ಚಹಾ ಕೊಟ್ಟಿಲ್ಲವೆಂದು ರೋಗಿಯನ್ನು ಬಿಟ್ಟು ಆಪರೇಷನ್‌ ಥಿಯೇಟರ್​​ನಿಂದ ಹೊರ ನಡೆದ ವೈದ್ಯ!

Doctor
Published on

ನವದೆಹಲಿ: ಒಂದು ಕಪ್‌ ಟೀ ಸಿಕ್ಕಿಲ್ಲವೆಂದು ರೋಗಿಯನ್ನು ಆಪರೇಷನ್‌ ಥಿಯೇಟರ್‌ನಲ್ಲೇ ಬಿಟ್ಟು ವೈದ್ಯ ಹೊರ ನಡೆದ ಘಟನೆ ನಾಗ್ಪುರದಲ್ಲಿ ನಡೆದಿದೆ.

ನಡೆದಿದ್ದೇನು?: ನವೆಂಬರ್ 3 ರಂದು ಮೌಡಾ ತಾಲೂಕಿನ ಖಾತ್​ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕುಟುಂಬ ಯೋಜನೆಯಲ್ಲಿ ಶಸ್ತ್ರ ಚಿಕಿತ್ಸೆಗೆಂದು ಮಹಿಳೆ ಆಸ್ಪತ್ರೆಗೆ ಆಗಮಿಸಿದ್ದರು. ವೈದ್ಯರು ಮಹಿಳೆಗೆ ಅರವಳಿಕೆ ಚುಚ್ಚುಮದ್ದು ನೀಡಿ ಮಹಿಳೆ ಪ್ರಜ್ಞೆತಪ್ಪಿದ್ದಾರೆ. ಶಸ್ತ್ರ ಚಿಕಿತ್ಸೆಗೂ ಮುನ್ನ ಚಹಾ ಹಾಗೂ ಬಿಸ್ಕತ್ತು ಸಿಗಲಿಲ್ಲ ಎನ್ನುವ ಕಾರಣಕ್ಕೆ ವೈದ್ಯರು ಶಸ್ತ್ರ ಚಿಕಿತ್ಸೆಯನ್ನು ಮಾಡುವುದಿಲ್ಲ ಎಂದು ಆಸ್ಪತ್ರೆಯಿಂದ ಹೊರನಡೆದಿದ್ದಾರೆ. ವೈದ್ಯರು ಆಸ್ಪತ್ರೆಗೆ ವಾಪಸಾಗಿಲ್ಲ. ಮಹಿಳೆಯರ ಸಂಬಂಧಿಕರು ಗಲಾಟೆ ಮಾಡಿದ್ದಾರೆ.ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ವೈದ್ಯರು ಮತ್ತೊಬ್ಬ ವೈದ್ಯರನ್ನು ಕರೆಸಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ವೈದ್ಯ ಮಾತನಾಡಿ, ನನಗೆ ಮಧುಮೇಹವಿದೆ, ಸಮಯಕ್ಕೆ ಸರಿಯಾಗಿ ಚಹಾ, ಬಿಸ್ಕತ್ತು ಬೇಕಾಗುತ್ತದೆ. ಇದರಿಂದ ನಮ್ಮ ರಕ್ತದಲ್ಲಿರುವ ಸಕ್ಕರೆ ಮಟ್ಟವು ಕಡಿಮೆಯಾಗುತ್ತದೆ, ಹಾಗಾಗಿ ಆಸ್ಪತ್ರೆಯಿಂದ ಹೊರನಡೆಯಬೇಕಾಯಿತು ಎಂದು ಹೇಳಿದ್ದಾರೆ.

ವೈದ್ಯರ ಈ ನಡವಳಿಕೆಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಮೊದಲೇ ಸೌಲಭ್ಯಗಳ ಕೊರತೆ ಇದೆ ಈ ನಡುವೆ ವೈದ್ಯರು ಸೂಕ್ಷ್ಮತೆ ಇಲ್ಲದೆ ನಡೆದುಕೊಂಡಿರುವುದರ ಬಗ್ಗೆ ಬೇಸರ ಹೊರಹಾಕಿದ್ದಾರೆ.

ಈ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಜಯ್ ದಾವ್ಲೆ ವಿಚಾರಣೆಗೆ ಆದೇಶ ನೀಡಿದ್ದಾರೆ.ಇದಕ್ಕಾಗಿ ಮೂವರು ಸದಸ್ಯರ ಸಮಿತಿ ರಚಿಸಿ ತನಿಖೆ ಸಡೆಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net