More

    ಸಿನಿಮಾ ಬಗ್ಗೆ ದೊಡ್ಡ ಆತಂಕವೇನು ಗೊತ್ತೇ?; ನಾಗತಿಹಳ್ಳಿ ಚಂದ್ರಶೇಖರ್ ಅನುಭವ-ಅನಿಸಿಕೆ ಇದೀಗ ವಿಜಯವಾಣಿ ಕ್ಲಬ್​ನಲ್ಲಿ..

    ಬೆಂಗಳೂರು: ನಿರ್ದೇಶಕ, ನಿರ್ಮಾಪಕ ಮಾತ್ರವಲ್ಲದೆ ಸಿನಿಮಾಸಕ್ತರಿಗೆ ಮೇಷ್ಟ್ರು ಕೂಡ ಆಗಿರುವ ನಾಗತಿಹಳ್ಳಿ ಚಂದ್ರಶೇಖರ್​ ಅವರು ಇದೀಗ ವಿಜಯವಾಣಿ ಕ್ಲಬ್​ನಲ್ಲಿ ಮಾತನಾಡುತ್ತಿದ್ದು, ಸಿನಿಮಾ ಕ್ಷೇತ್ರದಲ್ಲಿನ ತಮ್ಮ ಅನುಭವ ಹಾಗೂ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.

    ಇಂದು ಒಂಥರಾ ಖುಷಿಯ ದಿನ. ಏಕೆಂದರೆ ಸರ್ಕಾರ ಶೇ. 100 ಪ್ರೇಕ್ಷಕರ ಭರ್ತಿಗೆ ಇಂದೇ ಅನುಮತಿ ಕೊಟ್ಟಿದೆ. ಪ್ರೇಕ್ಷಕರ ಒಳಹರಿವು ಇದರಿಂದ ಹೆಚ್ಚಲಿ ಎಂದು ಆಶಿಸುತ್ತ, ಉದ್ಯಮದ ಇವತ್ತಿನ ಸಂಭ್ರಮ ಫಲ ಕೊಡಲಿ ಎಂದು ಹಾರೈಸುತ್ತೇನೆ ಎನ್ನುತ್ತ ಅವರು ತಮ್ಮ ಮಾತನ್ನು ಆರಂಭಿಸಿದ್ದಾರೆ.

    40 ವರ್ಷಗಳ ಹಿಂದೆ ಸಿನಿಮಾಗೆ ಪ್ರವೇಶಿಸಿದಾಗ ಆರಂಭದಲ್ಲಿ ಅವಕಾಶ ಕೊಟ್ಟ ಉದ್ಯಮದ ಎಲ್ಲ ಗೆಳೆಯರಿಗೆ ಋಣಿ, ಗೆಳೆಯ ಸುರೇಶ್​ ಹೆಬ್ಳೀಕರ್, ನಂಜುಂಡೇಗೌಡ ಮುಂತಾದವರು ತುಂಬಾ ಸಹಾಯ ಮಾಡಿದ್ದಾರೆ ಎಂದು ಅವರನ್ನೆಲ್ಲ ಸ್ಮರಿಸಿಕೊಳ್ಳುತ್ತಲೇ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.

    ಸಿನಿಮಾದಲ್ಲಿ ನಮ್ಮಂಥವರಿಗೆ ಇರುವ ಪ್ರಮುಖ ಆತಂಕ ಮಾರುಕಟ್ಟೆಯ ಹೊರೆ. ಅದು ತುಂಬಾ ಆತಂಕ ಮೂಡಿಸುವಂಥದ್ದು. ಮೂಕಿಯಿಂದ ಇಲ್ಲಿಯವರಗೆ ಅನೇಕ ಮಜಲುಗಳನ್ನು ಕಂಡುಕೊಳ್ಳುತ್ತ ಎಲ್ಲ ವಿಚಾರದಲ್ಲಿ ತಾಂತ್ರಿಕ ವಿಕಾಸ ಕೂಡ ಕಂಡುಕೊಂಡಿದೆ. ಇವತ್ತಿನ ಟೆಕ್ನಾಲಜಿ ದಕ್ಕಿಸಿಕೊಳ್ಳುವುದರೊಳಗೆ ನಾಳೆ ಮತ್ತೊಂದು ಪ್ರವೇಶ ಮಾಡಿರುತ್ತದೆ. ಇವೆಲ್ಲದರ ನಡುವೆ ಸಿನಿಮಾ ಕ್ಷೇತ್ರ ವೇಗವಾಗಿ ಸಾಗುತ್ತಿದೆಯೇ ಎಂಬ ಭಯ ಕೂಡ ಇದೆ. ಬಹಳ ಪ್ರಮಾಣದಲ್ಲಿ ಬೆಳೆದು ನಿಂತಿದೆ. ಮಾರುಕಟ್ಟೆಯ ಸರಕಾಗಿ ಬೆಳೆದಿದ್ದರೂ, ಕಲೆಯ ಸ್ವಾತಂತ್ರ್ಯ ಸಿನಿಮಾದಲ್ಲಿ ಕಡಿಮೆ ಅನಿಸುತ್ತಿದೆ. ಎಂಥ ಸಿನಿಮಾ ಬಿಡುಗಡೆಯಾದರೂ ಅದನ್ನು ಮಾರುಕಟ್ಟೆಯ ದೃಷ್ಟಿಯಿಂದಲೇ ನಿರ್ಧರಿಸಲಾಗುತ್ತಿರುವುದು ದೊಡ್ಡ ಸವಾಲು ಎನ್ನುತ್ತ ಅವರು ಒಟಿಟಿ ಕುರಿತು ಕೂಡ ಮಾತುಗಳನ್ನು ಹಂಚಿಕೊಂಡರು. ಒಟಿಟಿ ಅಂದರೆ ಓವರ್​ ದಿ ಟಾಪ್​ ಎನ್ನುವ ಆ ಹೆಸರಲ್ಲೇ ಎಲ್ಲವನ್ನೂ ಮೀರಿಸುವಂಥ ಮಾದರಿ ಆಗಿದೆ ಎಂಬುದನ್ನು ಅದು ಸೂಚಿಸುತ್ತದೆ ಎಂದ ಅವರು ಇನ್ನೂ ಹಲವಾರು ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

    ಇನ್ನು ಕೆಲವೇ ಕ್ಷಣಗಳಲ್ಲಿ ನಟ ವಸಿಷ್ಠ ಸಿಂಹ ಸೇರಿ ಚಿತ್ರರಂಗದ ಹಲವರು ಕೂಡ ಈ ಸಂವಾದಕ್ಕೆ ಸೇರಿಕೊಳ್ಳಲಿದ್ದಾರೆ.

    ಬನ್ನಿ ಅವರ ಮಾತನ್ನು ಕೇಳಲು, ಅವರೊಂದಿಗೆ ಮಾತನಾಡಲು ಈ ಲಿಂಕ್​ ಕ್ಲಿಕ್ಕಿಸಿ.

    https://www.clubhouse.com/event/PNo0ol68

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts