More

    ನಾರದ ಲಂಚ ಪ್ರಕರಣ : ಟಿಎಂಸಿ ನಾಯಕರಿಗೆ ಮಧ್ಯಂತರ ಜಾಮೀನು

    ಕೊಲ್ಕತ : ನಾರದ ಲಂಚ ಪ್ರಕರಣದಲ್ಲಿ ಆರೋಪಿಗಳಾಗಿರುವ ನಾಲ್ವರು ಟಿಎಂಸಿ ಮುಖಂಡರಿಗೆ ಕೊಲ್ಕತಾ ಹೈಕೋರ್ಟ್ ಇಂದು ಜಾಮೀನು ನೀಡಿದೆ. ಪಶ್ಚಿಮ ಬಂಗಾಳದ ಸಚಿವರಾದ ಫಿರ್ಹಾದ್​ ಹಕೀಂ ಮತ್ತು ಸುಬ್ರತ ಮುಖರ್ಜಿ, ಶಾಸಕ ಮದನ್​ ಮಿತ್ರ ಮತ್ತು ಕಾರ್ಯಕರ್ತ ಸೊವನ್ ಚಟರ್ಜಿ ಅವರಿಗೆ ಮಧ್ಯಂತರ ಜಾಮೀನು ಲಭಿಸಿದೆ.

    ಇಬ್ಬರು ಶ್ಯೂರಿಟಿಗಳೊಂದಿಗೆ 2 ಲಕ್ಷ ರೂ,ಗಳ ವೈಯಕ್ತಿಕ ಬಾಂಡ್​ ನೀಡುವ ಷರತ್ತಿನ ಮೇಲೆ ಈ ಜಾಮೀನು ನೀಡಲಾಗಿದ್ದು, ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಅವರು ಪ್ರಕರಣದ ತನಿಖೆಯಲ್ಲಿ ಭಾಗವಹಿಸಬೇಕು ಎಂದು ಕೋರ್ಟ್ ಹೇಳಿದೆ. ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ಈ ಬಗ್ಗೆ ಮಾಧ್ಯಮಗಳಿಗೆ ಯಾವುದೇ ಸಂದರ್ಶನಗಳನ್ನು ನೀಡಬಾರದು ಎಂದೂ ಕೋರ್ಟ್​ ತಾಕೀತು ಮಾಡಿದೆ.

    ಇದನ್ನೂ ಓದಿ: ನಾರದ ಲಂಚ ಪ್ರಕರಣ : ಟಿಎಂಸಿ ನಾಯಕರಿಗೆ ಗೃಹಬಂಧನ

    2014 ರಲ್ಲಿ ನಡೆದ ಸ್ಟಿಂಗ್ ಆಪರೇಷನ್​ನಲ್ಲಿ ಪತ್ರಕರ್ತರೊಬ್ಬರು ಬಿಸಿನೆಸ್​ಮನ್​ ರೀತಿಯಲ್ಲಿ ಬಂಗಾಳದಲ್ಲಿ ಹೂಡಿಕೆ ಮಾಡುವುದಾಗಿ ಹೋಗಿ 7 ಟಿಎಂಸಿ ಸಂಸದರು, 4 ಸಚಿವರು, ಒಬ್ಬ ಶಾಸಕ ಮತ್ತು ಒಬ್ಬ ಪೊಲೀಸ್ ಅಧಿಕಾರಿಗೆ ಲಂಚ ನೀಡಿದ್ದರು. ಈ ಟೇಪ್​ಗಳನ್ನು 2016 ರಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ, ಇದೇ ಮೇ 17 ರಂದು ನಾಲ್ವರು ಟಿಎಂಸಿ ನಾಯಕರನ್ನು ಬಂಧಿಸಿತ್ತು. ಮೇ 21 ರಿಂದ ಈ ನಾಯಕರು ಗೃಹಬಂಧನದಲ್ಲಿದ್ದರು. ಇದೀಗ ಮಧ್ಯಂತರ ಜಾಮೀನು ಲಭಿಸಿದೆ. (ಏಜೆನ್ಸೀಸ್)

    ಟ್ವಿಟರ್​ ವಿರುದ್ಧ ದೆಹಲಿ ಹೈಕೋರ್ಟ್​ಗೆ ಅರ್ಜಿ

    ಹೆದ್ದಾರಿಯಲ್ಲಿ ತರಬೇತಿ ವಿಮಾನದ ಎಮರ್ಜೆನ್ಸಿ ಲ್ಯಾಂಡಿಂಗ್ !

    ಕೋವಿಡ್​ ಹೆಚ್ಚಿರುವ ಜಿಲ್ಲೆಗಳಿಗೆ ಸಿಎಂ ಭೇಟಿ; ಇಂದು ತುಮಕೂರಿಗೆ ಬಿಎಸ್​​ವೈ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts