More

    ಮಾದನಬಾವಿ ಗವಿಸಿದ್ದೇಶ್ವರ ಸ್ವಾಮಿ ಬನ್ನಿ ಉತ್ಸವ

    ನ್ಯಾಮತಿ: ತಾಲೂಕಿನ ಇತಿಹಾಸ ಪ್ರಸಿದ್ಧ ಮಾದನಬಾವಿ ಗ್ರಾಮದ ದೊಡ್ಡ ಕಲ್ಲು ಕಟ್ಟೆಯ ಶ್ರೀ ಗವಿಸಿದ್ದೇಶ್ವರ ಸ್ವಾಮಿ ಬನ್ನಿ ಉತ್ಸವ ಹಾಗೂ ದೇವರು ಬೆಟ್ಟ ಹತ್ತುವ ಕಾರ್ಯಕ್ರಮ ಶನಿವಾರ ಬೆಳಗಿನ ಜಾವ ನೆರವೇರಿತು.

    ದೊಡ್ಡಕಲ್ಲು ಗವಿ ಸಿದ್ದೇಶ್ವರಸ್ವಾಮಿ ಬನ್ನಿ ಸುತ್ತಮುತ್ತಲ 30 ಗ್ರಾಮಗಳ ಜನರು ಪಾಲ್ಗೊಂಡಿದ್ದರು. ಗ್ರಾಮದ ಗವಿಸಿದ್ದೇಶ್ವರ ಸ್ವಾಮಿ, ಬೀರಲಿಂಗೇಶ್ವರ ಸ್ವಾಮಿ , ಬೆನಕನಹಳ್ಳಿಯ ಬೀರಲಿಂಗೇಶ್ವರ ಸ್ವಾಮಿ , ಅರಬಗಟ್ಟೆಯ ಚಿಕ್ಕಪ್ಪ ದೇವರು (ಎರೆ ಹೊಲದ ಒಡೆಯ), ಮುರಡೇಶ್ವರ ಸ್ವಾಮಿ ದೇವರು ಬನ್ನಿ ಉತ್ಸವದಲ್ಲಿ ಪಾಲ್ಗೊಂಡಿದ್ದವು.

    ಶನಿವಾರ ಬ್ರಾಹ್ಮಿ ಮಹೂರ್ತದಲ್ಲಿ ದೇವರ ಗಣ ಮಗ ಅಂಬು ಹೊಡೆಯುವ ಮೂಲಕ ಬನ್ನಿ ಪೂಜೆ ನೆರವೇರಿತು. ನಂತರ ಅಲಂಕೃತ ಪಲ್ಲಕ್ಕಿಯಲ್ಲಿ ಉತ್ಸವಮೂರ್ತಿಯ ಬೆಟ್ಟವನ್ನೇರುವ ಕಾರ್ಯಕ್ರಮ ನೆರವೇರಿತು. ಡೊಳ್ಳು ಕುಣಿತದ ತಂಡ ಉತ್ಸವಕ್ಕೆ ಮೆರುಗು ನೀಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts