More

    ನಂ.ಗೂಡಿನಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

    ನಂಜನಗೂಡು: ಜನರ ತೆರಿಗೆ ಹಣವನ್ನು ಸುಲಿಗೆ ಮಾಡಿ ಶೇ.60ರಷ್ಟು ಕಮಿಷನ್ ದಂಧೆಯಲ್ಲಿ ತೊಡಗಿರುವ ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

    ಬಿಜೆಪಿ ಮಂಡಲ ಅಧ್ಯಕ್ಷ ಹೊರಳವಾಡಿ ಪಿ.ಮಹೇಶ್ ಮಾತನಾಡಿ, ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ನಾಯಕರು ಯಾವುದೇ ಪುರಾವೆ ಇಲ್ಲದೇ ಶೇ.40ರಷ್ಟು ಕಮಿಷನ್ ಸರ್ಕಾರವೆಂದು ಕಳಂಕ ಕಟ್ಟಲು ಮುಂದಾಗಿದ್ದರು. ಆದರೀಗ ಬೆಂಗಳೂರಿನಲ್ಲಿ ನಡೆದ ಐಟಿ ದಾಳಿಯಿಂದಾಗಿ ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಕಮಿಷನ್ ದಂಧೆಯಲ್ಲಿ ತೊಡಗಿರುವುದು ರುಜುವಾತು ಆಗಿದೆ. ಆ ಮೂಲಕ ಪಂಚರಾಜ್ಯ ಚುನಾವಣೆಗೆ ಕರ್ನಾಟಕವನ್ನು ಎಟಿಎಂನಂತೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.

    ಕಾಂಗ್ರೆಸ್ ಸರ್ಕಾರ ವರ್ಗಾವಣೆ ದಂಧೆಯಲ್ಲಿ ತೊಡಗಿರುವುದು ಸಹ ಸತ್ಯವಾಗಿದೆ. ನಂಜನಗೂಡಿನಲ್ಲೂ ವರ್ಗಾವಣೆ ದಂಧೆ ಹೆಚ್ಚಾಗಿದೆ. ಇಂತಹ ಭ್ರಷ್ಟಾಚಾರದಲ್ಲಿ ತೊಡಗಿರುವ ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

    ಜಿಪಂ ಮಾಜಿ ಸದಸ್ಯ ಎಸ್.ಎಂ.ಕೆಂಪಣ್ಣ, ತಾಪಂ ಮಾಜಿ ಸದಸ್ಯರಾದ ಹೆಮ್ಮರಗಾಲ ಶಿವಣ್ಣ, ಮಲ್ಕುಂಡಿ ಬಸವರಾಜು, ನಗರಸಭಾ ಸದಸ್ಯ ಮಹದೇವಪ್ರಸಾದ್, ಮುಖಂಡರಾದ ಮಧುರಾಜ್, ಶಿವರುದ್ರ, ಮಹದೇವಸ್ವಾಮಿ, ಸಿದ್ದರಾಜು, ಶಿರಮಳ್ಳಿ ಮಹದೇವಸ್ವಾಮಿ, ಬದನವಾಳು ಮಂಜುನಾಥ್, ಬಸಪ್ಪ, ಮಲ್ಲಿಕಾರ್ಜುನ, ಉಮೇಶ್ ಮೋದಿ, ದೇವಪುತ್ರ, ವಿಷ್ಣು, ರಾಘವೇಂದ್ರ, ಬಾಲಚಂದ್ರ, ಶಂಕರಪ್ಪ ಹಲವರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts