More

    ಒಡೆದ ಮನೆಯಂತಾದ ನರಗುಂದ ಕ್ಷೇತ್ರದ ಕಾಂಗ್ರೆಸ್​

    ಶಿವಾನಂದ ಹಿರೇಮಠ ಗದಗ
    ವಂಶ ಪಾರಂಪರಿಕ ರಾಜಕಾರಣ ಮತ್ತು ಪಕ್ಷ ವಿರೋಧಿ ಚಟುವಟಿಕೆ ಆರೋಪದಿಂದ ನರಗುಂದ ಕ್ಷೇತ್ರದ ಕಾಂಗ್ರೆಸ್​ ಮನೆ ಒಡೆದ ಹಾಲಿನಂತಾಗಿದೆ. ಬೆರಳೆಣಿಕೆ ಮತಗಳ ಅಂತರದಿಂದ ಕಾಂಗ್ರೆಸ್​ ಅಭ್ಯರ್ಥಿ ಬಿ.ಆರ್​. ಯಾವಗಲ್​ ಪರಾಭವಗೊಂಡ ನಂತರ ಪರಸ್ಪರ ಕೆಸೆರೆರಚಾಟದಲ್ಲಿ ತೋಡಗಿರುವ ಜಿಲ್ಲೆಯ ನರಗುಂದ ಕ್ಷೇತ್ರದ ಕಾಂಗ್ರೆಸ್​ ಮುಖಂಡರ ನಡುವಿನ ಮನಸ್ತಾಪಗಳು ಸದ್ಯಕ್ಕೆ ಶಮನಗೊಳ್ಳುವ ಲಕ್ಷಣ ಕಾಣುತ್ತಿಲ್ಲ.
    ವಂಶ ಪಾರಂಪರಿಕ ರಾಜಕಾರಣವನ್ನು ಕೆಲವರು ಪ್ರಶ್ನಿಸಿದರೆ, ಪಕ್ಷ ವಿರೋಧಿ ಚಟುವಟಿಕೆಯಿಂದ ಕಾಂಗ್ರೆಸ್ಸಿಗೆ ಸೋಲಾಗಿದೆ ಎಂಬುದು ಮತ್ತೊಂದು ಬಣದ ಆರೋಪ. ಬಹಿರಂಗ ಹೇಳಿಕೆ ಮತ್ತು ಸುದ್ದಿಗೋಷ್ಠಿ ಮೂಲಕ ಕೆಲವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಒಂದು ಬಣ ಆಗ್ರಹಿಸದರೆ, ವಂಶ ಪಾರಂಪರಿಕ ರಾಜಕಾರಣವನ್ನು ಪ್ರಶ್ನಿಸಿರುವ ಮತ್ತೊಂದು ಬಣ “ಗೆಲುವಿಗೆ ಅವರಿಗೆ ಶ್ರೇಯಸ್ಸು, ಸೋತರೆ ನಮ್ಮ ಹೊಣೆ ಏಕೆ’ ಎಂದು ಪ್ರಶ್ನಿಸಿದೆ. ನರಗುಂದ ಮತ್ತು ಹೊಳೆಯಾಲೂರು ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಸ್ಥಾನಗಳ ಬದಲಾವಣೆ ನಂತರ ಆರಂಭವಾದ ವೈರುಧ್ಯಗಳು, ಭಿನ್ನಾಭಿಪ್ರಾಯ ಮತ್ತು ಮನಸ್ತಾಪಗಳು ಪ್ರಸಕ್ತ ಚುನಾವಣೆ ಮತ್ತು ಚುನಾವಣೆ ನಂತರವೂ ತನ್ನ ಲಕ್ಷಣ ತೋರಿಸುತ್ತಿದ್ದು, ಮಾಜಿ ಸಚಿವ, ಪರಾಭವಗೊಂಡ ಕಾಂಗ್ರೆಸ್​ ಅಭ್ಯಥಿರ್ ಬಿ.ಆರ್​. ಯಾವಗಲ್​, ಪ್ರವಿಣ ಯಾವಗಲ್​ ಮತ್ತು ದಶರಥ ಗಾಣಿಗೇರ, ಸಂಗಮೇಶ ಕೊಳ್ಳಿ ನಡುವಿನ ಬಿರುಕು ಮತ್ತಷ್ಟು ವ್ಯಾಪಿಸುತ್ತಿದೆ.
    ಡಿಕೆ ಶಿವಕುಮಾರ ಕೆಪಿಸಿಸಿ ಅಧ್ಯಕ್ಷರಾದ ನಂತರ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷರನ್ನು ಬದಲಾವಣೆ ಮಾಡಬೇಕೆಂದು ಆದೇಶ ನೀಡಿದ್ದರು. ಈ ಹಿನ್ನೆಲೆ ಹೊಳೆಯಾಲೂರು ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷರಾಗಿದ್ದ ದಶರಥ ಗಾಣಿಗೇರ ಅವರನ್ನು ಬದಲಾಯಿಸಿ ಮಲ್ಲಣ್ಣ ಕೊಳೇರಿ ಹಾಗೂ ನರಗುಂದ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಚಂಬಣ್ಣ ವಾಳದ ಅವರನ್ನು ಬದಲಾಯಿಸಿ ಪ್ರವಿಣ ಯಾವಗಲ್​ ಅವರನ್ನು ಅಧ್ಯಕ್ಷರನ್ನಾಗಿ ಜಿಲ್ಲಾ ಟಕ ಆದೇಶಿಸಿತ್ತು. ಅಂದಿನಿಂದ ಕ್ಷೇತ್ರದ ಕಾಂಗ್ರೆಸ್​ ಮುಖಂಡರು ವಿರುದ್ಧ ದಿಕ್ಕಿಗೆ ಮುಖ ಮಾಡಿದ್ದಾರೆ.

    ಭಿನ್ನಾಭಿಪ್ರಾಯಕ್ಕೆ ಕಾರಣವೇನು? ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಬಿ.ಆರ್​. ಯಾವಗಲ್​ ವಿರುದ್ಧ ಟಿಕೆಟ್​ ಆಕಾಂಗಳಾದ ದಶರಥ ಗಾಣಿಗೇರ, ಸಂಗಮೇಶ ಕೊಳ್ಳಿಯವರ ಮತ್ತು ಮಾಜಿ ಜಿಪಂ ಅಧ್ಯಕ್ಷ ಸಿದ್ದು ಪಾಟೀಲ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ. ದಶರಥ ಗಾಣಿಗೇರ ಅವರ ಸ್ವಂತ ಊರಾದ ಹುಲ್ಲೂರು, ಸಂಗಮೇಶ ಕೊಳ್ಳಿಯವರ ಕನಕಿಕೊಪ್ಪ ಗ್ರಾಮ, ಲಕ್ಕುಂಡಿ ಭಾಗದಲ್ಲಿ ಸಿದ್ದು ಪಾಟೀಲ ಬಿಜಿಪಿ ಪರವಾಗಿ ಕೆಲಸ ಮಾಡಿದ್ದಾರೆ. ಹಾಗಾಗಿ ಕಾಂಗ್ರೆಸ್ಸಿಗೆ ಈ ಭಾಗದಲ್ಲಿ ಕಡಿಮೆ ಮತಗಳು ಬಂದಿವೆ ಎಂಬುದು ಆರೋಪಿಸಿ ಅವರನ್ನು ಪಕ್ಷದಿಂದ ಉಚ್ಚಾಟಣೆ ಮಾಡಬೇಕು ಎಂದು ಆರೋಪಿಸಿ ಪ್ರವಿಣ ಯಾವಗಲ್​ ಇತ್ತೀಚೆಗೆ ಸುದ್ದಿಗೋಷ್ಠಿ ಮೂಲಕ ಬಹಿರಂಗ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತ್ಯಾರೋಪವಾಗಿ ದಶರಥ ಗಾಣಿಗೇರ ಸುದ್ದಿಗೋಷ್ಠಿ ನಡೆಸಿ, ಪಕ್ಷ ವಿರೋಧಿ ಚಟುವಟಿಕೆಗೆ  ಸಾಕ್ಷ್ಯ ನೀಡುವಂತೆ ಸವಾಲೆಸೆದಿದ್ದರು.

    ಪ್ರವಿಣ ಯಾವಗಲ್​ ಆರೋಪ:
    *ನರಗುಂದ ಕಾಂಗ್ರೆಸ್​ ಕಚೇರಿಯಲ್ಲಿ ಸಭೆ ನಡೆಸಿ 500ಕ್ಕೂ ಹೆಚ್ಚು ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಿ ಈ ಅಭಿಪ್ರಾಯಕ್ಕೆ ಬರಲಾಗಿದೆ. ಪಕ್ಷದಿಂದ ಉಚ್ಚಾಟಣೆ ಮಾಡುವಂತೆ ಲಿಖಿತ ಮೂಲಕ ಮನವಿ ಸಲ್ಲಿಸಲಾಗಿದೆ.
    *ದಶರಥ, ಸಂಗಮೇಶ ಹಾಗೂ ಸಿದ್ದು ಪಾಟೀಲ ಅವರ ಗ್ರಾಮಗಳಲ್ಲಿ ಕಾಂಗ್ರೆಸ್​ ಪರವಾಗಿ ವಾತವರಣ ಇದ್ದರೂ ಕೊನೆಗಳಿಗೆಯಲ್ಲಿ ಕಡಿಮೆ ಮತಗಳ ಕಾಂಗ್ರೆಸ್ಸಿಗೆ ಬಂದಿರುವುದಕ್ಕೆ ಅವರ ಪಕ್ಷ ವಿರೋಧಿ ಚಟುವಟಿಕೆ ಕಾರಣ.

    ಟಿಕೆಟ್​ ಆಕಾಂಗಳಾಗಿದ್ದ ಈ ಮೂವರು ಚುನಾವಣೆಯಲ್ಲಿ ತಟಸ್ಥವಾಗಿದ್ದರೂ ಕಾಂಗ್ರೆಸ್ಸಿಗೆ ಗೆಲವು ನಿಶ್ಚಿತವಾಗಿತ್ತು.

    ಯಾವಗಲ್​ ವಿರುದ್ಧ ಪ್ರತ್ಯಾರೋಪ:
    2018ರ ಸಾಲಿನಲ್ಲಿ ಸರಾಸರಿ 7 ಸಾವಿರ ಅಂತರದಿಂದ ಸೋಲಾಗಿತ್ತು. ಆಗಲೂ ನಮ್ಮನ್ನೇ ಆರೋಪಿಸಲಾಗಿತ್ತು. ಈಗಲೂ ನಮ್ಮನ್ನೇ ಹೊಣೆ ಮಾಡಲಾಗುತ್ತಿದೆ. ಗೆದ್ದರೆ ಅವರೇ ಹೊಣೆ, ಸೋತರೆ ನಾವು ಬಲಿಪಶು.
    *ನರಗುಂದ ಮತ್ತು ಹೊಳೆಯಾಲುರು ಬ್ಲಾಕ್​ ನಲ್ಲಿ ಕಾಂಗ್ರೆಸ್​ ಗೆ ಹಿನ್ನಡೆ ಆಗಿದ್ದು ಸತ್ಯ. ಈ ಹಿನ್ನಡೆಗೆ ಈಗಿರುವ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷರನ್ನು ಹೊಣೆ ಮಾಡಬೇಕು. ವಿನಾಕಾರಣ ನಮ್ಮನ್ನೇಕೆ?

    ಚುನಾವಣೆಯಲ್ಲಿ ನಮ್ಮನ್ನು ಕಡೆಗಣಿಸಲಾಯಿತು.ಚುನಾವಣೆ ಕೊನೆಗಳಿಗೆಯಲ್ಲಿ ನಮ್ಮನ್ನು ಕರೆದು ಅಪಹಾಸ್ಯ ಮಾಡಲಾಯಿತು. ಹೀಗಿದ್ದರೂ ಪಕ್ಷದ ವಿರುದ್ಧ ಚಟುವಟಿಕೆ ಮಾಡಿದ್ದರೆ  ಸಾಕ್ಷ್ಯಗಳ ಸಮೇತ ಸಾಭಿತುಪಡಿಸಲಿ.

    ಬಾಕ್ಸ್​:
    ದಶರಥ ಮತ್ತು ಚಂಬಣ್ಣ ಅವರನ್ನು 2019ರಲ್ಲೂ ಉಚ್ಚಾಟಣೆ ಮಾಡಲಾಗಿತ್ತು. ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಂತರ ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಾರೆ ಎಂದು ಮಾ.20, 2019ರಲ್ಲಿ ಉಚ್ಚಾಟನೆ ಮಾಡಿ ಆದೇಶಿಲಾಗಿತ್ತು. ಆದರೆ, ಪಕ್ಷದಿಂದ ಉಚ್ಚಾಟನೆಗೊಂಡಿದ್ದ ದಶರಥ ಮತ್ತು ಚಂಬಣ್ಣ ಅವರನ್ನು ಪಕ್ಷಕ್ಕೆ ಮರಳಿ ಕರೆತರುವಲ್ಲಿ ಕೆಪಿಸಿಸಿ ವೈದ್ಯಕಿಯ ಟಕದ ಉಪಾಧ್ಯಕ್ಷ ಸಂಗಮೇಶ ಕೊಳ್ಳಿ ಯಶಸ್ವಿ ಆಗಿದ್ದರು.

    ಹಿನ್ನಲೆ ಏನು? ಮೂಲಗಳ ಪ್ರಕಾರ ಬಿ.ಆರ್​. ಯಾವಗಲ್​ ವಿರುದ್ಧ ದಶರಥ, ಸಂಗಮೇಶ ಮತ್ತು ಸಿದ್ದು ಪಾಟೀಲ ಮತ್ತು ಪ್ರಕಾಶ ಕರಿ ಪ್ರಬಲ ಟಿಕೆಟ್​ ಆಕಾಂಗಳಾಗಿದ್ದರು. ಟಿಕೆಟ್​ ಘೋಷಣೆ ನಂತರ ಸಿದ್ದರಾಮಯ್ಯ ಪ್ರಭಾವದಿಂದ ಕುರುಬ ಸಮುದಾಯದ ಪ್ರಕಾಶ ಕರಿ ಕಾಂಗ್ರೆಸ್ಸಿನ ಪರ ಪ್ರಚಾರ ನಡೆಸಿದರು. ಇನ್ನೂಳಿದವರ ಪಕ್ಷನಿಷ್ಠೆ ಈಗ ಪ್ರಶ್ನೆಯಾಗಿ ಕಾಡುತ್ತಿದೆ ಎನ್ನಲಾಗಿದೆ.ಅದಕ್ಕೂ ಪೂರ್ವದಲ್ಲಿ 2018ರಲ್ಲೂ ದಶರಥ ಗಾಣಿಗೇರ ಟಿಕೆಟ್​ ಆಕಾಂ ಆಗಿದ್ದರು. ಹೊಳೆಯಾಲೂರು ಭಾಗದಲ್ಲಿ ಗಾಣಿಗೇರ ಮತಗಳು ಅಧಿಕವಾಗಿದ್ದರಿಂದ 2023ರಲ್ಲಿ ಪ್ರಬಲ ಸ್ಪಧಿರ್ ಆಗಬಹುದು ಎಂಬ ನಿಟ್ಟಿನಲ್ಲಿ ಅವರನ್ನು ಹೊಳೆಯಾಲುರು ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸಲಾಯಿತು ಎಂಬುದು ಕೂಡ ಕ್ಷೇತ್ರದಲ್ಲಿ ಕೇಳಿಬರುತ್ತಿದೆ. ಇನ್ನೂ ದಶರಥ ಅವರು ಜಿ.ಎಸ್​. ಪಾಟೀಲರಿಗೆ, ಸಂಗಮೇಶ ಕೊಳ್ಳಿ ಅವರು ವಿನಯ ಕುಲಕಣಿರ್ ಮತ್ತು ಡಿಕೆಶಿ ಅವರಿಗೆ ಹಾಗೂ ಸಿದ್ದು ಪಾಟೀಲ ಅವರು ಎಚ್​.ಕೆ. ಪಾಟೀಲ ಅವರಿಗೆ ಪರಮಾಪ್ತರು ಆಗಿರುವುದರಿಂದ ಮತ್ತು ಲೋಕಸಭಾ ಚುನಾವನೆ ದೃಷ್ಟಿಯಿಂದ ಪಕ್ಷದಿಂದ ಉಚ್ಚಾಟಣೆ ಅಸಾಧ್ಯ ಎಂಬ ಮಾತುಗಳು ಕೇಳಿ ಬರುತ್ತಿವೆ.

    ಕೋಟ್​:
    ಪಕ್ಷದ್ರೋಹಿಗಳನ್ನು ಉಚ್ಚಾಟಣೆ ಮಾಡುವಂತೆ ಜಿಲ್ಲಾಧ್ಯಕ್ಷ ಜಿ.ಎಸ್​. ಪಾಟೀಲ, ಉಸ್ತುವಾರಿ ಸಚಿವ ಎಚ್​.ಕೆ. ಪಾಟೀಲ, ಸಲಿಂ ಅಹಮ್ಮದ, ಡಿಕೆ ಶಿವಕುಮಾರ ಮತ್ತು ಸಿಎಂ ಸಿದ್ದರಾಮಯ್ಯ ಅವರಿಗೆ ಸುಮಾರು 400 ಜನರ ನಿಯೋಗ ಪ್ರತ್ಯೇಕವಾಗಿ ಮನವಿ ಸಲ್ಲಿಸಲಾಗಿದ್ದು, ಪಕ್ಷದ ತೀರ್ಮಾನದಂತೆ ನಾವೂ ನಡೆದುಕೊಳ್ಳುತ್ತೇವೆ.
    – ಪ್ರವಿಣ ಯಾವಗಲ್​, ನರಗುಂದ ಬ್ಲಾಕ್​ ಅಧ್ಯಕ್ಷ

    -ಕೋಟ್​
    ಜಿ.ಎಸ್​. ಪಾಟೀಲ ಅವರ ಜತೆ ಚುನಾವಣೆಯಲ್ಲಿ ಸಕ್ರೀಯ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ನಮ್ಮ ಶ್ರಮದಾನ ಏನು ಎಂಬುದು ಜಿಲ್ಲಾ ಟಕಕ್ಕೆ ಅರಿವಿಗಿದೆ. ನಿರಾಧಾರ ಆರೋಪಗಳಿಗೆ ಬೆಲೆ ನೀಡುವ ಅಗತ್ಯವಿಲ್ಲ.
    – ದಶರಥ ಗಾಣಿಗೇರ, ಕಾಂಗ್ರೆಸ್​ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts