More

    ಮಕ್ಕಳ ಜೀವ ಮತ್ತು ಜೀವನ ಎರಡನ್ನು ತಗೆಯಲು ಸುರೇಶ್ ಕುಮಾರ್ ಮುಂದಾಗಿದ್ದಾರೆ: ಎಚ್​. ವಿಶ್ವನಾಥ್ ವಾಗ್ದಾಳಿ​

    ಮೈಸೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ದಿನಾಂಕ ನಿಗದಿ ಮಾಡಿರುವ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಎಸ್​. ಸುರೇಶ್​ ಕುಮಾರ್​ ವಿರುದ್ಧ ಕಿಡಿಕಾರಿರುವ ಎಚ್​. ವಿಶ್ವನಾಥ್​, ಮಕ್ಕಳ ಜೀವ ಮತ್ತು ಜೀವನ ಎರಡನ್ನು ತಗೆಯಲು ಸಚಿವರು ಮುಂದಾಗಿದ್ದಾರೆಂದು ಜರಿದಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವನಾಥ್​ ಅವರು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದು ಮಗುವನ್ನು ಸಾವಿನ ಕೂಪಕ್ಕೆ ತಳ್ಳಿದಂತೆ. ಇನ್ನು 10- 15 ದಿನಗಳಲ್ಲಿ ಡೆಲ್ಟಾ ಮೂರನೇ ಅಲೆ ಶುರುವಾಗುತ್ತೆ ಅಂತಿದ್ದಾರೆ. ಅದೇ ಸಂದರ್ಭಕ್ಕೆ ಪರೀಕ್ಷೆ ನಿಗದಿಯಾಗಿದೆ. ಮಕ್ಕಳ ಕತೆ ಏನಾಗಬೇಕು? ಕೋವಿಡ್ ಒಂದು ಹೊಸ ಸಮಸ್ಯೆ. ನಾವು ಹೇಳಿದ್ದೇ ನಡೆಯಬೇಕು ಅನ್ನುವ ಇಗೋ ಇರಬಾರದು ಎಂದರು.

    ಇದು ಮಗುವನ್ನು ಮರೆತ ಸರ್ಕಾರ. ಶಿಕ್ಷಣ ಇಲಾಖೆಯಲ್ಲಿ ಪ್ರಧಾನ ಕಾರ್ಯದರ್ಶಿ, ಆಯುಕ್ತರಾಗಿ ಕೆಲಸ ಮಾಡಿದ ಅಧಿಕಾರಿಗಳು ಇದ್ದಾರೆ. ಶಿಕ್ಷಣ ಸಚಿವರಾಗಿ ಕೆಲಸ ಮಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ, ತನ್ವೀರ್ ಸೇಠ್ ಹಾಗೂ ನಾನು ಸೇರಿದಂತೆ ಅನೇಕರು ಇದ್ದೇವೆ. ಪ್ರತಿಪಕ್ಷದವರನ್ನೂ ಸೇರಿದಂತೆ ಯಾರನ್ನೂ ಕರೆದು ಅಭಿಪ್ರಾಯ ಕೇಳಿಲ್ಲ. ಏನೂ ಮಕ್ಕಳನ್ನು ಸಾಯಿಸಬೇಕು ಅಂತ ಮಾಡಿದ್ದೀರಾ? ಶಿಕ್ಷಕರು, ಪೋಷಕರ ಜೀವ ಬಲಿ ತೆಗೆದುಕೊಳ್ಳುವ ಅಧಿಕಾರವನ್ನು ಸರ್ಕಾರಕ್ಕೆ ಯಾರೂ ಕೊಟ್ಟಿಲ್ಲ ಎಂದರು ಹೇಳಿದರು.

    ಶಿಕ್ಷಣ ಸಚಿವರದ್ದು ಇದೆಂಥಾ ಇಗೋ? ಈ ಹಠ ಯಾಕೆ? ಯಾವ ಹಠಕ್ಕೆ ಪರೀಕ್ಷೆ ಮಾಡುತ್ತಿದ್ದೀರಿ? ಕೇಂದ್ರ ಸರ್ಕಾರ ಸಿಬಿಎಸ್‌ಸಿ ಪರೀಕ್ಷೆಯನ್ನೇ ರದ್ದು ಮಾಡಿದೆ. ಇಂತಹ ಸಂದರ್ಭದಲ್ಲಿ ಪರೀಕ್ಷೆ ಮಾಡುವುದು ಬೇಡ ಅಂತ ಹೇಳಿದೆ. ಆದರೆ, ಯಾವ ಪುರುಷಾರ್ಥಕ್ಕೆ ರಾಜ್ಯದಲ್ಲಿ ಪರೀಕ್ಷೆ ಮಾಡಲಾಗುತ್ತಿದೆ. ಜೀವ ಮತ್ತು ಜೀವನ ಎರಡನ್ನು ತಗೆಯಲು ಸುರೇಶ್ ಕುಮಾರ್ ಮುಂದಾಗಿದ್ದಾರೆ ಎಂದರು.

    ಪ್ರಧಾನಿಯವರೇ ಜೀವ ಮುಖ್ಯ ನಂತರ ಜೀವನ ಅಂತ ಹೇಳಿದ್ದಾರೆ. ಆದ್ರೆ, ಸಚಿವ ಸುರೇಶ್ ಕುಮಾರ್ ನನಗೆ ಎಲ್ಲ ಗೊತ್ತು ಎಂಬ ಇಗೋ ಇದೆ. ಇಂತಹ ಇಗೋ ಇರಬಾರದು ಎಂದು ಸಚಿವ ಸುರೇಶ್ ಕುಮಾರ್ ವಿರುದ್ಧ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು. (ದಿಗ್ವಿಜಯ ನ್ಯೂಸ್​)

    ಒಂದೇ ದಿನ ಮೂರು ಡೋಸ್​ ಕೋವಿಡ್​ ಲಸಿಕೆ ಪಡೆದ ಮಹಿಳೆಯ ಗತಿ ಏನಾಯ್ತು ನೋಡಿ!?

    ಓಟಿಪಿಯೂ ಬರದೇ ಶಿಕ್ಷಕಿ ಖಾತೆಯಿಂದ 3.22 ಲಕ್ಷ ರೂ. ಮಾಯ! ಸಿಕ್ಕಿಬಿದ್ದ ಕಳ್ಳನ ಕಂಡು ಕಣ್‌ಕಣ್‌ ಬಿಟ್ಟ ಪೊಲೀಸರು!

    ಸಿಸಿಟಿವಿ ರಿಪೇರಿ ಮಾಡುವವನನ್ನು ಮನೆಗೆ ಕರೆದ ದಂಪತಿಗೆ ಶಾಕ್​: ಏನಾಯ್ತು ಅಂತ ಕೇಳಿದ್ರೆ ಬೆಚ್ಚಿಬೀಳ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts