More

  ನಾಚಿಕೆ ಬಿಟ್ಟು ಭೂಕಬಳಿಕೆ: ಎಚ್‌ಡಿಕೆ ವಿರುದ್ಧ ಹಿರೇಮಠ್ ಆಕ್ರೋಶ

  ರಾಮನಗರ: ಎಚ್.ಡಿ.ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದವರು, ತಮ್ಮ ಹೆಸರಿಗೆ ಕಳಂಕ ತರುವ ಕಾರ್ಯಕರ್ತರನ್ನು ಇಟ್ಟುಕೊಂಡಿದ್ದಾರೆ. ನಾಚಿಕೆ, ಮರ್ಯಾದೆ ಬಿಟ್ಟು ಭೂಕಬಳಿಕೆ ಮಾಡಿದ್ದಾರೆ ಎಂದು ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್.ಹಿರೇಮಠ್ ಆಕ್ರೋಶ ವ್ಯಕ್ತಪಡಿಸಿದರು.

  ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರು ಬಿಡದಿಯ ಕೇತಿಗಾನಹಳ್ಳಿಯಲ್ಲಿ ನಡೆಸಿರುವ ಭೂಕಬಳಿಕೆ ವಿಚಾರದಲ್ಲಿ ವಸ್ತುಸ್ಥಿತಿ ಅರಿಯಲು ಹೋದಾಗ ತಮ್ಮ ಮತ್ತು ಜತೆಯಲ್ಲಿದ್ದ ತಂಡದವರ ಮೇಲೆ ನಡೆದ ಹಲ್ಲೆ ಜೀವನದಲ್ಲೇ ಮೊದಲ ಬಾರಿಗೆ ಆದದ್ದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಮ್ಮ ಮೇಲೆ ಮೊಟ್ಟೆ ಎಸೆದಿದ್ದು ಮತ್ತೆ ಕೆಲವರ ಮೇಲೆ ಹಲ್ಲೆ ನಡೆಸಿದ ಪ್ರಕರಣದ ವಿಚಾರದಲ್ಲಿ ತಾವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಶೆಟ್ಟಿ ಅವರನ್ನು ಭೇಟಿ ಮಾಡಿ ಸೂಕ್ತ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದೇನೆ ಎಂದು ಹೇಳಿದರು.

  ಸಂಘಟನೆ ಪದಾಧಿಕಾರಿಗಳಾದ ಡಾ. ಕೆ. ಶಿವರಾಂ, ಬಿ.ಎನ್. ಮಲ್ಲಿಕಾರ್ಜುನ, ದೀಪಕ್, ಎಸ್.ಎ. ಮಕ್ಕಾಬಿ, ಪ್ರಭುಗೌಡ ಪಾಟೀಲ್, ಆರ್‌ಟಿಐ ಕಾರ್ಯಕರ್ತ ರವಿ ಕಂಚನಹಳ್ಳಿ ಇದ್ದರು.

  ಇಂಥವರನ್ನು ಸಾಕಿ ಕೊಂಡಿರುವ ಎಚ್ಡಿಕೆ: 75 ವರ್ಷದ ಎಸ್.ಆರ್. ಹಿರೇಮಠ ಅವರ ಮೇಲೆ ಕೋಳಿ ಮೊಟ್ಟೆ ಎಸೆದು, ಹಲ್ಲೆ ನಡೆಸಿದ ಪ್ರಕರಣ ಎಚ್.ಡಿ.ಕುಮಾರಸ್ವಾಮಿ ಪ್ರೇರಿತವಲ್ಲ. ಆದರೆ ಹಲ್ಲೆ ನಡೆಸಿದವರು ಜೆಡಿಎಸ್ ಕಾರ್ಯಕರ್ತರು ಎಂಬುದು ಸ್ಪಷ್ಟ. ಇಂಥವರನ್ನು ಎಚ್‌ಡಿಕೆ ಸಾಕಿಕೊಂಡಿದ್ದಾರೆ ಎಂದು ಲಂಚಮುಕ್ತ ಕರ್ನಾಟಕ ವೇದಿಕೆಯ ರವಿಕೃಷ್ಣಾರೆಡ್ಡಿ ಹರಿಹಾಯ್ದರು.

  ಬಳ್ಳಾರಿ ರೆಡ್ಡಿಗೆ ಆದ ಸ್ಥಿತಿ ಇವರಿಗೂ ಆಗುತ್ತೆ. ಆಗಿರುವ ಘಟನೆಗೆ ಎಚ್‌ಡಿಕೆ ಕ್ಷಮೆ ಕೋರಬೇಕು. ಬಳ್ಳಾರಿ ರಿಪಬ್ಲಿಕ್, ಕನಕಪುರ ರಿಪಬ್ಲಿಕ್, ರಾಮನಗರ ರಿಪಬ್ಲಿಕ್ ಸಂವಿಧಾನಕ್ಕೆ ಕಪ್ಪುಚುಕ್ಕೆ.
  ಎಸ್.ಆರ್. ಹಿರೇಮಠ ಸಾಮಾಜಿಕ ಹೋರಾಟಗಾರ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts