More

    ನಮ್ ಮಕ್ಳಿಗಾದ್ರೂ ಸಹಾಯ ಮಾಡ್ರೀ…

    ಸಂಬರಗಿ: ಮಾರಕ ಕರೊನಾ ವೈರಸ್ ಇಂದು ವಿಶ್ವದ ನಿದ್ದೆಗೆಡಿಸಿರುವುದು ಒಂದೆಡೆಯಾದರೆ, ತುತ್ತು ಅನ್ನಕ್ಕಾಗಿ ಕೂಲಿಕಾರರು ಅನುಭವಿಸುತ್ತಿರುವ ಸಂಕಟ, ನೋವು ಕಲ್ಲು ಹೃದಯಿಗರನ್ನೂ ಕರುಗಿಸುವಂತಿದೆ.

    ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ರೋಹಾ ತಾಲೂಕಿನ ಪೋಲಾಡ ಗ್ರಾಮದ ಕೂಲಿಕಾರ್ಮಿಕರು ಸಮೀಪದ ಶಿರೂರ ಗ್ರಾಮಕ್ಕೆ ಕೆಲಸಕ್ಕೆ ಆಗಮಿಸಿದ್ದರು. ಆದರೆ, ಲಾಕ್‌ಡೌನ್‌ನಿಂದಾಗಿ ಮರಳಿ ಗ್ರಾಮಕ್ಕೆ ಹೋಗಲಾಗದೆ ಪರಿತಪಿಸುತ್ತಿದ್ದಾರೆ. ತುತ್ತಿನ ಚೀಲ ತುಂಬಿಕೊಳ್ಳಲು ನಿತ್ಯವೂ ಹರಸಾಹಸ ಪಡುತ್ತಿದ್ದಾರೆ.

    ಜಾಲಿ ಕಟ್ಟಿಗೆ ಕಟಾವು ಮಾಡಲು ಶಿರೂರ ಗ್ರಾಮಕ್ಕೆ ಕಳೆದ 5 ತಿಂಗಳ ಹಿಂದೆ ಪೋಲಾಡ ಗ್ರಾಮದಿಂದ ಸುಮಾರು 30 ಜನ ಬಂದಿದ್ದರು. ನಿತ್ಯದ ಕೂಲಿಯ ಮೇಲೆ ಇವರ ತುತ್ತಿನ ಜೋಳಿಗೆ ತುಂಬುತ್ತಿತ್ತು. ಆದರೆ, ಲಾಕ್‌ಡೌನ್ ಪರಿಣಾಮದಿಂದ ಇವರು ಒಪ್ಪೊತ್ತಿನ ಊಟಕ್ಕೂ ಈಗ ಸಂಕಟ ಪಡುತ್ತಿದ್ದಾರೆ.

    ಕಣ್ಣೀರು ಸುರಿಸಿದ ಕಾರ್ಮಿಕರು: ‘ಸ್ವಾಮಿ, ನಾವು ದೂರದ ಮಹಾರಾಷ್ಟ್ರದಿಂದ ಕೂಲಿ ಮಾಡಲು ಬಂದಿದ್ದೆವು. ಲಾಕ್‌ಡೌನ್‌ನಿಂದ ಊರಿಗೆ ಹೋಗಲಾಗುತ್ತಿಲ್ಲ. ನಮಗೆ ಉಪವಾಸವಿದ್ದು ರೂಢಿಯಿದೆ. ಆದರೆ, ಪುಟ್ಟ ಕಂದಮ್ಮಗಳ ಹಸಿವಿನ ಗೋಳು ನಮ್ಮ ಕರುಳು ಹಿಂಡುತ್ತಿದೆ. ಇದ್ದವರು ನಮಗಲ್ಲದಿದ್ದರೂ ನಮ್ಮ ಮಕ್ಕಳ ಕಣ್ಣೀರು ಒರೆಸಲು ಮುಂದಾಗಬೇಕು’ ಎಂದು ಕಣ್ಣೀರು ಸುರಿಸುತ್ತಾರೆ ಕೂಲಿ ಕಾರ್ಮಿಕರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts