More

    ನಂದಿಹಾಳ ಹಳ್ಳಕ್ಕೆ ನೀರು ಹರಿಸಿ

    ಮಾನ್ವಿ: ನಂದಿಹಾಳ ಹಳ್ಳಕ್ಕೆ ಗೊಲ್ಲದಿನ್ನಿಯಲ್ಲಿರುವ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಎಸ್ಕೇಪ್‌ದಿಂದ ಮೂರು ದಿನ ನಿರಂತರವಾಗಿ ನೀರು ಹರಿಸುವಂತೆ ಆಗ್ರಹಿಸಿ ರೈತರು ನಂದಿಹಾಳ ಗ್ರಾಮದ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಸೋಮವಾರ ಸಂಚಾರ ತಡೆ ಪ್ರತಿಭಟನೆ ನಡೆಸಿದರು.

    ಅಮರಾವತಿ, ನಂದಿಹಾಳ, ಮುಷ್ಟೂರು, ರಾಜಲದಿನ್ನಿ, ಯರಮಲದೊಡ್ಡಿ, ಬುದ್ದಿನ್ನಿ, ರಂಗದಾಳ, ಮಲ್ಲಾಪುರ ಗ್ರಾಮಗಳ ಜಾನುವಾರಗಳಿಗೆ ಮತ್ತು ಬೆಳೆಗಳ ರಕ್ಷಣೆಗೆ ಕಾಲುವೆಯಿಂದ ಹಳ್ಳಕ್ಕೆ ನೀರು ಹರಿಸಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಏಳು ತಾಸು ನಿರಂತರ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು.

    ಬ್ಯಾಗವಾಟ್ ಕ್ರಾಸ್, ಅಮರೇಶ್ವರ ಕ್ಯಾಂಪ್‌ಗಳಲ್ಲಿರುವ ವಿದ್ಯುತ್ ಉಪ ಕೇಂದ್ರಗಳಿಂದ ಪಂಪ್‌ಸೆಟ್‌ಗಳಿಗೆ ನಿರಂತರ ಜ್ಯೋತಿ ಸಂಪರ್ಕ ಕಲ್ಪಿಸಿದ್ದು, 7 ತಾಸು ವಿದ್ಯುತ್ ನೀಡಬೇಕು ಎಂದು ರೈತರು ಆಗ್ರಹಿಸಿದರು. ಮಾಜಿ ಶಾಸಕರಾದ ಗಂಗಾಧರ ನಾಯಕ, ರಾಜಾ ವೆಂಕಟಪ್ಪ ನಾಯಕ ಹೋರಾಟ ಬೆಂಬಲಿಸಿ, ರೈತರ ಬೇಡಿಕೆಗಳನ್ನು ಈಡೇರಿಸುವಂತೆ ತಹಸೀಲ್ದಾರ್ ರಾಜು ಪಿರಂಗಿಯನ್ನು ಒತ್ತಾಯಿಸಿದರು.

    ರೈತರಾದ ಶಿವಶಂಕ್ರಯ್ಯ ರಾಜಲದಿನ್ನಿ, ಈರೇಶ ಪೂಜಾರಿ ರಾಜಲದಿನ್ನಿ, ಹನುಮಂತಗೌಡ ಮುಷ್ಟೂರು, ರಾಮಕೃಷ್ಣ ಅಮರಾವತಿ, ಅಮರೇಶ ನಂದಿಹಾಳ, ಮಲ್ಲಿಕಾರ್ಜುನ ಸ್ವಾಮಿ, ಲಕ್ಷ್ಮಣ ನಾಯಕ, ಶರಣಪ್ಪಗೌಡ, ಗಾದಿ ಲಿಂಗಪ್ಪ, ಶರಣಪ್ಪಗೌಡ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts