More

    13ರ ಸ್ಪೆಷಲ್ ಸಾಂಗ್; ನರೇಂದ್ರ ಬಾಬು ನಿರ್ದೇಶನದ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ

    ಬೆಂಗಳೂರು: ‘6-5=2’, ‘*121.’, ‘ವೈ2ಕೆ’ ಹೀಗೆ ಸಂಖ್ಯೆಗಳೇ ಸಿನಿಮಾ ಟೈಟಲ್ ಆಗಿರುವ ಕೆಲವು ಉದಾಹರಣೆಗಳಿವೆ. ಆ ಸಾಲಿಗೆ ಹೊಸ ಸೇರ್ಪಡೆ ಕೆ. ನರೇಂದ್ರ ಬಾಬು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ‘13’.

    ಮನರಂಜನೆಯ ಜತೆ ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳನ್ನಿಟ್ಟುಕೊಂಡು ಸಾಮಾಜಿಕ ಸಂದೇಶ ಸಾರುವ ಪ್ರಯತ್ನ ಮಾಡಿದ್ದಾರೆ ನರೇಂದ್ರ ಬಾಬು. ರಾಘವೇಂದ್ರ ರಾಜಕುಮಾರ್, ಶ್ರುತಿ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರವೀಗ ಬಿಡುಗಡೆಯ ಹಂತದಲ್ಲಿದ್ದು, ಇತ್ತೀಚೆಗಷ್ಟೆ ಈ ಚಿತ್ರದ ಸ್ಪೆಷಲ್ ಸಾಂಗ್ ಬಿಡುಗಡೆ ಮಾಡಲಾಯಿತು. ‘ಸಿಂಗಲ್ ಸೇವಂತಿ…’ ಎಂದು ಸಾಗುವ ಈ ಹಾಡಿಗೆ ಲಕ್ಷ್ಮಿ ದಿನೇಶ್ ಸಾಹಿತ್ಯ, ಸ್ಲೋಗನ್ ಬಾಬು ಸಂಗೀತ ಹಾಗೂ ಇಂದೂ ನಾಗರಾಜ್ ಕಂಠದಾನವಿದೆ. ‘ಮೋಹನ್ ಪಾತ್ರದಲ್ಲಿ ರಾಘಣ್ಣ, ಮುಸ್ಲಿಂ ಮಹಿಳೆಯಾಗಿ ಶ್ರುತಿ ನಟಿಸಿದ್ದು, ಇಬ್ಬರೂ ನಮ್ಮ ಚಿತ್ರಕ್ಕೆ ಎರಡು ಕಣ್ಣುಗಳು. ಮುಂಬೈ ಮೂಲದ ಪ್ರೀತಿ ಗೋಸ್ವಾಮಿ ಈ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ’ ಎಂದು ಮಾಹಿತಿ ನೀಡಿದರು.

    ಇದನ್ನೂ ಓದಿ: ಆಗ ಇದ್ದ 22 ಇಂಚಿನ ಸೊಂಟ ಈಗಿಲ್ಲ…ಹಳೆಯ ಫೋಟೋ ಸಮೇತ ಇಂಟರೆಸ್ಟಿಂಗ್ ಪೋಸ್ಟ್ ಹಾಕಿದ ನಟಿ!

    ರಾಘವೇಂದ್ರ ರಾಜಕುಮಾರ್, ‘ಚಿತ್ರದ ಕಥೆ ಮತ್ತು ಟೈಟಲ್ ನನಗೆ ತುಂಬ ಖುಷಿ ನೀಡಿತು. ಸಸ್ಪೆನ್ಸ್ ಇರುವ ಈ ಚಿತ್ರ ಒಳ್ಳೆಯ ಅನುಭವ ನೀಡಿತು. 25 ವರ್ಷಗಳ ನಂತರ ಶ್ರುತಿ ಜತೆ ನಟಿಸಿದ್ದೇನೆ’ ಎಂದರು. ಶ್ರುತಿ, ‘ಮೊದಲ ಬಾರಿ ಮುಸ್ಲಿಂ ಮಹಿಳೆಯ ಪಾತ್ರ ಮಾಡಿದ್ದೇನೆ. ನನ್ನ ಹೆಸರು ಸಾಯಿರಾ ಬಾನು’ ಎಂದರು. ಬಳಿಕ ನಟ ವಿನಯ್ ರಾಜಕುಮಾರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್ ಚಿತ್ರತಂಡಕ್ಕೆ ಶುಭಹಾರೈಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts