More

    ಹೃದಯದ ಆರೋಗ್ಯಕ್ಕಾಗಿ ನಡಿಗೆ ಅಗತ್ಯ

    ಚಿತ್ರದುರ್ಗ: ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಯಮಿತವಾಗಿ ದಿನಕ್ಕೊಂದು ಗಂಟೆ ನಡಿಗೆ,ವ್ಯಾಯಾಮ ಮತ್ತು ಉತ್ತಮ ಆಹಾರ ಶೈಲಿಯನ್ನು ರೂಢಿಸಿಕೊಳ್ಳ ಬೇಕಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.

    ಹಿರೇಗುಂಟನೂರು ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಚಿತ್ರದುರ್ಗ ತಾಲೂಕು ಮೇಗಳಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಹೃದಯ ದಿನದ ಅಂಗವಾಗಿ ಏರ್ಪಡಿಸಿದ್ದ ಮಾಹಿತಿ, ಶಿಕ್ಷಣ ಸಂವಾಹನ ಕಾರ್ಯಕ್ರಮ,ಸಾಂಕ್ರಾಮಿಕವಲ್ಲದ ರೋಗಗಳ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿ ದರು.

    ಇತ್ತೀಚಿನ ದಿನಗಳಲ್ಲಿ ಸಾಂಕ್ರಾಮಿಕ ರೋಗಗಳಿಗಿಂತ ಸಾಂಕ್ರಾಮಿಕವಲ್ಲದ ರೋಗಗಳಾದ ಮಧುಮೇಹ,ರಕ್ತದೊತ್ತಡ,ಕ್ಯಾನ್ಸರ್ ಹೃದಯಾಘಾತದಿಂದ ನಿಧನ ಹೊಂದುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್. ಎಸ್.ಮಂಜುನಾಥ ಮಾತನಾಡಿ ಹೃದಯದ ಆರೋಗ್ಯ ಕಾಪಾಡಲು ತಂಬಾಕು ಮತ್ತು ಅದರ ಉತ್ಪನ್ನಗಳ ಸೇವನೆ ವರ್ಜಿಸ ಬೇಕು,ಮದ್ಯಪಾನ ಮಾಡಬಾರದು ಎಂದರು.

    ಸಾಮಾಜಿಕ ವರ್ತನೆ ಬದಲಾವಣೆ ಸಂಯೋಜಕ ಸುನಿಲ್,ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶ್ರೀಧರ್,ಏಕಾಂತ್,ಅಜಯ್,ಇಸ್ಮಾ ಯಿಲ್,ಸಮುದಾಯ ಆರೋಗ್ಯಾಧಿಕಾರಿ ಶಿವು, ಆರೋಗ್ಯ ಸುರಕ್ಷತಾಧಿಕಾರಿ ಬಿ.ವೀರಮ್ಮ,ಆಶಾ,ಅಂಗನವಾಡಿ ಕಾರ್ಯಕರ್ತೆಯರು ಇದ್ದರು.
    —-

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts