More

    ಗ್ರಾಮೀಣ ಅಭಿವೃದ್ಧಿಗೆ ನರೇಗಾ ವರದಾನ

    ಮಾಗಡಿ: ಗ್ರಾಮೀಣ ಅಭಿವೃದ್ಧಿಗೆ ನರೇಗಾ ವರದಾನವಾಗಿದ್ದು, ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸಾತನೂರು ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ವಿ. ಚರಣ್​ರಾಜ್ ಕರೆ ನೀಡಿದರು.

    ತಾಲೂಕಿನ ಸಾತನೂರು ಗ್ರಾಪಂನಲ್ಲಿ ಗುರುವಾರ ನಡೆದ ಗ್ರಾಮಸಭೆಯಲ್ಲಿ ಮಾತನಾಡಿ, ಜನರಿಗಾಗಿ ಜನರಿಗೋಸ್ಕರ ಸರ್ಕಾರಗಳು ನರೇಗಾ ಯೋಜನೆ ಜಾರಿಗೆ ತಂದಿದ್ದು, ಇದರಡಿ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ ಎಂದರು.

    ತಾಲೂಕು ಸಾಮಾಜಿಕ ಪರಿಶೋಧನಾ ಸಂಯೋಜಕ ನಾಗರಾಜ್ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಕಾಮಗಾರಿಗಳು ನಡೆದಿದ್ದು ಕೆಲವು ಕಾಮಗಾರಿಗಳ ದಾಖಲೆಗಳಲ್ಲಿ ಲೋಪದೋಷ ಕಂಡುಬಂದಿದ್ದು, ಅವುಗಳನ್ನು ಸರಿಪಡಿಸಿಕೊಳ್ಳುವಂತೆ ತಿಳಿಸಿದರು. ನರೇಗಾದಲ್ಲಿ ಕೆಲಸ ನಿರ್ವಹಿಸಿದ ಫಲಾನುಭವಿಗಳು ಕಾಮಗಾರಿ ಮುಗಿದ ನಂತರ ನಾಮಫಲಕ ತೆರವುಗೊಳಿಸುತ್ತಿರುವುದು ಗಮನಕ್ಕೆ ಬಂದಿದೆ. ಈಬಗ್ಗೆ ಪಿಡಿಒಗಳು ಜಾಗೃತಿ ಮೂಡಿಸುವಂತೆ ತಿಳಿಸಿದರು.

    ಕಾರ್ಯದರ್ಶಿ ಎ. ನಾಗರಾಜು ಮಾತನಾಡಿ, ನರೇಗಾ ಯೋಜನೆಯಡಿ 54 ಲಕ್ಷ ರೂ. ವೆಚ್ಚದಲ್ಲಿ 96 ಕಾಮಗಾರಿಗಳು ನಡೆದಿದ್ದು, ವೈಯಕ್ತಿಕ ಕಾಮಗಾರಿಯಲ್ಲಿ ಕೃಷಿ ಹೊಂಡ, ಜಮೀನು ಅಭಿವೃದ್ಧಿ, ದನಗಳ ಕೊಟ್ಟಿಗೆ, ಕುರಿ ಶೆಡ್ಡು ನಿರ್ವಿುಸಲಾಗಿದೆ. ಹೊಸದಾಗಿ ಬಚ್ಚಲುಗುಂಡಿ, ಕೈತೋಟ ನಿರ್ವಣಕ್ಕೆ ಸರ್ಕಾರ ಅವಕಾಶ ಕಲ್ಪಿಸಿದ್ದು, ರೈತರು ಇದರ ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.

    ಜಿಪಂ ಸಹಾಯಕ ಕಾರ್ಯಪಾಲಕ ಅಭಿಯಂತರ ಸಿ.ಪಿ. ರಂಗನಾಥ, ಪಿಡಿಒ ಶಶಿಕಲಾ, ಗ್ರಾಪಂ ಮಾಜಿ ಅಧ್ಯಕ್ಷರಾದ ಮೂರ್ತಿ, ಕೆ.ಎನ್.ಗಂಗರಾಜು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts