More

    ಮೈಸೂರಿನಲ್ಲಿ ವಿಷ್ಣು ಸ್ಮಾರಕ ಉದ್ಘಾಟನೆ: ಸರ್ಕಾರ, ಚಲನಚಿತ್ರ ಮಂಡಳಿ ವಿರುದ್ಧ ಅಭಿಮಾನಿಗಳ ಆಕ್ರೋಶ

    ಬೆಂಗಳೂರು/ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿರ್ಮಾಣವಾಗಿರುವ ಸಾಹಸಸಿಂಹ ಡಾ. ವಿಷ್ಣುವರ್ಧನ್​ ಅವರ ಸ್ಮಾರಕ ಇಂದು ಉದ್ಘಾಟನೆಯಾಗಲಿದೆ. ಒಂದು ಕಡೆ ಈ ಸಂಗತಿ ಅಭಿಮಾನಿಗಳಿಗೆ ತುಂಬಾ ಖಷಿ ಉಂಟು ಮಾಡಿದರೆ, ಇನ್ನೊಂದೆಡೆ ಸರ್ಕಾರದ ವರ್ತನೆ ಬಹಳ ಬೇಸರವನ್ನು ತರಿಸಿದೆ.

    ಹೌದು, ಸರ್ಕಾರದ ವಿರುದ್ಧ ವಿಷ್ಣು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವಿಷ್ಣು ಸ್ಮಾರಕ ಉದ್ಘಾಟನೆಯು ಕಾಟಚಾರಕ್ಕೆ ಆಗುತ್ತಿದೆ ಎಂದು ಆರೋಪ ಮಾಡಿದ್ದಾರೆ. ಬೇರೆ ಕಾರ್ಯಕ್ರಮಗಳಿಗೆ ರಾಜ್ಯದಾದ್ಯಂತ ಪ್ರಚಾರ ಕೊಡುವ ಸರ್ಕಾರ ಈ ವಿಚಾರದಲ್ಲಿ ಮಾತ್ರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ಕೇವಲ ಮೈಸೂರು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮಾತ್ರ ಕಾರ್ಯಕ್ರಮ ಮುಗಿಸಿ ಸರ್ಕಾರ ಸುಮ್ಮನಾಗುತ್ತಿದೆ. ಸರ್ಕಾರ ಮಾತ್ರವಲ್ಲ, ಚಲನಚಿತ್ರ ಮಂಡಳಿ ಹಾಗೂ ಕನ್ನಡ ನಟರು ಕೂಡ ಈ ಬಗ್ಗೆ ಸರಿಯಾಗಿ ಗಮನ ಹರಿಸಿಲ್ಲ ಎಂದು ಅಭಿಮಾನಿಗಳು ಕಿಡಿಕಾರಿದರು.

    ಇತರೆ ಕಾರ್ಯಕ್ರಮಗಳಿಗೆ ಸರ್ಕಾರ, ಖಾಸಗಿ ಜೆಟ್ ಮೂಲಕ ಅನ್ಯಭಾಷ ನಟರನ್ನು ಕರೆತಂದು ಅದ್ದೂರಿ ಕಾರ್ಯಕ್ರಮ ಮಾಡುತ್ತದೆ. ಆದರೆ, ವಿಷ್ಣುವರ್ಧನ್ ವಿಚಾರದಲ್ಲಿ ಮಾತ್ರ ಯಾಕಿಷ್ಟು ನಿರ್ಲಕ್ಷ್ಯ? 200ಕ್ಕೂ ಅಧಿಕ ಚಿತ್ರದಲ್ಲಿ ನಟಿಸಿರುವ ವಿಷ್ಣುವರ್ಧನ್ ಅವರಿಗೆ ಈ ರೀತಿ ಮಾಡುವುದು ಸರಿಯಲ್ಲ ಎನ್ನುವ ಮೂಲಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಸರ್ಕಾರದ ವಿರುದ್ಧ ವಿಷ್ಣು ಅಭಿಮಾನಿಗಳು ಆಕ್ರೋಶ ಹೊರಹಾಕಿದರು. (ದಿಗ್ವಿಜಯ ನ್ಯೂಸ್​)

    ಕಟ್ಟಡಕ್ಕೆ ಅನುಮತಿಗೆ 20 ಸಾವಿರ ರೂ.ನಗದು, 1 ಸ್ಕಾಚ್​ ವಿಸ್ಕಿಗೆ ಬೇಡಿಕೆ: ಬಲೆಗೆ ಬಿದ್ದ ಸಹಾಯಕ ಇಂಜಿನಿಯರ್​

    ಸರ್ಕಾರಿ ನೌಕರರ ಪೋಸ್ಟ್ ಮೇಲೆ ನಿಗಾ?; ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹಂಚುವ ಮುನ್ನ ಎಚ್ಚರ

    ಹಳ್ಳಿಗರ ವಲಸೆ ತಡೆಗೆ ಕೃಷಿ ಸಬಲೀಕರಣ: ಸಚಿವ ಡಾ. ಅಶ್ವತ್ಥನಾರಾಯಣ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts