More

    ಸ್ಕೂಟರ್​ ಬೆಲೆ 1 ಲಕ್ಷ…. ಫ್ಯಾನ್ಸಿ ನಂಬರ್​ಗೆ​​ ಓನರ್ ಹರಾಜು ಕೂಗಿದ ಹಣದ ಮೊತ್ತ ಕೇಳಿದ್ರೆ ದಂಗಾಗ್ತೀರಾ!

    ಕೊಟಖೈ (ಹಿಮಾಚಲ ಪ್ರದೇಶ): ಕೆಲವರಿಗೆ ತಮ್ಮ ವಾಹನಕ್ಕೆ ಇಂಥದ್ದೇ ನಂಬರ್‌ ಬೇಕು ಎನ್ನುವ ಆಸೆ. ಇಂಥ ಫ್ಯಾನ್ಸಿ ನಂಬರ್‌ಗಾಗಿ ಎಷ್ಟು ಬೇಕಾದರೂ ಖರ್ಚು ಮಾಡೋಕೆ ರೆಡಿ ಇರ್ತಾರೆ. ಇಲ್ಲೊಬ್ಬ ಅಸಾಮಿ ತನ್ನ ಸ್ಕೂಟರ್​ಗಾಗಿ ತನ್ನಿಷ್ಟದ ಫ್ಯಾನ್ಸಿ ನಂಬರ್​ ಪಡೆಯಲು ಹರಾಜಿನಲ್ಲಿ ಕೂಗಿದ ಹಣ ಮೊತ್ತ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಂಡಿತ!

    ಕೊಟಖೈ ಮೂಲದ ವ್ಯಕ್ತಿಯೊಬ್ಬ ಸ್ಕೂಟಿಯನ್ನು ಖರೀದಿಸಿದ್ದಾನೆ. ಆದರೆ, ಆತನಿಗೆ HP99-9999 ಫ್ಯಾನ್ಸಿ ನಂಬರ್​ ಪಡೆಯಬೇಕೆಂಬ ಆಸೆಯಿತ್ತು. ಇದಕ್ಕಾಗಿ ಆನ್​ಲೈನ್​ನಲ್ಲಿ ನಡೆಯುವ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ. ಒಟ್ಟು 26 ಮಂದಿ ಈ ಸಂಖ್ಯೆಯನ್ನು ಪಡೆಯುವ ಸ್ಪರ್ಧೆಯಲ್ಲಿದ್ದರು. ಸಾಮಾನ್ಯವಾಗಿ 70 ಸಾವಿರದಿಂದ 1.80 ಲಕ್ಷ ರೂ.ವರೆಗೂ ಹರಾಜಿನಲ್ಲಿ ಪೈಪೋಟಿ ನಡೆಯುತ್ತದೆ. ಆದರೆ, ಇಲ್ಲಿ ತೀವ್ರ ಸ್ಪರ್ಧೆ ಇದ್ದಿದ್ದರಿಂದ 1,12,15,500 ರೂ.ವರೆಗೂ ಫ್ಯಾನ್ಸಿ ನಂಬರ್​ ಹರಾಜಾಗಿದೆ ಎಂದು ಕೊಟಖೈ ನೋಂದಣಿ ಮತ್ತು ಪರವಾನಗಿ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಆದರೆ, ಅಷ್ಟು ಮೊತ್ತದ ಹರಾಜು ಕೂಗಿದ ವ್ಯಕ್ತಿ ಯಾರು ಎಂಬುದರ ಬಗ್ಗೆ ಇನ್ನು ಯಾವುದೇ ಮಾಹಿತಿ ಇಲ್ಲ. ಒಂದು ವೇಳೆ ಆ ವ್ಯಕ್ತಿ ಹಣವನ್ನು ಪಾವತಿಸಲು ಸಾಧ್ಯವಾಗದಿದ್ದರೆ, ಎರಡನೇ ಅತಿ ಹೆಚ್ಚು ಹರಾಜು ಕೂಗಿದವರಿಗೆ ಫ್ಯಾನ್ಸಿ ನಂಬರ್ ಸಿಗಲಿದೆ.

    ಕೇವಲ ಒಂದು ಲಕ್ಷ ರೂಪಾಯಿಯ ಸ್ಕೂಟರ್​ಗೆ ಫ್ಯಾನ್ಸಿ ನಂಬರ್‌ಗಾಗಿ ಒಂದು ಕೋಟಿ ರೂಪಾಯಿಗೂ ಹೆಚ್ಚು ಪಾವತಿಸಲು ಬಿಡ್ ಸಲ್ಲಿಸಿರುವುದು ಅಧಿಕಾರಿಗಳಿಗು ಅಚ್ಚರಿಯನ್ನುಂಟು ಮಾಡಿದೆ. ಬೇರೆಯವರನ್ನು ಸ್ಪರ್ಧೆಯಿಂದ ತಪ್ಪಿಸಲು ಈ ರೀತಿ ಮಾಡಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಬಿಡ್ಡಿಂಗ್ ಮೊತ್ತ ಠೇವಣಿ ಆಗದಿದ್ದರೆ, ದಂಡ ವಿಧಿಸಲು ನಿಯಮ ಬದಲಿಸಬೇಕು ಎಂಬ ಮಾತುಗಳನ್ನಾಡುತ್ತಿದ್ದಾರೆ.

    ಹರಾಜಿನಲ್ಲಿ ಪಾಲ್ಗೊಳ್ಳುವವರು ಶೇ. 30 ರಷ್ಟು ಬಿಡ್ ಮೊತ್ತವನ್ನು ಠೇವಣಿ ಇಡುವ ನಿಬಂಧನೆಯನ್ನು ತರಲು ಪ್ರಯತ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಭಾರಿ ಮೊತ್ತದ ಬಿಡ್ಡಿಂಗ್ ಸಲ್ಲಿಸಿ ಕಣ್ಮರೆಯಾಗುವುದು ತಪ್ಪುತ್ತದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.

    ಹಿಮಾಚಲ ಪ್ರದೇಶದಂತಹ ಗುಡ್ಡಗಾಡು ರಾಜ್ಯಗಳಲ್ಲಿ ಸ್ಕೂಟಿಯಂತಹ ದ್ವಿಚಕ್ರ ವಾಹನ ಬಹಳ ಜನಪ್ರಿಯವಾಗಿದೆ. ಶಿಮ್ಲಾದಂತಹ ಗುಡ್ಡಗಾಡು ಪ್ರದೇಶಗಳಲ್ಲಿ ಕೋವಿಡ್ ನಂತರದ ಅವಧಿಗೆ ಹೋಲಿಸಿದರೆ ಸ್ಕೂಟಿಗಳ ಮಾರಾಟವು ಶೇಕಡಾ 30-40 ರಷ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ. (ಏಜೆನ್ಸೀಸ್​)

    ಲಿವ್ ಇನ್ ಸಂಗಾತಿ ಕೊಂದು ಶವವನ್ನು ಫ್ರಿಜ್​ನಲ್ಲಿಟ್ಟ ಕೇಸ್​: ಪೊಲೀಸ್​ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು

    ಪ್ರೇಮಿಗಳ ದಿನ ರೆಸ್ಟೋರೆಂಟ್​ನಲ್ಲಿ ಬಾಯ್​ಫ್ರೆಂಡ್​ ಜತೆ ಸಿಕ್ಕಿಬಿದ್ದ ಮಗಳು! ನಂತರ ನಡೆದಿದ್ದು ಹೈಡ್ರಾಮ

    ಶಿಂಧೆ ಬಣಕ್ಕೆ ಬಿಲ್ಲುಬಾಣ ಉದ್ಧವ್​ಗೆ ಮುಖಭಂಗ: ಬಂಡಾಯ ಗುಂಪೇ ನಿಜವಾದ ಶಿವಸೇನೆ, ಚುನಾವಣಾ ಆಯೋಗ ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts