More

    ಕರೊನಾ ಲಾಕ್‌ಡೌನ್ ನಡುವೆ ಮಾರಿ ಹಬ್ಬ: ತಡೆಯಲೆತ್ನಿಸಿದ ಅಂಗನವಾಡಿ ಕಾರ್ಯಕರ್ತೆ ಮನೆಗೆ ನುಗ್ಗಿ ಹಲ್ಲೆ

    ಮೈಸೂರು: ಮಹಾಮಾರಿ ಕರೊನಾ ವೈರಸ್​ ಇಡೀ ದೇಶಾದ್ಯಂತ ಸೃಷ್ಟಿಸಿರುವ ಮೃತ್ಯುಕೂಪವನ್ನು ನೋಡಿಯೂ ಸಹ ಇನ್ನು ಅನೇಕರಿಗೆ ತಿಳುವಳಿಕೆ ಬಂದಿಲ್ಲ. ಕರೊನಾ ಲಾಕ್‌ಡೌನ್ ನಡುವೆ ಮಾರಿ ಹಬ್ಬ ಮಾಡಿದ್ದಲ್ಲದೆ, ತಡೆಯಲು ಯತ್ನಿಸಿದ ಅಂಗನವಾಡಿ ಕಾರ್ಯಕರ್ತೆಯ ಮನೆಗೆ ನುಗ್ಗಿ ಹಲ್ಲೆ ಮಾಡಿರುವ ಅಮಾನವೀಯ ಘಟನೆ ಹುಣಸೂರು ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.

    ಹಲ್ಲೆಯಿಂದಾಗಿ ಅಂಗನವಾಡಿ ಕಾರ್ಯಕರ್ತೆ ಮಂಗಳಗೌರಿ, ಅಕ್ಕ ಸರೋಜಮ್ಮ ಮತ್ತು ಪುತ್ರ ಶರತ್ ಅವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಮಂಗಳವಾರ ಗ್ರಾಮದೇವತೆಯ ಹಬ್ಬ ಇತ್ತು. ದೇವಾಲಯದ ಮುಂಭಾಗ ಮೇಕೆ ಬಲಿ ನೀಡುವ ಮೂಲಕ ಹಬ್ಬ ಆಚರಣೆ ಮಾಡಲಾಗುತ್ತಿದೆ. ಆದರೆ, ದೇಶದೆಲ್ಲಡೆ ಕರೊನಾ ವೈರಸ್ ವೇಗವಾಗಿ ಹರಡುತ್ತಿದೆ. ಹೀಗಾಗಿ ಗುಂಪುಗೂಡಬೇಡಿ ಎಂದು ಅಂಗನವಾಡಿ ಕಾರ್ಯಕರ್ತೆ ಮನವಿ ಮಾಡಿದರೂ, ಸಿಟ್ಟಿಗೆದ್ದ ಗ್ರಾಮದ ಕೆಲ ಅನಾಗರಿಕರು ಕಾರ್ಯಕರ್ತೆಯ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ಸದ್ಯ ಗಾಯಾಳುಗಳು ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಒಂದು ವರ್ಷದ ಹಬ್ಬ ಮಾಡದಿದ್ದರೆ ಯಾರು ಕೂಡ ಸಾಯುವುದಿಲ್ಲ. ಆದರೆ, ಕರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಹಬ್ಬದಿಂದ ಆಗುವ ಅನಾಹುತದಿಂದ ಎಷ್ಟೋ ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುತ್ತವೆ ಎಂಬ ಪರಿಜ್ಞಾನವು ಸಹ ಕೆಲವರಿಗೆ ಇಲ್ಲದಿರುವುದು ವಿಪರ್ಯಾಸವೇ ಸರಿ. (ದಿಗ್ವಿಜಯ ನ್ಯೂಸ್​)

    ಪತಿಯೂ ಬೇಕು ಆದ್ರೆ ಮನಸ್ಸು ಬೇರೆಯವರ ಜತೆ ಮಲಗಲು ಬಯಸುತ್ತಿದೆ ಏನು ಮಾಡಲಿ?

    ಗೋಮಾತೆಯ ಅಪ್ಪುಗೆಯೇ ಚಿಕಿತ್ಸೆ: ತಾಸಿಗೆ 15 ಸಾವಿರ ರೂ. ಕೊಟ್ಟು ಹಸು ತಬ್ಬಿಕೊಳ್ಳುತ್ತಿರೋ ಅಮೆರಿಕನ್ನರು

    ವಿದ್ಯಾರ್ಥಿನಿಯರಿಗೆ ಸಿನಿಮಾ ಆಫರ್​​ ಜತೆಗೆ ಆನ್​ಲೈನ್​ ಕ್ಲಾಸ್​ನಲ್ಲಿ ಅರೆಬೆತ್ತಲಾಗಿದ್ದ ಶಿಕ್ಷಕ ಅಂದರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts