More

    4 ವರ್ಷದ ಹಿಂದೆ ಬ್ಯೂಟಿ ಪಾರ್ಲರ್ ಸೇಲ್ಸ್ ಗರ್ಲ್ ಆಗಿ ಬೆಂಗಳೂರಿಗೆ ಬಂದವಳ ಭಯಾನಕ ಕತೆ ಇದು!

    ಬೆಂಗಳೂರು: ನಾಲ್ಕು ವರ್ಷಗಳ ಹಿಂದೆ ಬ್ಯೂಟಿ ಪಾರ್ಲರ್ ಸೇಲ್ಸ್ ಗರ್ಲ್ ಆಗಿ ನಾಗಾಲ್ಯಾಂಡ್​ನಿಂದ ಬೆಂಗಳೂರಿಗೆ ಬಂದವಳು ನಂತರದ ದಿನಗಳಲ್ಲಿ ಪರಿಚಯಸ್ಥರ ಜತೆಗೂಡಿ ಹಣ ಮಾಡುವ ದಂಧೆಗಿಳಿದ ಈಕೆ ಇದೀಗ ತನ್ನ ಆಪ್ತರೊಂದಿಗೆ ತಾನೂ ಸಹ ಜೈಲು ಪಾಲಾಗಿದ್ದಾಳೆ.

    ಹೌದು. ಇ-ಮೇಲ್ ಹ್ಯಾಕ್ ಮಾಡುತ್ತಿದ್ದ ನಾಗಾಲ್ಯಾಂಡ್ ಮೂಲದ ಗ್ಯಾಂಗ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ. ಬಂಧಿರನ್ನು ಥಿಯಾ (31), ಸೆರೋಪಾ (27) ಹಾಗೂ ಇಸ್ಟರ್ ಕೊನ್ಯಾಕ್ ಅಲಿಯಾಸ್​ ರುಬಿಕಾ ಎಂದು ಗುರುತಿಸಲಾಗಿದೆ.

    ಇವರು ನಿವೃತ್ತ ಡಿಜಿಐಜಿಪಿ ಶಂಕರ್ ಬಿದರಿ ಖಾತೆಯನ್ನು ಹ್ಯಾಕ್ ಮಾಡಿ, ಬಿದರಿ ಸ್ನೇಹಿತರಿಗೆ ಹಣಕ್ಕಾಗಿ ಮೆಸೇಜ್​ ಮಾಡಿದ್ದರು. ಮೆಸೇಜ್ ನೋಡಿದ ಬಿದರಿ ಸ್ನೇಹಿತ 25 ಸಾವಿರ ರೂಪಾಯಿ ಹಣವನ್ನು ಆರೋಪಿಗಳ ಖಾತೆಗೆ ಜಮಾ ಮಾಡಿದ್ದರು.

    ಇದನ್ನೂ ಓದಿರಿ: ಕಿಕ್​ಗಾಗಿ ಸೇದ್ತೀರಾ? ಸಿಕ್ ಆಗ್ತೀರಿ ಹುಷಾರ್!; ಇಂದು ನೋ ಸ್ಮೋಕಿಂಗ್ ಡೇ…

    ಬಳಿಕ ಇಮೇಲ್​ ದುರ್ಬಳಕೆ ಆಗುತ್ತಿದೆ ಎಂದರಿತ ಶಂಕರ್​ ಬಿದರಿ ಅವರು ಈ ಬಗ್ಗೆ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

    ಆರೋಪಿಗಳು ಸುಮಾರು 60 ಬ್ಯಾಂಕ್ ಅಕೌಂಟ್ ಹೊಂದಿದ್ದರು. ಕಳೆದ ವರ್ಷ ನವೆಂಬರ್​ನಿಂದ ಇತ್ತೀಚೆಗೆ 60 ಬ್ಯಾಂಕ್ ಅಕೌಂಟ್ ಒಪನ್ ಆಗಿದೆ. ನಾಗಾಲ್ಯಾಂಡ್​ನ ನಿರುದ್ಯೋಗಿ ಯುವಕರಿಗೆ ಹಣದ ಆಮಿಷವೊಡ್ಡಿ ಆಧಾರ್ ಕಾರ್ಡ್, ಮನೆ ಬಾಡಿಗೆ ಪತ್ರ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.

    ಪ್ರಕರಣದಲ್ಲಿರುವ‌ ಮಹಿಳಾ ಆರೋಪಿ ರುಬಿಕಾ ಇದರ ಮಾಸ್ಟರ್ ಮೈಂಡ್ ಎಂದು ತಿಳಿದುಬಂದಿದೆ. ನಾಲ್ಕು ವರ್ಷಗಳ ಹಿಂದೆ ನಗರಕ್ಕೆ ಬಂದು ಬ್ಯೂಟಿ ಪಾರ್ಲರ್​ವೊಂದರಲ್ಲಿ ಸೇಲ್ಸ್ ಗರ್ಲ್ ಆಗಿದ್ದಳು. ಫೇಸ್​ಬುಕ್​ನಲ್ಲಿ ಪೀಟರ್ ಹಾಗೂ ಜೇಮ್ಸ್ ಎನ್ನುವವರ ಪರಿಚಯ ಮಾಡಿಕೊಂಡಿದ್ದ ರುಬಿಕಾ, ಜೇಮ್ಸ್ ಹಾಗೂ ಪೀಟರ್ ಮಾರ್ಗದರ್ಶನದಂತೆ ಅಕೌಂಟ್ ಹ್ಯಾಕ್ ಮಾಡಿ ಹಣ ಎಗರಿಸುತ್ತಿದ್ದಳು.

    ಇದನ್ನೂ ಓದಿರಿ: ಅನುಮಾನ ಬಂದು ಬಾತ್​​ರೂಮ್​ನಲ್ಲಿನ ಕನ್ನಡಿ ತೆಗೆದ ಮಹಿಳೆಗೆ ಕಾದಿತ್ತು ಬಿಗ್​ ಶಾಕ್​..!

    ಸದ್ಯ ಆರೋಪಿಗಳನ್ನ ಬಂಧಿಸಿರುವ ಸೈಬರ್​ ಕ್ರೈಂ ಪೊಲೀಸರು ವಿಚಾರಣೆಯನ್ನು ಮುಂದುವರಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಉದ್ಯೋಗ ಕೌಶಲ ಕಲಿಯದಿದ್ದರೆ ನಿಷ್ಫಲ!

    ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಸೋನಾಕ್ಷಿ ಸಿನ್ಹಾ !

    ಹೆಚ್ಚಿದ ಹೊರೆ, ಸಾಲಕ್ಕೆ ಮೊರೆ: ದಿಟ್ಟ ನಿರ್ಧಾರದತ್ತ ಸರ್ಕಾರ ಹೆಜ್ಜೆ; ರಾಜಸ್ವ ಕೊರತೆ, ಸಾಲವೊಂದೇ ದಾರಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts