More

    ಅನ್ನ, ನೀರಿಲ್ಲದೇ ಸುಮಾರು 76 ವರ್ಷ ಬದುಕಿದ್ದ ನಿಗೂಢ ಯೋಗಿ ನಿಧನ

    ಅಹಮದಾಬಾದ್​: ನೀರು ಮತ್ತು ಆಹಾರವಿಲ್ಲದೇ ಸುಮಾರು 76 ವರ್ಷ ಬದುಕಿದ್ದೆ ಎಂದು ಹೇಳಿಕೊಂಡಿದ್ದ ಪ್ರಹ್ಲಾದ್​ ಜಾನಿ ಅಲಿಯಾಸ್​ ಚುನ್ರಿವಾಲಾ ಮಾತಾಜಿ ಹೆಸರಿನ ಯೋಗಿಯೊಬ್ಬರು ಗುಜರಾತ್​ನ ಗಾಂಧಿನಗರ ಜಿಲ್ಲೆಯಲ್ಲಿಂದು ಸಾವಿಗೀಡಾಗಿರುವುದಾಗಿ ಅವರ ಶಿಷ್ಯರೊಬ್ಬರು ತಿಳಿಸಿದ್ದಾರೆ.

    ಇದನ್ನೂ ಓದಿ: ಫೋಟೋದಲ್ಲಿರೋ ಬಾಲಕಿ ಬಾಲಿವುಡ್​ನ ಬೋಲ್ಡ್​ ಬ್ಯೂಟಿ: ಈಕೆಗಿದೆ ಕರ್ನಾಟಕದ ನಂಟು!

    ಪ್ರಹ್ಲಾದ್​ ಜಾನಿ ಅವರಿಗೆ 90 ವರ್ಷ ವಯಸ್ಸಾಗಿತ್ತು. ಗಾಂಧಿ ನಗರದ ಸ್ವಗ್ರಾಮ ಚರಾದದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಇವರು ಗುಜರಾತಿನಲ್ಲಿ ತುಂಬಾ ಅನುಯಾಯಿಗಳನ್ನು ಹೊಂದಿದ್ದರು.

    ಕೊನೆಯ ಕ್ಷಣಗಳನ್ನು ಸ್ವಗ್ರಾಮದಲ್ಲಿ ಕಳೆಯಬೇಕೆಂಬ ಇಚ್ಛೆಯಿಂದ ಇಷ್ಟು ದಿನ ಅವರು ಸ್ವಗ್ರಾಮದಲ್ಲೇ ನೆಲೆಸಿದ್ದರು. ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಪ್ರಹ್ಲಾದ್​ ಜಾನಿ ಅವರ ಮೃತದೇಹವನ್ನು ಬನಸ್ಕಂತ ಜಿಲ್ಲೆಯ ಅಂಬಾಜಿ ದೇವಸ್ಥಾನ ಸಮೀಪದ ಆಶ್ರಮಕ್ಕೆ ಕೊಡೊಯ್ಯಲಾಗಿದ್ದು, ಸಕಲ ಗೌರವ ಸಲ್ಲಿಸಲು ಎರಡು ದಿನಗಳವರೆಗೆ ಆಶ್ರಮದಲ್ಲೇ ಇಟ್ಟುಕೊಳ್ಳಲಿದ್ದಾರೆ. ಗುರುವಾರ ಆಶ್ರಮದಲ್ಲೇ ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಿ ಸಮಾಧಿ ಮಾಡಲಿದ್ದೇವೆ ಎಂದು ಅವರ ಶಿಷ್ಯಂದಿರು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದಾರೆ.

    ಇದನ್ನೂ ಓದಿ: ರಾಜ್ಯ ಪೊಲೀಸ್​ ಶ್ವಾನದಳಕ್ಕೆ ಇನ್ನಷ್ಟು ಬಲ; ಶೀಘ್ರವೇ 50 ಹೊಸ ಶ್ವಾನಗಳ ಸೇರ್ಪಡೆ

    ಪ್ರಹ್ಲಾದ್​ ಜಾನಿ ಅವರು ಓರ್ವ ಧರ್ಮನಿಷ್ಠನಾಗಿ ಅಂಬಾ ದೇವತೆಯನ್ನು ಹೆಚ್ಚು ನಂಬುತ್ತಿದ್ದರು. ಹೀಗಾಗಿಯೇ ಅವರು ಮಹಿಳೆಯರ ರೀತಿ ಕೆಂಪು ಸೀರೆಯನ್ನು ಉಡುತ್ತಿದ್ದರು. ಇದರಿಂದಲೇ ಚುನ್ರಿವಾಲಾ ಮಾತಾಜಿ ಎಂದು ಪ್ರಸಿದ್ಧಿಯನ್ನು ಪಡೆದಿದ್ದರು.

    ಆಧ್ಯಾತ್ಮದಲ್ಲಿ ಹೆಚ್ಚು ಆಸಕ್ತಿ ಇದ್ದುದ್ದರಿಂದ ಚಿಕ್ಕ ವಯಸ್ಸಿನಲ್ಲಿಯೇ ಪ್ರಹ್ಲಾದ್​ ಜಾನಿ ಮನೆ ಬಿಟ್ಟು ಹೋಗಿ ಭಕ್ತಿ-ಜ್ಞಾನದಲ್ಲಿ ಹೆಚ್ಚು ತೊಡಗಿಸಿಕೊಂಡರು. ಹಿಂದೊಮ್ಮೆ ಆಹಾರ ಮತ್ತು ನೀರು ಇಲ್ಲದೇ ನಾನು ಬದುಕ್ಕಿದ್ದೇ ಎಂದು ಹೇಳಿಕೊಂಡಿದ್ದರು. ದೇವರು ನನ್ನಲ್ಲಿ ನಿರಂತರವಾಗಿ ಉಳಿದಿರುವುದರಿಂದ ನನಗೆ ಆಹಾರವಾಗಲಿ ಅಥವಾ ನೀರಾಗಲಿ ಬೇಕಾಗಿಲ್ಲ ಎನ್ನುತ್ತಿದ್ದರು. 14ನೇ ವಯಸ್ಸಿನಲ್ಲೇ ಆಹಾರ ಮತ್ತು ನೀರು ಸೇವಿಸುವುದನ್ನು ಬಿಟ್ಟಿದ್ದರು ಎಂದು ಶಿಷ್ಯರು ಸಹ ಹೇಳಿದ್ದಾರೆ.

    ಇದನ್ನೂ ಓದಿ: ಸಾಂಕ್ರಾಮಿಕ ರೋಗ ತಡೆ ಸವಾಲು; ಕರೊನಾದೊಂದಿಗೆ ಡೆಂಘೆ, ಚಿಕೂನ್‌ಗುನ್ಯಾ ಗುಮ್ಮ ಆರೋಗ್ಯ ಇಲಾಖೆ ಮುನ್ನಚ್ಚರಿಕೆ

    2003 ಹಾಗೂ 2010ರಲ್ಲಿ ವಿಜ್ಞಾನಿಗಳಿಂದಲೂ ಸಹ ಪರೀಕ್ಷೆ ನಡೆದಿತ್ತು. ಹಸಿವು ಮತ್ತು ನೀರಿನ ನಿರ್ಬಂಧಗಳಿಗೆ ಹೊಂದಿಕೊಳ್ಳುವ ಕೆಲವು ತೀವ್ರ ಸ್ವರೂಪವನ್ನು ಜಾನಿ ಅವರು ಹೊಂದಿದ್ದರು ಎಂದು ಹೇಳಿಕೆ ನೀಡಿದ್ದರು. (ಏಜೆನ್ಸೀಸ್​)

    ರೋಗ ಲಕ್ಷಣ ಇಲ್ಲದಿದ್ದರೂ ಕರೊನಾ ವಾರಿಯರ್​ಗೆ ಸೋಂಕು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts