More

  ಧರಣಿ ಸ್ಥಳಕ್ಕೆ ತನಿಖಾ ತಂಡ ಭೇಟಿ

  ನಾಲತವಾಡ: ಸಮೀಪದ ಬಿಜ್ಜೂರ ಗ್ರಾಮದ ಕಂಪ್ಯೂಟರ್ ಡಾಟಾ ಎಂಟ್ರಿ ಆಪರೇಟರ್ ಅವ್ಯವಹಾರ ಖಂಡಿಸಿ ಗ್ರಾಮಸ್ಥರು ಹಾಗೂ ಡಿಎಸ್‌ಎಸ್ ಸಂಘಟಕರು ಬಿಜ್ಜೂರ ಗ್ರಾಪಂ ಆವರಣದಲ್ಲಿ ಧರಣಿ ಸತ್ಯಾಗ್ರಹ ಮುಂದುವರಿಸಿದ್ದಾರೆ.
  ತಾಪಂ ಇಒ ಶಶಿಕಾಂತ ಶಿವಪುರೆ ಧರಣಿ ಸ್ಥಳಕ್ಕೆ ಭೇಟಿ ನೀಡಿ ಮನವೊಲಿಸಲು ಪ್ರಯತ್ನ ನಡೆಸಿದರೂ ಪ್ರತಿಭಟನಾಕಾರರು ಹೋರಾಟ ಹಿಂಪಡೆಯಲಿಲ್ಲ. ತಾಪಂ ಇಒ ಅವ್ಯವಹಾರದ ತನಿಖೆಗೆ ನಾಲ್ಕು ಅಧಿಕಾರಿಗಳ ತಂಡವನ್ನು ರಚಿಸಿದ್ದು, ಆ ತಂಡದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉಮೇಶ ಪವಾರ, ಕೈಗಾರಿಕಾ ವಿಸ್ತೀರಣಾಧಿಕಾರಿ ಸಂತೋಷ ಸಜ್ಜನ, ತಾಪಂ ಲೆಕ್ಕ ಅಧೀಕ್ಷಕ ಎನ್.ಎಂ.ಬಿಸ್ಟಗೊಂಡ, ತಂಗಡಗಿ ಪಿಡಿಒ ಉಮೇಶ ರಾಠೋಡ ಗ್ರಾಪಂಗೆ ಶನಿವಾರ ಬೆಳಗ್ಗೆ ಭೇಟಿ ನೀಡಿ ಗ್ರಾಮಸ್ಥರು ಸಲ್ಲಿಸಿದ ದೂರುಗಳ ಪರಿಶೀಲನೆ ನಡೆಸಿದರು.

  ಆ ವೇಳೆ ಧರಣಿ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಎಲ್ಲ ದಾಖಲೆಗಳನ್ನು ಪರೀಶಿಲನೆ ಮಾಡುತಿದ್ದೇವೆ. ಧರಣಿ ಕೈಬಿಡಿ ಎಂದು ಮನವಿ ಮಾಡಿದರು. ಆದರೆ ಹೋರಾಟಗಾರರು ಎಲ್ಲ ದಾಖಲೆಯನ್ನು ನಮ್ಮ ಸಮಕ್ಷಮದಲ್ಲಿ ಪರಿಶೀಲನೆ ಮಾಡಬೇಕು. ಕಾಮಗಾರಿ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ಹಾಗೂ ಡಾಟಾ ಎಂಟ್ರಿ ಆಪರೇಟರ್ ವಿರುದ್ಧ ಕ್ರಮ ಜರುಗಿಸುವವರೆಗೆ ಧರಣಿ ಹಿಂಪಡೆಯುದಿಲ್ಲ ಎಂದು ಪಟ್ಟು ಹಿಡಿದರು. ಎಲ್ಲ ದಾಖಲೆಯನ್ನು ನಿಮ್ಮ ಸಮಕ್ಷಮದಲ್ಲಿ ಪರಿಶೀಲಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿ ತಮ್ಮ ಕಾರ್ಯವನ್ನು ಮುಂದುವರಿಸಿದರು.

  ಬಿಜ್ಜೂರ ಗ್ರಾಪಂ ಪಿಡಿಒ ವೀರೇಶ ಹೂಗಾರ, ಗ್ರಾಮಸ್ಥರಾದ ಮಲ್ಲು ತಳವಾರ, ಮಾನಪ್ಪ ಬಿರಾದಾರ, ರಫೀಕ್ ದಖನಿ, ದಸಂಸ ಸಂಘಟಕರಾದ ಮೌನೇಶ ಮಾದರ, ಯಲ್ಲಪ್ಪ ಚಲವಾದಿ, ಮಂಜುನಾಥ ಕಟ್ಟಿಮನಿ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts