More

    ಟೆನ್ಶನ್‌ನಲ್ಲಿ ಉಗುರುಗಳನ್ನು ಕಚ್ಚುವ ಅಭ್ಯಾಸ ಇದ್ಯಾ? ಹಾಗಿದ್ರೆ ಈ ಸುದ್ದಿ ನಿಮಗಾಗಿ….

     ಬೆಂಗಳೂರು: ಮನೆಯಲ್ಲಿ ಉಗುರು ಕಚ್ಚುವವರಿಗೆ ದೊಡ್ಡವರು ಬೈಯುತ್ತಾರೆ. ಅದೊಂದು ಕೆಟ್ಟ ಅಭ್ಯಾಸ, ಅನಾರೋಗ್ಯ ಉಂಟಾಗುತ್ತದೆ ಎಂದು  ತಜ್ಞರು ಹೇಳುತ್ತಾರೆ.

    ವಾಸ್ತವವಾಗಿ, ಉಗುರು ಕಚ್ಚುವಿಕೆಯು ನಿಮ್ಮನ್ನು ಗಂಭೀರವಾಗಿ ಅನಾರೋಗ್ಯಕ್ಕೆ ಒಳಪಡಿಸಬಹುದು. ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಸಂಶೋಧನೆಯೊಂದರ ಪ್ರಕಾರ, ಜಗತ್ತಿನಲ್ಲಿ ಸುಮಾರು 30 ಪ್ರತಿಶತದಷ್ಟು ಜನರು ತಮ್ಮ ಉಗುರುಗಳನ್ನು ಕಚ್ಚುವ ಅಭ್ಯಾಸವನ್ನು ಹೊಂದಿದ್ದಾರೆ. ಈ ಅಭ್ಯಾಸದಿಂದ ಉಂಟಾಗುವ ಹಾನಿ ಮತ್ತು ಅದನ್ನು ತೊಡೆದುಹಾಕುವುದು ಹೇಗೆ ಎಂದು ತಿಳಿಯೋಣ…

    ಟೆನ್ಶನ್‌ನಲ್ಲಿ ಉಗುರುಗಳನ್ನು ಕಚ್ಚುವ ಅಭ್ಯಾಸ ಇದ್ಯಾ? ಹಾಗಿದ್ರೆ ಈ ಸುದ್ದಿ ನಿಮಗಾಗಿ....

    ಉಗುರು ಕಚ್ಚುವ ಅಭ್ಯಾಸವನ್ನು ಹೋಗಲಾಡಿಸಲು ಟಿಪ್ಸ್ ಅನುಸರಿಸಿ: 

    1.ಬೇವಿನ ರಸವನ್ನು ಉಗುರುಗಳ ಮೇಲೆ ಹಚ್ಚಬಹುದು. ನಿಮ್ಮ ಬಾಯಿಯಲ್ಲಿ ಉಗುರುಗಳನ್ನು ಹಾಕಿದಾಗ ಅದು ಕಹಿಯನ್ನು ಉಂಟುಮಾಡುತ್ತದೆ.  ಹೀಗೆ ಮಾಡುವುದರಿಂದ ಉಗುರು ಕಚ್ಚುವ ಅಭ್ಯಾಸವನ್ನು ನಿಲ್ಲಿಸಬಹುದಾಗಿದೆ.

    ಟೆನ್ಶನ್‌ನಲ್ಲಿ ಉಗುರುಗಳನ್ನು ಕಚ್ಚುವ ಅಭ್ಯಾಸ ಇದ್ಯಾ? ಹಾಗಿದ್ರೆ ಈ ಸುದ್ದಿ ನಿಮಗಾಗಿ....

    2. ಒತ್ತಡದಲ್ಲಿದ್ದಾಗ ಅನೇಕರು ತಮ್ಮ ಉಗುರುಗಳನ್ನು ಕಚ್ಚುತ್ತಾರೆ. ಆದ್ದರಿಂದ, ಒತ್ತಡವನ್ನು ನಿವಾರಿಸಲು ಪ್ರಯತ್ನಿಸಿ.

    ಟೆನ್ಶನ್‌ನಲ್ಲಿ ಉಗುರುಗಳನ್ನು ಕಚ್ಚುವ ಅಭ್ಯಾಸ ಇದ್ಯಾ? ಹಾಗಿದ್ರೆ ಈ ಸುದ್ದಿ ನಿಮಗಾಗಿ....

    3. ನೀವು ಉಗುರು ಕಚ್ಚುವ ಕೆಟ್ಟ ಅಭ್ಯಾಸವನ್ನು ತೊಡೆದುಹಾಕಲು ಬಯಸಿದರೆ,  ಉಗುರುಗಳು ಆದಷ್ಟು ಚಿಕ್ಕದಾಗಿ ಇರುವಂತೆ ನೋಡಿಕೊಳ್ಳಿ.

    4) ಈ ಚಟವನ್ನು ಆರೋಗ್ಯಕರ ಅಭ್ಯಾಸ ಅಥವಾ ಹವ್ಯಾಸದಿಂದ ಬದಲುಮಾಡಿ.

    5)  ಮನಸ್ಸನ್ನು ಉಲ್ಲಾಸಗೊಳಿಸುವ ಧ್ಯಾನ, ಯೋಗ, ಉಪವಾಸ, ಪ್ರಕೃತಿ ವೀಕ್ಷಣೆ, ಸಂಗೀತ, ದೀರ್ಘ ಉಸಿರಾಟ ಇವು ವ್ಯಕ್ತಿಯ ಭಯ, ಆತಂಕ, ಬೇಸರವನ್ನು ನಿವಾರಿಸಬಲ್ಲವು. ಆಗ  ಒತ್ತಡ ಕೂಡಾ ಕಡಿಮೆ  ಆಗುತ್ತದೆ. ಹೀಗೆ ಮಾಡುವುದರಿಂದ ಉಗುರು ಕಚ್ಚುವ ಕೆಟ್ಟ ಅಭ್ಯಾಸವನ್ನು ನಿಲ್ಲಿಸಬಹುದಾಗಿದೆ.

    6) ಕೆಲವರು ಯಾವುದಾದರೂ ಸಮಸ್ಯೆಯಲ್ಲಿ ಸಿಲುಕಿ ಕೊಂಡಾಗ ಅದರಿಂದ ಹೊರಬರಲು ಅದನ್ನು ಗಂಭೀರವಾಗಿ ಆಲೋಚನೆಗೆ ತೆಗೆದುಕೊಂಡಾಗ ಗೊತ್ತಿಲ್ಲದೆ ಉಗುರು ಕಚ್ಚುತ್ತಿರುತ್ತಾರೆ.  ಈ ವೇಳೆ ಆದಷ್ಟು ನಿಮ ಕೈ ಬಾಯಿ ಕಡೆ ಹೋಗದಂತೆ ನೀವು ಗಮನ ಹರಿಸಬೇಕು.

    7) ಒಂದು ವಿಷಯದ ಮೇಲೆ ಹೆಚ್ಚು ಗಮನ ಕೇಂದ್ರೀಕೃತ ವಾದಾಗ ಕೂಡ ಇದೇ ರೀತಿ ಆಗುತ್ತದೆ. ಹೀಗಾಗಿ ನಿಮ್ಮ ಆಲೋಚನೆ, ಅಭ್ಯಾಸವನ್ನು ಬದಲಿಸಿಕೊಳ್ಳುವ ಮೂಲಕವಾಗಿ ಈ ಕೆಟ್ಟ ಅಭ್ಯಾಸವನ್ನು ಬಿಡ ಬಹುದಾಗಿದೆ.

    (ಗಮನಿಸಿ: ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಈ ವಿವರಗಳನ್ನು ನಿಮಗೆ ಒದಗಿಸಲಾಗಿದೆ… ಪ್ರಯತ್ನಿಸುವ ಮೊದಲು ಸಂಬಂಧಿತ ತಜ್ಞರ ಸಲಹೆಯನ್ನು ಅನುಸರಿಸಿ)

    ನಟ, ನಿರ್ದೇಶಕ, ನಿರ್ಮಾಪಕನಾಗಿ ಏಳು ಬೀಳು ಕಂಡಿದ್ದ “ಆಪ್ತಮಿತ್ರ” ದ್ವಾರಕೀಶ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts