More

    ಬಿಳಿಗಿರಿರಂಗನಬೆಟ್ಟ ಗ್ರಾಪಂ ವಿಶೇಷ ಗ್ರಾಮಸಭೆ

    ಯಳಂದೂರು: ತಾಲೂಕಿನ ಬಿಳಿಗಿರಿರಂಗನಬೆಟ್ಟದ ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ 2022-23ನೇ ಸಾಲಿನ ನರೇಗಾ ಸಾಮಾಜಿಕ ಲೆಕ್ಕ ತಪಾಸಣೆ ಹಾಗೂ 15ನೇ ಹಣಕಾಸು ಯೋಜನೆಯ ವಿಶೇಷ ಗ್ರಾಮಸಭೆ ನಡೆಯಿತು.

    ಸಭೆಯಲ್ಲಿ 2022-23ನೇ ಸಾಲಿನ ನರೇಗಾ ಕಾರ್ಯಕ್ರಮದ ಮಾಹಿತಿ ಮಂಡಿಸಿದ ಸಾಮಾಜಿಕ ಲೆಕ್ಕ ತಪಾಸಣೆಯ ತಾಲೂಕು ಸಂಯೋಜಕ ನಾರಾಯಣ, ಪಂಚಾಯಿತಿಯಲ್ಲಿ ಒಟ್ಟು 119 ಕಾಮಗಾರಿಗಳು ನಡೆದಿವೆ. ಇದರಲ್ಲಿ ಕೂಲಿ ಮೊತ್ತ 12.26 ಲಕ್ಷ ರೂ. ಹಾಗೂ ಸಾಮಗ್ರಿ ಮೊತ್ತ 21 ಲಕ್ಷ ರೂ. ಪಾವತಿಸಲಾಗಿದೆ. ಒಟ್ಟು 3,970 ಮಾನವ ದಿನಗಳನ್ನು ಸೃಜಿಸಲಾಗಿದೆ. ಕಾಫಿಗಿಡ ನೆಡುವುದು, ಸೋಕ್ ಫಿಟ್ ನಿರ್ಮಾಣ, ಬದು ನಿರ್ಮಾಣ, ಆನೆಕಂದಕ, ಕಾಲುವೆ ಅಭಿವೃದ್ಧಿ, ಕೃಷಿ ಹೊಂಡ, ಕಾಳು ಮೆಣಸು ನೆಡುವ ಕಾಮಗಾರಿಗಳನ್ನು ಮಾಡಲಾಗಿದೆ. ತೋಟಗಾರಿಕೆ ಇಲಾಖೆಯ 12 ಕಾಮಗಾರಿಗಳನ್ನು ಮಾಡಲಾಗಿದ್ದು, 174 ಕುಟುಂಬಗಳು ಇದರ ಲಾಭ ಪಡೆದುಕೊಂಡಿವೆ ಎಂದು ಮಾಹಿತಿ ನೀಡಿದರು.

    ಅಧ್ಯಕ್ಷ ಪ್ರದೀಪ್‌ಕುಮಾರ್ ಮಾತನಾಡಿ, ನರೇಗಾದಲ್ಲಿ ನಿಗದಿತ ಪ್ರಮಾಣದಲ್ಲಿ ಕೆಲಸಗಳು ನಡೆದಿಲ್ಲ. ಇಲ್ಲಿ ಕೂಲಿ ಮಾಡಲು ಅನೇಕ ಅವಕಾಶಗಳಿವೆ. ಹಾಗಾಗಿ ಇಲ್ಲಿರುವ ಬುಡಕಟ್ಟು ಸೋಲಿಗ ಜನಾಂಗವೂ ಸೇರಿದಂತೆ ಇತರರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

    ನೋಡಲ್ ಅಧಿಕಾರಿ ಸುನೀಲ್‌ಕುಮಾರ್, ಪಿಡಿಒ ಲಲಿತಾ, ಉಪಾಧ್ಯಕ್ಷೆ ಕಮಲಮ್ಮ, ಸದಸ್ಯರಾದ ರಂಗಮ್ಮ, ಸಾಕಮ್ಮ, ಮಾದಮ್ಮ, ಬಸವಣ್ಣ , ನರೇಗಾ ಜೆಇ ಆದರ್ಶ, ಜಿಪಂ ಮಾಜಿ ಉಪಾಧ್ಯಕ್ಷೆ ಕೇತಮ್ಮ, ಅರಣ್ಯ ಇಲಾಖೆ ಕಾಟೇಶ್, ಪೊಲೀಸ್ ಇಲಾಖೆಯ ಗುರುಸಿದ್ದಯ್ಯ, ಮುಖಂಡರಾದ ವೆಂಕಟೇಶ್, ನಾಗೇಶ್, ನಾಗೇಂದ್ರ, ಸುನೀಲ್, ಮಹಾಲಿಂಗ ಇತರರು ಹಾಜರಿದ್ದರು.

    ಕಳೆದ ನ.4ರಂದು ಈ ಗ್ರಾಮಸಭೆ ನಡೆಯಬೇಕಿತ್ತು. ಆದರೆ ಸಭೆಯಲ್ಲಿ ಬೆರಳೆಣಿಕೆಯಷ್ಟು ಜನರು ಮಾತ್ರ ಹಾಜರಿದ್ದಾರೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts