More

    ದಂಡ ವಸೂಲಿ ವೇಳೆ ಬೈಕ್ ಸವಾರ ಸಾವು ಪ್ರಕರಣ: ಮಹತ್ವದ ಬದಲಾವಣೆ ಮಾಡಿದ ಪೊಲೀಸ್​ ಆಯುಕ್ತ!

    ಮೈಸೂರು: ಸಂಚಾರಿ ಪೊಲೀಸರ ದಂಡ ವಸೂಲಿ ಸಮಯದಲ್ಲಿ ರಿಂಗ್ ರಸ್ತೆಯಲ್ಲಿ ಬೈಕ್ ಸವಾರ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೇ ಮೈಸೂರು ನಗರ ಪೊಲೀಸ್​ ಆಯುಕ್ತರು ಮಹತ್ವದ ಬದಲಾವಣೆ ಮಾಡಿದ್ದಾರೆ.

    ವಾಹನ ತಪಾಸಣೆ ಮತ್ತು ದಂಡ ವಸೂಲಿಗೆ ಸಮಯ ನಿಗದಿ ಮಾಡಿರುವ ಬಗ್ಗೆ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಇಂದು ಮಾಹಿತಿ ನೀಡಿದರು. ಬೆಳಗ್ಗೆ 10.30 ರಿಂದ ಮಧ್ಯಾಹ್ನ 12.30 ಮತ್ತು ಮಧ್ಯಾಹ್ನ 3 ರಿಂದ ಸಂಜೆ 5ರವರೆಗೆ ಮಾತ್ರ ಫೈನ್ ಹಾಕುತ್ತೇವೆ ಎಂದು ತಿಳಿಸಿದರು.

    ಇದನ್ನೂ ಓದಿರಿ: ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಜಾರಕಿಹೊಳಿ ಸ್ಪರ್ಧೆ: ನಾಮಪತ್ರ ಸಲ್ಲಿಕೆ ವೇಳೆ ಬಾರದಂತೆ ಡಿಕೆಶಿಗೆ ಸೂಚನೆ

    ಕಚೇರಿ ಕೆಲಸಗಳಿಗೆ ಹೋಗಿ ಬರುವವರಿಗೆ ತೊಂದರೆ ತಪ್ಪಿಸಲು ಈ ಸಮಯ ಜಾರಿ ಮಾಡಲಾಗಿದೆ. ದಿನಪೂರ್ತಿ ಫೈನ್ ಹಾಕೋದಕ್ಕೆ ಅವಕಾಶ ಇಲ್ಲ. ಶನಿವಾರ ಮತ್ತು ಭಾನುವಾರ ಹಳೆಯ ಕೇಸ್‌ಗಳನ್ನು ಠಾಣೆಗೆ ಬಂದು ಕಟ್ಟಲು ಅವಕಾಶ ನೀಡುತ್ತೇವೆ ಎಂದರು.

    ಡ್ರಂಕ್ ಆ್ಯಂಡ್ ಡ್ರೈವ್ ಕೇಸ್​ ಮಾತ್ರ ಹಾಕುತ್ತೇವೆ. ಗ್ರಾಮೀಣ ಭಾಗದಿಂದ ಸಿಟಿಗೆ ಜಾಯಿನ್ ಆಗುವ ಜಾಗದಲ್ಲಿ ದಂಡ ಹಾಕುತ್ತೇವೆ. ರಿಂಗ್ ರಸ್ತೆಯಲ್ಲಿ ಅಪಘಾತ ತಡೆಯುವ ಸಲುವಾಗಿ ಜಂಕ್ಷನ್‌ನಲ್ಲಿ ತಪಾಸಣೆ ಮಾಡುತ್ತೇವೆ. ಆಕ್ಸಿಡೆಂಟ್ ಝೋನ್‌ನಲ್ಲಿ ಎಲ್ಲ ರೀತಿಯ ನಿಮಯ ಉಲ್ಲಂಘನೆಯನ್ನೂ ಚೆಕ್ ಮಾಡುತ್ತೇವೆ. ಈ ಎಲ್ಲ ಅಂಶಗಳನ್ನೂ ಒಳಗೊಂಡ ಆದೇಶವನ್ನು ಶೀರ್ಘದಲ್ಲೇ ಹೊರಡಿಸುತ್ತೇನೆಂದು ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮಾಹಿತಿ ನೀಡಿದರು. (ದಿಗ್ವಿಜಯ ನ್ಯೂಸ್​)

    ದಂಡ ವಸೂಲಿ ವೇಳೆ ಬೈಕ್ ಸವಾರ ಸಾವು ಪ್ರಕರಣ: ಪೆಟ್ಟು ತಿಂದ ಪೊಲೀಸರಿಗೆ ಪ್ರಶಂಸನಾ ಪತ್ರ ನೀಡಿದ್ದೇಕೆ?

    ರೊಚ್ಚಿಗೆದ್ದು ಪೊಲೀಸರನ್ನೇ ಥಳಿಸಿದ ಸಾರ್ವಜನಿಕರು; ಅಡ್ಡಗಟ್ಟಿದ ಸಂಚಾರ ಪೊಲೀಸರಿಂದ ತಪ್ಪಿಸಿಕೊಳ್ಳುವಾಗ ಬಿದ್ದ ಬೈಕ್ ಸವಾರ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts