More

  ಅಯ್ಯನಗುಡಿ ಜಾನುವಾರ ಜಾತ್ರೆ ಬಹುಮಾನ ವಿತರಣೆ

  ನಾಲತವಾಡ: ಸಮೀಪದ ಅಯ್ಯನಗುಡಿ ಜಾನುವಾರು ಜಾತ್ರೆಯಲ್ಲಿ ಉತ್ತಮ ಜಾನುವಾರುಗಳಿಗೆ ಮಾಜಿ ಸಚಿವ ಸಿ.ಎಸ್. ನಾಡಗೌಡ, ತಾಳಿಕೋಟೆ ಎಪಿಎಂಸಿ ಅಧ್ಯಕ್ಷ ಗುರು ತಾರನಾಳ ಶನಿವಾರ ಬಹುಮಾನ ವಿತರಿಸಿದರು.
  ಬೆಳಗಾವಿಯ ಕೃಷಿ ಉತ್ಪನ್ನ ಮಾರಾಟ ಮಹಾಮಂಡಳಿಯಿಂದ ಉತ್ತಮ ರಾಸುಗಳಿಗೆ ಕೊಡಮಾಡುವ ಪ್ರಥಮ ಬಹುಮಾನದ 10 ಸಾವಿರ ರೂ. ಖಿಲಾರಹಳ್ಳಿಯ ಅಮರೇಶ ಮದರಿ ಅವರ ಹೋರಿ, ದ್ವಿತೀಯ ಬಹುಮಾನ 7 ಸಾವಿರ ರೂ. ನಾಲತವಾಡದ ರಾಯನಗೌಡ ಚಿತ್ತಾಪುರ ಅವರ ಹೋರಿ ಹಾಗೂ ತೃತೀಯ ಬಹುಮಾನ 5 ಸಾವಿರ ರೂ. ಭಂಡನೂರದ ನಿಂಗಪ್ಪ ಕಾಡಮಳ್ಳಿ ಅವರ ಹೋರಿ ಪಡೆದುಕೊಂಡಿತು.
  ಅಲ್ಲದೆ, ತಾಳಿಕೋಟೆ ಎಪಿಎಂಸಿ ಮಾರುಕಟ್ಟೆ ಅಧ್ಯಕ್ಷ ಗುರು ತಾರನಾಳ ಉತ್ತಮ ಕಿಲಾರಿ ಆಕಳಿಗೆ ಘೋಷಿಸಿದ್ದ 5 ಗ್ರಾಂ ಬಂಗಾರವನ್ನು ಮುದ್ದೇಬಿಹಾಳದ ಬಸಪ್ಪ ದ್ಯಾಮಣ್ಣ ತಟ್ಟಿ ಅವರ ಆಕಳು ತನ್ನದಾಗಿಸಿಕೊಂಡಿತು.
  ತಾಳಿಕೋಟೆ ಕೃಷಿ ಮಾರುಕಟ್ಟೆ ಹಾಗೂ ತಾಲೂಕು ಪಶು ಆಸ್ಪತ್ರೆ ವತಿಯಿಂದ ಅಂದಾಜು 70ಕ್ಕೂ ಹೆಚ್ಚು ಜಾನುವಾರುಗಳಿಗೆ ಸಮಾಧಾನಕರ ಬಹುಮಾನ ವಿತರಿಸಲಾಯಿತು.
  ತಾಳಿಕೋಟೆ ಎಪಿಎಂಸಿ ಕಾರ್ಯದರ್ಶಿ ಎಚ್.ಎಸ್. ಅವಟಿ, ಬೆಳಗಾವಿ ಕೃಷಿ ಮಾರಾಟ ಮಂಡಳಿ ಎಜಿಎಂ ಉಮೇಶ ಪಾಟೀಲ, ಬಿಜ್ಜೂರ ಗ್ರಾಪಂ ಅಧ್ಯಕ್ಷೆ ರುಕ್ಮವ್ವ ಮಂಕಣಿ, ಎಪಿಎಂಸಿ ಸದಸ್ಯ ಗುರುಬಾಯಿ ಮುರಾಳ, ತಾಲೂಕು ಸಹಾಯಕ ನಿರ್ದೇಶಕ ಡಾ. ಎಸ್.ಸಿ. ಚೌದರಿ, ನಾಲತವಾಡ ಪಶು ಆಸ್ಪತ್ರೆ ವೈದ್ಯ ಬಿ.ಎಸ್. ಸಜ್ಜನ, ನಾಲತವಾಡ ಕೃಷಿ ಮಾರುಕಟ್ಟೆ ಸಹಾಯಕ ರವಿ ರಾಠೋಡ, ಮಾಂತು ಗೌಡರ, ನಾಲತವಾಡ ಪಶು ಆಸ್ಪತ್ರೆ ಸಹಾಯಕ ಸಿಬ್ಬಂದಿ ಯಾಜ ಮನಿಯಾರ, ಮುಖಂಡರಾದ ಈರಣ್ಣ ನಾಡಗೌಡ, ಅಲ್ಲಾಭಕ್ಷ ಮೂಲಿಮನಿ ಮತ್ತಿತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts