More

    ಸಂಧಾನ ಮೂಲಕ ಸಾರಾ ಮಹೇಶ್​-ರೋಹಿಣಿ ಸಿಂಧೂರಿ ಜಟಾಪಟಿ ಅಂತ್ಯ: ಸತ್ಯಕ್ಕೆ ಜಯ ಅಂದ್ರು JDS ಶಾಸಕ

    ಮೈಸೂರು: ಶಾಸಕ ಸಾ.ರಾ. ಮಹೇಶ್ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ತಮ್ಮ ನಡುವಿನ ಜಟಾಪಟಿಯನ್ನು ಸಂಧಾನದ ಮೂಲಕ ಬಗೆಹರಿಸಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದೀಗ ಸಾ.ರಾ. ಮಹೇಶ್​ ನೀಡಿರುವ ಪ್ರತಿಕ್ರಿಯೆ ಅದಕ್ಕೆ ಪುಷ್ಠಿ ನೀಡುವಂತಿದೆ.

    ಬೆಳಗಾವಿ ಅಧಿವೇಶನದ ವೇಳೆ ಮಹೇಶ್ ಜತೆ ರೋಹಿಣಿ ಸಿಂಧೂರಿ ಸಂಧಾನ ನಡೆಸಿದ್ದಾರೆ ಎನ್ನಲಾಗಿತ್ತು. ಹಿರಿಯ ಐಎಎಸ್ ಅಧಿಕಾರಿ ಮಧ್ಯಸ್ಥಿಕೆಯಲ್ಲಿ ಮಹೇಶ್ ಜತೆ ಸಿಂಧೂರಿ ಸಂಧಾನ ನಡೆಸಿ ತಮ್ಮ ನಡುವಿನ ಭಿನ್ನಾಭಿಪ್ರಾಯ ಸರಿಪಡಿಸಿ ಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಮಹೇಶ್, ಹಿರಿಯ ಐಎಎಸ್ ಅಧಿಕಾರಿ ಹಾಗೂ ರೋಹಿಣಿ ಸಿಂಧೂರಿ ಒಟ್ಟಿಗೆ ಕೂತು ಚರ್ಚೆ ನಡೆಸುತ್ತಿರುವ ಫೋಟೋ ವೈರಲ್ ಆಗಿತ್ತು.

    ಇದೀಗ ಈ ಪ್ರಕರಣದ ಬಗ್ಗೆ ಶಾಸಕ ಸಾರಾ ಮಹೇಶ್​ ದಿಗ್ವಿಜಯ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ರೋಹಿಣಿ ಸಿಂಧೂರಿ ಓರ್ವ ಸರ್ಕಾರಿ ಅಧಿಕಾರಿ. ಡಿಸೆಂಬರ್ 27ರಂದು ಮಣಿವಣ್ಣನ್ ಜೊತೆಗೆ ರೋಹಿಣಿ ಬಂದಿದ್ದರು. ಬೆಳಗಾವಿ ಸದನದ ಸಂದರ್ಭದಲ್ಲಿ ಅವರ ಸಮ್ಮುಖದಲ್ಲಿ ಮಾತನಾಡಿದರು. ಇದಲ್ಲದೆ ರೋಹಿಣಿ ಸಿಂಧೂರಿ. ಸಿಎಂ ಬೊಮ್ಮಾಯಿ, ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಅನೇಕರ ಮೂಲಕ ಸಂಧಾನಕ್ಕೆ ಹೋಗಿದ್ದರು. ಕೊನೆಯಲ್ಲಿ ಸಚಿವ ಮಾಧುಸ್ವಾಮಿ ಮೂಲಕ ಸಂಧಾನಕ್ಕೆ ಬಂದಿದ್ದರು ಎಂದು ಹೇಳಿದ್ದಾರೆ.

    ಯಾವುದನ್ನು ವೈಯಕ್ತಿಕವಾಗಿ ತೆಗೆದುಕೊಂಡಿದ್ದು ನಾನಲ್ಲ. ನನ್ನ ಕಲ್ಯಾಣ ಮಂಟಪವು ರಾಜಕಾಲುವೆ ಮೇಲೆ ಇಲ್ಲ ಅಂತ ಡಿಸಿ, ಆರ್‌ಸಿ ವರದಿ ಕೊಟ್ಟಿದ್ದಾರೆ. ಆದರೆ, ನಾನು ರೋಹಿಣಿ ವಿರುದ್ಧ ಮಾಡಿದ್ದ ಆರು ಆರೋಪಗಳ ಪೈಕಿ ನಾಲ್ಕು ಆರೋಪಗಳು ಸಾಬೀತಾಗಿವೆ. ಕೋವಿಡ್ ಸಾವು ಮುಚ್ಚಿಟ್ಟಿದ್ದು, ಪಾರಂಪರಿಕ ಕಟ್ಟಡ ದುರ್ಬಳಕೆ, ಸ್ವಿಮ್ಮಿಂಗ್ ಪೂಲ್ ನಿರ್ಮಾಣದಂತಹ ಅವರ ತಪ್ಪುಗಳು ಸಾಭೀತಾಗಿದೆ. ಈ ಬಗ್ಗೆ ಸರ್ಕಾರಕ್ಕೆ ದಾಖಲೆ ಸಹಿತ ದೂರು ಕೊಟ್ಟಿದ್ದೇನೆ ಎಂದರು.

    ಅವರು ನನಗೆ ಮೆಸೇಜ್ ಮಾಡಿರೋದು ಸತ್ಯ. ಸಾರ್ವಜನಿಕವಾಗಿ ಎಲ್ಲರಿಗೂ ಗೊತ್ತಾಗಿದೆ. ಈಗ ರೋಹಿಣಿ ಅವರು ಸಾರ್ವಜನಿಕ ಕ್ಷಮೆ ಕೇಳಬೇಕು ಎಂದು ಒತ್ತಾಯ ಮಾಡುವುದಿಲ್ಲ. ಎಲ್ಲವನ್ನೂ ಸರ್ಕಾರದ ಮುಂದಿಟ್ಟಿದ್ದೇನೆ. ತೀರ್ಮಾನ ಸರ್ಕಾರಕ್ಕೆ ಬಿಟ್ಟಿದ್ದು. ಆದರೆ, ಸತ್ಯಕ್ಕೆ ಮಾತ್ರ ಜಯ ಸಿಕ್ಕಿದೆ ಎಂದು ಜೆಡಿಎಸ್​ ಶಾಸಕ ಸಾ.ರಾ.ಮಹೇಶ್ ತಿಳಿಸಿದರು. (ದಿಗ್ವಿಜಯ ನ್ಯೂಸ್​)

    ಲಿವ್ ಇನ್ ಸಂಗಾತಿ ಕೊಂದು ಶವವನ್ನು ಫ್ರಿಜ್​ನಲ್ಲಿಟ್ಟ ಕೇಸ್​: ಪೊಲೀಸ್​ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು

    ಸ್ಕೂಟರ್​ ಬೆಲೆ 1 ಲಕ್ಷ…. ಫ್ಯಾನ್ಸಿ ನಂಬರ್​ಗೆ​​ ಓನರ್ ಹರಾಜು ಕೂಗಿದ ಹಣದ ಮೊತ್ತ ಕೇಳಿದ್ರೆ ದಂಗಾಗ್ತೀರಾ!

    ಶಿಂಧೆ ಬಣಕ್ಕೆ ಬಿಲ್ಲುಬಾಣ ಉದ್ಧವ್​ಗೆ ಮುಖಭಂಗ: ಬಂಡಾಯ ಗುಂಪೇ ನಿಜವಾದ ಶಿವಸೇನೆ, ಚುನಾವಣಾ ಆಯೋಗ ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts