More

    ಸಾಂಕ್ರಾಮಿಕ ರೋಗ ತಡೆ ಸವಾಲು; ಕರೊನಾದೊಂದಿಗೆ ಡೆಂಘೆ, ಚಿಕೂನ್‌ಗುನ್ಯಾ ಗುಮ್ಮ ಆರೋಗ್ಯ ಇಲಾಖೆ ಮುನ್ನಚ್ಚರಿಕೆ

    ಬೆಂ.ಗ್ರಾಮಾಂತರ: ಗ್ರಾಮಾಂತರ ಜಿಲ್ಲೆಯಲ್ಲಿ ಕರೊನಾದೊಂದಿಗೆ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುತ್ತಿವೆ. ಮಳೆಗಾಲ ಆರಂಭದ ದಿನಗಳಲ್ಲೇ ಡೆಂಘೆ, ಚಿಕೂನ್‌ಗುನ್ಯಾದಂತ ರೋಗಗಳ ಭೀತಿ ಆವರಿಸಿದೆ.

    ಹೊಸಕೋಟೆಯಲ್ಲಿ ಡೆಂಘೆ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಜಿಲ್ಲಾ ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗ ತಡೆಗೆ ಮುಂಜಾಗ್ರತಾ ಕ್ರಮ ಕೈಕೊಂಡಿದೆ.

    ಜಿಲ್ಲೆಯಲ್ಲಿ ಈಗಾಗಲೇ 4 ಕರೊನಾ ಸಕ್ರಿಯ ಪ್ರಕರಣಗಳಿದ್ದು, ಸೋಂಕಿತ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಕರೊನಾ ಕರಿನೆರಳಿನಲ್ಲಿರುವ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳು ದಾಂಗುಡಿ ಇಡಲು ಮುಂದಾಗಿವೆ. ಸಾರ್ವಜನಿಕರು ಎಷ್ಟು ಮುಂಜಾಗ್ರತೆ ವಹಿಸುತ್ತಾರೋ ಅಷ್ಟು ರೋಗ ನಿಯಂತ್ರಣ ಸಾಧ್ಯವಾಗಲಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಹೊಸಕೋಟೆ ತಾಲೂಕು ಕೆ.ಸತ್ಯವಾರದ 14 ವರ್ಷದ ಬಾಲಕಿಯೊಬ್ಬಳು ಕಳೆದ ವರ್ಷ ಡೆಂಘೆಗೆ ಬಲಿಯಾಗಿದ್ದರಿಂದ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ ಅಧಿಕಾರಿಗಳು ಮುಂಜಾಗ್ರತಾ ಕ್ರಮಕೈಗೊಂಡಿದ್ದಾರೆ.

    ಅಧಿಕಾರಿಗಳಿಗೆ ಮಾರ್ಗಸೂಚಿ*ಸಾಂಕ್ರಾಮಿಕ ರೋಗಗಳ ಬಗ್ಗೆ ಕಾಲಕಾಲಕ್ಕೆ ನೀಡಲಾಗುವ ಮಾರ್ಗಸೂಚಿ ಪಾಲಿಸಬೇಕು. *ತಾಲೂಕು ಮಟ್ಟದಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳು ಅಂತರ ಇಲಾಖೆ ಸಭೆ ಆಯೋಜಿಸಬೇಕು. *ಮಲೇರಿಯಾ, ಡೆಂಘೆ ಮತ್ತು ಚಿಕೂನ್‌ಗುನ್ಯಾ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು*ವೈದ್ಯಾಧಿಕಾರಿಗಳು ಮತ್ತು ತಾಲೂಕು ಆರೋಗ್ಯಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಕಡ್ಡಾಯವಾಗಿ ಲಾರ್ವಾ ಸಮೀಕ್ಷೆ ನಡೆಸಬೇಕು*ಜ್ವರ ಪ್ರಕರಣ ಕಂಡುಬಂದರೆ ರಕ್ತದ ಮಾದರಿ ಸಂಗ್ರಹಿಸಬೇಕು*ಶಂಕಿತ ರೋಗಲಕ್ಷಣ ಕಂಡುಬಂದರೆ ಕೂಡಲೇ ಪ್ರಯೋಗಾಲಯಕ್ಕೆ ಕಳುಹಿಸಬೇಕು.

    ಅಗತ್ಯ ಕ್ರಮಗಳೇನು?: *ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಿಯಂತ್ರಿಸಬೇಕು*ಘನ ತ್ಯಾಜ್ಯ ವಸು ್ತಮತ್ತು ನೀರು ಶೇಖರಣೆಗೊಳ್ಳುವ ಅನುಪಯುಕ್ತ ವಸ್ತುಗಳ ವಿಲೇವಾರಿ* ರಸ್ತೆ ಗುಂಡಿ ಮುಚ್ಚುವ ಮೂಲಕ ನೀರು ನಿಲ್ಲದಂತೆ ಕ್ರಮಕೈಗೊಳ್ಳಬೇಕು*ಕುಡಿವ ನೀರು ಸರಬರಾಜಿಗೆ ಸೂಕ್ತ ಪ್ರಮಾಣದಲ್ಲಿ ಕ್ಲೋರಿನೇಶನ್ ಮಾಡಿಸಬೇಕು*ಸಾಂಕ್ರಾಮಿಕ ರೋಗಗಳ ನಿಯಂತ್ರಣದ ಜಾಗೃತಿ ಮೂಡಿಸಬೇಕು.

    ಸ್ವಚ್ಛತೆಯೇ ಮದ್ದುಸಿಮೆಂಟ್ ತೊಟ್ಟಿಗಳು, ತೆಂಗಿನ ಚಿಪ್ಪುಗಳು, ಹಳೆಯ ಟೈರ್‌ಗಳು, ಮಡಕೆಗಳು, ಖಾಲಿಡಬ್ಬ, ಡ್ರಂ ಬ್ಯಾರಲ್ ಸೇರಿ ಎಲ್ಲೆಲ್ಲಿ ನೀರು ನಿಲ್ಲಬಹುದೋ ಅಲ್ಲೆಲ್ಲ ಸೊಳ್ಳೆ ಹೇರಳವಾಗಿ ಉತ್ಪತ್ತಿಯಾಗುತ್ತವೆ. ಆದ್ದರಿಂದ ಸಾಂಕ್ರಾಮಿಕ ರೋಗ ತಡೆಗೆ ಸ್ವಚ್ಛತೆಯೇ ಮದ್ದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುಳಾದೇವಿ ತಿಳಿಸಿದ್ದಾರೆ.

    ಡೆಂಘೆ ಶಂಕಿತ ಪ್ರಕರಣವೊಂದು ಪತ್ತೆಯಾಗಿದ್ದು, ಪರೀಕ್ಷೆಗೆ ಕಳುಹಿಸಲಾಗಿದೆ. ಕರೊನಾ ನಿಯಂತ್ರಣಕ್ಕೆ ಎಲ್ಲ ಕಡೆ ಕ್ರಿಮಿನಾಶಕ ಸಿಂಪಡನೆ, ಸ್ವಚ್ಛತೆ ಅರಿವು ಮೂಡಿಸುತ್ತಿರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ಸಾಂಕ್ರಾಮಿಕ ರೋಗದ ಆತಂಕವಿಲ್ಲ.

    ಡಾ.ಮಂಜುನಾಥ್, ಹೊಸಕೋಟೆ ತಾಲೂಕು ಆರೋಗ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts