More

    ನಮೋ ಆಡಳಿತದಿಂದ ಬದಲಾವಣೆ

    ಯರಗಟ್ಟಿ: ಇಂದು ಕೇಂದ್ರ ಮತ್ತು ರಾಜ್ಯದಲ್ಲಿ ಜನಪರ ಮತ್ತು ಬಲಿಷ್ಠವಾದ, ಸುಭದ್ರ ಆಡಳಿತ ನೀಡಲು ಗ್ರಾಮೀಣ ಭಾಗದ ಪಕ್ಷದ ಪ್ರತಿ ಕಾರ್ಯಕರ್ತರ ಪ್ರಾಮಾಣಿಕ ಸೇವೆ ಕಾರಣವಾಗಿದೆ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದ್ದಾರೆ.

    ಭಾನುವಾರ ಸ್ಥಳೀಯ ಮಹಾಂತ ದುರದುಂಡಿಶ್ವರ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಯರಗಟ್ಟಿ ತಾಲೂಕು ಮಟ್ಟದ ಬಿಜೆಪಿ ಕಾರ್ಯಕರ್ತರ ಪ್ರಶಿಕ್ಷಣಾ ಸಭೆಯಲ್ಲಿ ಮಾತನಾಡಿ, ಜಗತ್ತಿಗೆ ಮಾರಕವಾಗಿರುವ ಭಯೋತ್ಪಾದನೆ ಮಟ್ಟ ಹಾಕಲು ಬಿಜೆಪಿ ಸರ್ಕಾರ ಟೊಂಕ ಕಟ್ಟಿ ನಿಂತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಳ್ಳುತ್ತಿರುವ ಜನಪರ ಆಡಳಿತದಿಂದ ಇಂದು ಭಾರತವು ಅಭಿವೃದ್ಧಿ ಹಾದಿಯಲ್ಲಿ ಸಾಗುತ್ತಿದೆ ಎಂದು ಸಾಧನೆಯನ್ನು ಸ್ಮರಿಸಿದರು.

    ಜಿಲ್ಲಾ ಪಂಚಾಯಿತಿ ಸದಸ್ಯರಾದ ಅಜಿತಕುಮಾರ ದೇಸಾಯಿ, ವಿದ್ಯಾರಾಣಿ ಸೊನ್ನದ, ಬಿಜೆಪಿ ತಾಲೂಕಾಧ್ಯಕ್ಷ ಈರಣ್ಣ ಚಂದರಗಿ, ಜಗದೀಶ ಕೌಜಗೇರಿ, ಬಿ.ಎಸ್.ಬೆಲ್ಲದ, ಚಂದ್ರಶೇಖರ ಅಳಗೊಡಿ, ಕುಮಾರ ಜಕಾತಿ, ತಾಲೂಕು ಪಂಚಾಯಿತಿ ಸದಸ್ಯ ಮಹಾದೇವ ದೊಡ್ಡಲಿಂಗಣ್ಣವರ, ವೆಂಕಟೇಶ ದೇವರಡ್ಡಿ, ಸದಾನಂದ ಹಣಬರ, ಪರ್ವತಗೌಡ ಪಾಟೀಲ, ಡಾ.ಶಂಕರಲಿಂಗಪ್ಪ, ರಾಜೇಂದ್ರ ವಾಲಿ, ಸುರೇಶ ಬಂಟನೂರ, ಗೌಡಪ್ಪ ಸವದತ್ತಿ, ಮಹಾಂತೇಶ ಗೋಡಿ, ವಿಶಾಲಗೌಡ ಪಾಟೀಲ, ಸದಾನಂದ ಪಾಟೀಲ, ಚೇತನ ಜಕಾತಿ, ಕೃಷ್ಣಮೂರ್ತಿ ಇದ್ದರು.

    ತಲ್ಲೂರ ವರದಿ: ಇಂದು ಪಕ್ಷ ಸಂಘಟನೆ ಮೂಲಕ ದೇಶ ಕಟ್ಟುವ ಕೆಲಸವಾಗಬೇಕಿದೆ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಮನಿ ಹೇಳಿದ್ದಾರೆ.

    ಸಮೀಪದ ಜಾಲಿಕಟ್ಟಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಭಾರತೀಯ ಜನತಾ ಪಕ್ಷದ ಪ್ರಶಿಕ್ಷಣ ಪ್ರಕೋಷ್ಠ ಸವದತ್ತಿ ಮಂಡಳದ ಮಬನೂರ ಮಹಾಶಕ್ತಿ ಕೇಂದ್ರದ ಪ್ರಶಿಕ್ಷಣ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು. ಎಪಿಎಂಸಿ ಅಧ್ಯಕ್ಷ ಪ್ರಕಾಶ ನರಿ, ತಾಪಂ ಸದಸ್ಯ ಶಿವಪ್ಪ ಬಂಡ್ರೋಳ್ಳಿ, ಪುಂಡಲೀಕ ಮೇಟಿ, ಸವದತ್ತಿ ಬಿಜೆಪಿ ಮಂಡಲ ಅಧ್ಯಕ್ಷ ಈರಣ್ಣ ಚಂದರಗಿ, ರಾಜ್ಯ ಪಂಚಾಯಿತಿ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಜಗದೀಶ ಕೌಜಗೇರಿ, ಚಂದ್ರಶೇಖರ ಅಳಗೂಡಿ, ಸುಭಾಷ ಪಾಟೀಲ, ಬಾಬು ಪರಾಸಿ, ಶಕ್ತಿ ಕೇಂದ್ರದ ಅಧ್ಯಕ್ಷ ಕಾಡಪ್ಪ ವೀರಶೆಟ್ಟಿ, ಮಲ್ಲೇಶಪ್ಪ ಕಲಕುಟ್ರಿ, ಷಡಕ್ಷರಿ ಮೂರಗೋಡ, ಉಮೇಶ ದಂಡಿನ ಇತರರು ಇದ್ದರು.

    ಬರುವ ಅಧಿವೇಶನದ ನಂತರ ಸತ್ತಿಗೇರಿ ಏತ ನೀರಾವರಿ ಯೋಜನೆಗೆ ನೀರು ಹಂಚಿಕೆ ಮಾಡಿ ಶೀಘ್ರ ಕಾಮಗಾರಿಗೆ ಚಾಲನೆ ನೀಡಲಾಗುವುದು. ಗ್ರಾಮೀಣ ಭಾಗದ ಎಲ್ಲ ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು.
    | ಆನಂದ ಮಾಮನಿ ವಿಧಾನಸಭೆ ಉಪಸಭಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts