More

    ನರೇಗಾ ಪ್ರಯೋಜನ ಪಡೆಯಿರಿ

    ಬೈಲಹೊಂಗಲ: ಲಾಕ್‌ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಬಡ ಕೂಲಿ ಕಾರ್ಮಿಕರ ಉಪ ಜೀವನಕ್ಕಾಗಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸ ನೀಡಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ನಿರ್ವಹಿಸುವಂತೆ ಜಿಪಂ ಸಿಇಒ ಡಾ. ಕೆ.ವಿ. ರಾಜೇಂದ್ರ ಪ್ರತಿಜ್ಞಾ ವಿಧಿ ಬೋಧಿಸಿದರು.

    ಅವರು ಶುಕ್ರವಾರ ಬೆಳವಡಿ ಗ್ರಾಪಂ ವ್ಯಾಪ್ತಿಯ ಈರಯ್ಯ ಪೂಜೇರ ಅವರ ಹೊಲದಲ್ಲಿ ನಡೆಯುತ್ತಿರುವ ಕೃಷಿ ಹೊಂಡದ ಕಾಮಗಾರಿ ಪರಿಶೀಲಿಸಿ, ಪ್ರಧಾನ ಮಂತ್ರಿ ಮಾನ್‌ಧನ ಯೋಜನೆ ಕುರಿತು ಮಾಹಿತಿ ನೀಡಿ, ಯೋಜನೆಯ ಸದುಪಯೋಗ ಪಡೆಯುವಂತೆ ತಿಳಿಸಿದರು. ಪಡಿತರ ಅಂಗಡಿಯಿಂದ ಜನರಿಗೆ ಸರಿಯಾಗಿ ಪಡಿತರ ವಿತರಣೆಯಾಗುತ್ತಿದೆಯೇ ಎನ್ನುವುದರ ಬಗ್ಗೆ ಮಾಹಿತಿ ಪಡೆದುಕೊಂಡರು. ಕೂಲಿ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿ, ಒಂದು ಕುಟುಂಬಕ್ಕೆ ವರ್ಷಕ್ಕೆ 100 ದಿನ ಕೆಲಸದ ದಿನಗಳಂತೆ ನಿರಂತರವಾಗಿ ಕೆಲಸ ನೀಡಲು ಮತ್ತು ಸಮಯಕ್ಕೆ ಸರಿಯಾಗಿ ಕೂಲಿ ಮೊತ್ತವನ್ನು ಪಾವತಿಸಲು ಕ್ರಮ ವಹಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

    ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಸಂಕಷ್ಟದಲ್ಲಿರುವ ಕೂಲಿ ಕಾರ್ಮಿಕರ ಬಾಳಿಗೆ ಉದ್ಯೋಗ ಖಾತ್ರಿ ಯೋಜನೆ ಆಶಾಕಿರಣವಾಗಿದೆ ಎಂದರು. ತಾಪಂ ಇಒ ಸಮೀರ ಮುಲ್ಲಾ ಮಾತನಾಡಿ, ಈ ಹಿಂದಿನ ಕೂಲಿಯ ಮೊತ್ತವನ್ನು ದಿನಕ್ಕೆ 249 ರೂ. ಗಳಿಂದ 275 ರೂ.ಗೆ ಹೆಚ್ಚಿಸಲಾಗಿದೆ ಎಂದು ಹೇಳಿದರು. ಜಿಪಂ ಸದಸ್ಯ ಈರಣ್ಣ ಕರೀಕಟ್ಟಿ, ತಹಸೀಲ್ದಾರ್ ಡಾ. ದೊಡ್ಡಪ್ಪ ಹೂಗಾರ, ಸಹಾಯಕ ನಿರ್ದೇಶಕ ವಿಜಯ ಪಾಟೀಲ, ಪಿಡಿಒ ಎಚ್. ವಿಶ್ವನಾಥ, ಕಾರ್ಯದರ್ಶಿ ಶ್ರೀಧರ ಚಟ್ಟರಕಿ, ಕಾಳಪ್ಪಾ ಕಂಬಾರ, ಪ್ರವೀಣ ಹೊಸೂರ, ಮಾರುತಿ ಶಿವಾಪುರ ಹಾಗೂ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts