More

    ನಾಗಚೈತನ್ಯಗೆ ನಭಾ ಜೋಡಿ; ಸಾಲು ಸಾಲು ಸಿನಿಮಾಗಳಲ್ಲಿ ಕನ್ನಡತಿ ಕಮಾಲ್

    ಬೆಂಗಳೂರು: ರಶ್ಮಿಕಾ ಮಂದಣ್ಣ ಹೊರತುಪಡಿಸಿ ಪಕ್ಕದ ಟಾಲಿವುಡ್​ನಲ್ಲಿ ಕನ್ನಡದ ಬೇರಾವ ನಟಿ ಸಾಲು ಸಾಲು ಸಿನಿಮಾ ಅವಕಾಶ ಪಡೆಯುತ್ತಿದ್ದಾರೆಂದರೆ ಅದು ನಭಾ ನಟೇಶ್. ಇದೀಗ ಅವರ ಸಿನಿಮಾ ಬತ್ತಳಿಕೆಗೆ ಹೊಸ ಚಿತ್ರವೊಂದು ಸೇರ್ಪಡೆಯಾಗಿದೆ. ಅದರ ಹೆಸರು ‘ಥ್ಯಾಂಕ್ಯು’ ಹೌದು, ಅಕ್ಕಿನೇನಿ ನಾಗಚೈತನ್ಯ ನಾಯಕನಾಗಿ ನಟಿಸಲಿರುವ ‘ಥ್ಯಾಂಕ್ಯು’ ಚಿತ್ರದಲ್ಲಿ ನಭಾ ನಾಯಕಿ. ಈ ಹಿಂದೆ ‘ಮನಂ’, ‘ಹೆಲೋ’ ಸೇರಿ ಹಲವು ಸಿನಿಮಾ ನಿರ್ದೇಶನ ಮಾಡಿದ ಅನುಭವ ಇರುವ ನಿರ್ದೇಶಕ ವಿಕ್ರಮ್ ಕುಮಾರ್ ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳಲಿದ್ದಾರೆ. ಅಂದಹಾಗೆ, ನಾಗಚೈತನ್ಯ ಮತ್ತು ನಭಾ ಮೊದಲ ಬಾರಿ ‘ಥ್ಯಾಂಕ್ಯು’ ಚಿತ್ರದ ಮೂಲಕ ಒಂದಾಗುತ್ತಿದ್ದಾರೆ. ರೊಮ್ಯಾಂಟಿಕ್ ಡ್ರಾಮಾ ಶೈಲಿಯಲ್ಲಿ ಸಿನಿಮಾ ಇದಾಗಿರಲಿದ್ದು, ಶೀಘ್ರದಲ್ಲಿ ಶೂಟಿಂಗ್ ಸೇರಿ ಪಾತ್ರವರ್ಗದ ಮಾಹಿತಿ ಬಿಟ್ಟುಕೊಡಲಿದೆ ತಂಡ.

    ನಭಾ ಬಗ್ಗೆ ಹೇಳುವುದಾದರೆ, ಪುರಿ ಜಗನ್ನಾಥ್ ನಿರ್ದೇಶನದ ‘ಇಸ್ಮಾರ್ಟ್ ಶಂಕರ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ಬಳಿಕ ನಭಾ ನಸೀಬೇ ಬದಲಾಯಿತು. ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ಅವಕಾಶ ಪಡೆದು, ಸದ್ಯ ತೆಲುಗು ನಾಡಲ್ಲಿ ಕಮಾಲ್ ಮಾಡುತ್ತಿದ್ದಾರೆ. ಬಾಲಿವುಡ್​ನ ಹಿಟ್ ಸಿನಿಮಾ ‘ಅಂಧಾಧುನ್’ ಚಿತ್ರದ ತೆಲುಗು ರಿಮೇಕ್​ನಲ್ಲಿಯೂ ನಭಾ ನಟಿಸುತ್ತಿದ್ದಾರೆ. ಸ್ಯಾಂಡಲ್​ವುಡ್ ಸಿನಿಮಾಗಳ ವಿಚಾರಕ್ಕೆ ಬಂದರೆ, 2017ರಲ್ಲಿ ತೆರೆಗೆ ಬಂದ ‘ಸಾಹೇಬ’ ಚಿತ್ರವೇ ನಭಾ ಕಡೆಯ ಸಿನಿಮಾ. ಅದಾದ ಬಳಿಕ ತೆಲುಗಿನಲ್ಲಿಯೇ ಹೆಚ್ಚು ಸಕ್ರಿಯರಾದರು. ಈಗಲೂ ಅವರ ಖಾತೆಯಲ್ಲಿ ಒಂದೇ ಒಂದು ಕನ್ನಡ ಸಿನಿಮಾ ಇಲ್ಲ ಎಂಬುದೇ ವಿಪರ್ಯಾಸ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts