More

    ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮೊಟೆರಾ ಕ್ರೀಡಾಂಗಣ ತಲುಪಿದ ಡೊನಾಲ್ಡ್​ ಟ್ರಂಪ್​; ಲಕ್ಷಾಂತರ ಜನರಿಂದ ತುಂಬಿರುವ ಸ್ಟೇಡಿಯಂ

    ಅಹಮದಾಬಾದ್​: ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮತ್ತು ಮೆಲಾನಿಯಾ ಟ್ರಂಪ್​ ಅವರು ಸಬರಮತಿ ಆಶ್ರಮದಿಂದ ಹೊರಟು ಮೊಟೆರಾ ಕ್ರೀಡಾಂಗಣಕ್ಕೆ ತಲುಪಿದರು.

    ಜಗತ್ತಿನ ಅತಿದೊಡ್ಡ ಕ್ರೀಡಾಂಗಣವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮೊಟೆರಾ ಸ್ಟೇಡಿಯಂನ್ನು ಟ್ರಂಪ್​ ಉದ್ಘಾಟನೆ ಮಾಡಿದ ಬಳಿ ಇಲ್ಲಿ ‘ನಮಸ್ತೆ ಟ್ರಂಪ್’​ ಅದ್ದೂರಿ ಸಮಾರಂಭ ನಡೆಯಲಿದೆ.

    ದಿಗ್ಗಜರ ಆಗಮನಕ್ಕೂ ಮೊದಲೇ ಸ್ಟೇಡಿಯಂನಲ್ಲಿ ಹಾಡು, ಸಂಗೀತ, ನೃತ್ಯಗಳು ಪ್ರಾರಂಭವಾಗಿವೆ. ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ದೇಶದ 1.10 ಲಕ್ಷ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ.

    ಈಗಾಗಲೇ ಕ್ರೀಡಾಂಗಣದಲ್ಲಿ ಜನಸಮೂಹ ಸಾಗರೋಪಾದಿಯಲ್ಲಿ ನೆರೆದಿದೆ. ಇಲ್ಲಿ ಟ್ರಂಪ್​ ಭಾಷಣ ಮಾಡಲಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts