರೈಲ್ ನಗರದಲ್ಲಿನ ನಂದನ ಮಕ್ಕಳ ಧಾಮದಲ್ಲಿ ಹಣ್ಣು, ಸ್ಯಾನಿಟೈಜರ್ ಹಾಗೂ ಮಾಸ್ಕ್ ವಿತರಿಸಲಾಯಿತು. ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಮಹಾನಗರ ವತಿಯಿಂದ ಶಾಹು ನಗರದ ಮಲ್ಲಿಕಾರ್ಜುನ ವೃದ್ಧಾಶ್ರಮದಲ್ಲಿ ಹಣ್ಣು ವಿತರಿಸಲಾಯಿತು.
ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಶಶಿಕಾಂತ ಪಾಟೀಲ, ಬೆಳಗಾವಿ ಉತ್ತರ ಮಂಡಳ ಅಧ್ಯಕ್ಷ ಪಾಂಡುರಂಗ ಧಾಮಣೇಕರ, ಕರ್ನಾಟಕ ಅಲ್ಪಸಂಖ್ಯಾತ ನಿಗಮದ ಅಧ್ಯಕ್ಷ ಮುಕ್ತಿಯಾರ್ ಫಠಾಣ, ಮಹಾನಗರ ಯುವ ಮೋರ್ಚಾ ಅಧ್ಯಕ್ಷ ಪ್ರಸಾದ ದೇವರಮಣಿ, ಸವಿತಾ ಕರಡಿ, ಮಂಜುನಾಥ ಪಮ್ಮಾರ, ಗಿರೀಶ ದೊಂಗಡಿ, ಜಾರ್ಜ್ ಡಿಸೋಜಾ ಮತ್ತಿತರರು ಇದ್ದರು.